ಬೆಂಗಳೂರು: ಬಿಬಿಎಂಪಿ ಕೊರೆಸಿದ ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಲ್ಲ, ಬಿಬಿಎಂಪಿ ಆರ್‌ಓ ಪ್ಲಾಂಟ್‌ಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಖುದ್ದು ಬಿಬಿಎಂಪಿ ನಡೆಸಿದ ಸಮೀಕ್ಷಾ ವರದಿಯೇ ಸ್ಪಷ್ಟಪಡಿಸಿದೆ. ಬೋರ್‌ವೆಲ್
ಎಲ್ಲರಿಗೂ ಯೋಗ್ಯವಾದ ಕುಡಿಯುವ ನೀರು ಸಿಗಲಿ ಎಂದು ಪಾಲಿಕೆ ವ್ಯಾಪ್ತಿಯಲ್ಲಿ ಕಡಿಮೆ ಬೆಲೆಗೆ ಕುಡಿಯೋ ನೀರಿನ ಘಟಕಗಳನ್ನು ತೆರೆಯಲಾಗಿತ್ತು. ಆದರೆ ಆರ್‌ಒ ಪ್ಲಾಂಟ್ಗಳ ನೀರಿನಲ್ಲಯೇ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಆತಂಕಕರಾರಿ. ಅಷ್ಟೇ ಅಲ್ಲ ಇನ್ನೂ ಬೋರ್ ವೆಲ್ ಗಳಲ್ಲಿ ಕೂಡ ಬ್ಯಾಕ್ಟೀರಿಯಾ ಅಂಶ ಪತ್ತೆ ಆಗಿರುವ ಮಾಹಿತಿಯನ್ನು ಖುದ್ದು ಬಿಬಿಎಂಪಿ ವರದಿಯಲ್ಲಿತಿಳಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ “ಹಮಾರೆ ಬಾರಹ” ಸಿನಿಮಾ ಪ್ರದರ್ಶನಕ್ಕೆ ನಿಷೇಧ
ಬೆಂಗಳೂರು ನಗರದ 217 ಕೊಳವೆ ಬಾವಿಗಳ ನೀರನ್ನುಹಾಗೂ 1218 ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೂ ಪರೀಕ್ಷೆ ಗೆ ಒಳಪಡಿಸಲಾಗಿತ್ತು. ಪರೀಕ್ಷೆ ನಡೆಸಿದ ಬಯೋಲಾಜಿಕಲ್ ಸಂಸ್ಥೆ ಬಿಬಿಎಂಪಿಗೆ ಈಗ ವರದಿ ನೀಡಿದೆ.
ವರದಿಯಲ್ಲಿ ನಗರದ ಕೆಲ ಭಾಗಗಳಲ್ಲಿ ಬೋರ್ ವೆಲ್ ನೀರು ಶುದ್ಧ ಕುಡಿಯುವ ನೀರಿನ ಘಟಕದ ನೀರು ಕುಡಿಯಲು ಯೋಗ್ಯವಲ್ಲಅಂತ ರಿಪೋರ್ಟ್ ನೀಡಿದೆ. ಬೊಮ್ಮನಹಳ್ಳಿ ವಲಯ, ಬೆಂಗಳೂರು ದಕ್ಷಿಣ ವಲಯ, ಮಹಾದೇವಪುರ ವಲಯಗಳಲ್ಲಿನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸದ್ಯ ಬ್ಯಾಕ್ಟೀರಿಯಾ ಪತ್ತೆಯಾದ ಆರ್ಒ ಪ್ಲಾಂಟ್ ಗಳು ಹಾಗೂ ಬೋರ್ ವೆಲ್ ಗಳ ನೀರು ಪೂರೈಕೆ ಸ್ಥಗಿತ ಮಾಡಲಾಗಿದೆ..ಇಷ್ಟೇ ಅಲ್ಲ ಇನ್ನೂ 805 ಕಡೆ ನೀರಿನ ವರದಿ ಬರಬೇಕಿದ್ದು, ಯೋಗ್ಯವಲ್ಲ ಎಂದು ವರದಿ ಬಂದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನಲಾಗಿದೆ. ಹೀಗಾಗಿ ಉಳಿದ ಘಟಕಗಳನ್ನ ಪರೀಕ್ಷೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಪಾಲಿಕೆ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.
ಇದನ್ನೂ ನೋಡಿ: ಕಾರ್ಮಿಕರಿಗೆ ‘ಬಂಡವಾಳ’ದ ಪರಿಕಲ್ಪನೆಗಳು, ಪ್ರಕ್ರಿಯೆಗಳು ಹೇಗೆ ಬೇರೆಯವರಿಗಿಂತ ಸುಲಭವಾಗಿ ಅರ್ಥವಾಗುತ್ತದೆ