ಹುಬ್ಬಳ್ಳಿ: ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಈಚೆಗೆ ಸುರಿದ ಮಳೆ ನೀರು ಕೋಳಿ ಫಾರ್ಮ್‌ಗೆ ನುಗ್ಗಿ 3 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಗ್ರಾಮದ ಕರಬಸಪ್ಪ ಉಳಾಗಡ್ಡಿ ಎಂಬುವವರಿಗೆ ಸೇರಿದ ಕೋಳಿಗಳು ನೀರು ಪಾಲು ಆಗಿವೆ.
ಕರಬಸಪ್ಪ ಎಂಬುವವರು ಫಾರ್ಮ್‌ನಲ್ಲಿ 4.500 ಸಾವಿರ ಕೋಳಿ ಮರಿಗಳನ್ನು ಸಾಕಾಣಿಕೆ ಮಾಡಿದ್ದರು. ಅದರಲ್ಲಿ ಮೂರು ಸಾವಿರ ಕೋಳಿ ಮೃತಪಟ್ಟು ಅಂದಾಜು ₹ 2 ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದರು.
ಇದನ್ನೂ ಓದಿ: ಅದಿರುಗಳ್ಳ ಸೈಲ್ ಹಾಗು ಇತರರಿಗೆ ಗರಿಷ್ಟ 42 ವರ್ಷ ಜೈಲು – ಸಿಪಿಐಎಂ ಸ್ವಾಗತ
ಮೇಲೆ ಇದ್ದ ಕೆರೆ ನೀರು ಈಚೆಗೆ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಹರಿದಿದೆ. ಅಲ್ಲದೆ ಹೊಲಗದ್ದೆಗಳಲ್ಲಿಯ ನೀರು ಸೇರಿಕೊಂಡು ಶೆಡ್‌ನಲ್ಲಿ 1 ಅಡಿ ನೀರು ನಿಂತಿದ್ದರಿಂದ ಕೋಳಿಗಳು ಮುಳಗಿ ಮೃತಪಟ್ಟಿವೆ. ಇನ್ನೂ ಮರಿಗಳಾಗಿದ್ದ ಇವು ಹೊರಬಾರದೇ ಸತ್ತಿವೆ.
ಫಾರ್ಮ್ ಅನ್ನು ಎತ್ತರದಲ್ಲಿ ಕಟ್ಟಿದ್ದೇವೆ. ಸಾಮಾನ್ಯ ಮಳೆ ಬಂದಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ. ವಿಪರೀತ ಮಳೆಯಿಂದ ನೀರು ನುಗ್ಗಿ ಕೋಳಿ ಮೃತಪಟ್ಟಿವೆ. ಫಾರ್ಮ್ ನಂಬಿ ಜೀವನ ಸಾಗಿಸುತ್ತಿದೆ. ಮಳೆ ಬದುಕನ್ನೇ ಹಾಳು ಮಾಡಿದೆ. ಸಂಬಂಧಿಸಿದ ಇಲಾಖೆಯವರು ಪರಿಹಾರ ನೀಡಬೇಕು’ ಎಂದು ಫಾರ್ಮ್ ಮಾಲೀಕ ಕರಬಸಪ್ಪ ಉಳಾಗಡ್ಡಿ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: LIVE : ಜಾತಿ ಮತ್ತು ಲಿಂಗತ್ವ | ದು.ಸರಸ್ವತಿ ಅನುವಾದಿತ ಪುಸ್ತಕ ಬಿಡುಗಡೆ