ಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ

ಬೆಂಗಳೂರು:ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ತರಬೇತಿ ಕೇಂದ್ರಗಳನ್ನು ಧಾರವಾಡ ಮತ್ತು ಮೈಸೂರಿನಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಾರ್ಮಿಕ

ಜೂನ್‌ 20 ರಂದು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ‘ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ’ಯು ಆಕ್ಷೇಪಣಾ ಪತ್ರವನ್ನು ನೀಡಿದೆ. ಆಕ್ಷೇಪಣಾ ಪತ್ರದಲ್ಲಿ ಏನಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ತರಬೇತಿ ಕೇಂದ್ರಗಳನ್ನು ಧಾರವಾಡ ಮತ್ತು ಮೈಸೂರಿನಲ್ಲಿ ಸ್ಥಾಪಿಸುವ ಉದ್ದೇಶದೊಂದಿಗೆ ಸಂಬಂಧಪಟ್ಟವರಿಂದ ಅಭಿಪ್ರಾಯ/ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಕರೆಯಲಾಗಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಕಟ್ಟಡ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಸಶಕ್ತ ಕಾರ್ಮಿಕ ವರ್ಗವನ್ನು ಸೃಜಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು ಉತ್ತಮವಾದ ಯೋಜನೆ ಎಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ, ಬದಲಾಗಿ ಇದೊಂದು ಸ್ವಾಗತಾರ್ಹ ನಡೆ. ಆದರೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಘನ ಉದ್ದೇಶದಿಂದ ರೂಪಿಸಲಾದ 1996 ಕಾನೂನು ಮತ್ತು ಸದರಿ ಕಾನೂನು ಅನುಸರಿಸಿ ರಾಜ್ಯದಲ್ಲಿ ಸ್ಥಾಪಿಸಲಾದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಉದ್ದೇಶವೂ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆಯಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದೇ ಆಗಿದೆ. ಇದೇ ಕಲ್ಯಾಣ ಮಂಡಳಿಯ ಪ್ರಧಾನ ಆದ್ಯತೆಯಾಗಬೇಕು ಕೂಡ.

ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಇಲಾಖೆಯಿಂದ ಮಾಡಬೇಕಾದ ಯೋಜನೆಗಳನ್ನು ಕಟ್ಟಡ ಹೊರಟಿರುವುದು ಸರಿಯಾದ ನಿರ್ಧಾರವಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿಯಿAದ ಮಾಡಲು ಈ ಹಿನ್ನೆಲೆಯಲ್ಲಿ ಕಲ್ಯಾಣ ಮಂಡಳಿಯ ಪ್ರಸ್ತಾಪಿತ ಯೋಜನೆಗೆ ಕಟ್ಟಡ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯ ಎಲ್ಲ ಭಾಗಿದಾರ ಸಂಘಟನೆಗಳು ಒಕ್ಕೊರಲ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದೇವೆ.

ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯ ಕಾರ್ಮಿಕ

ನಮ್ಮ ಆಕ್ಷೇಪಣೆಗೆ ಈ ಕೆಳಗಿನ ಅಂಶಗಳನ್ನು ಗಮನಿಸಬೇಕೆಂದು ಕೋರುತ್ತೇವೆ

1. ಕೌಶಲ್ಯ ಅಭಿವೃದ್ಧಿ ಮಾಡಬೇಕೆಂಬ ಚಿಂತನೆ ಸ್ವಾಗತಾರ್ಹವಾದರೂ, ಆದರೆ ಎರಡು Centres of Excellence ಸೃಷ್ಟಿಯಿಂದ ಅದು ಉದ್ದೇಶಿತ ಯೋಜನೆಯಿಂದ ಸಾಧ್ಯವಿಲ್ಲ.

2. ರಾಜ್ಯದಲ್ಲಿ ಒಟ್ಟಾರೆ ಕೌಶಲ್ಯಭರಿತ ವರ್ಕ್ಫೋರ್ಸ್ ನ ಅಗತ್ಯ ಎಷ್ಟು? ಯಾವ ಕ್ಷೇತ್ರಗಳಲ್ಲಿ ಅಗತ್ಯವಿದೆ? ಎಂಬುದರ ಕುರಿತು ಡೇಟಾ ಆಧರಿಸಿ ಅಂದಾಜಿಸಲಾಗಿದೆಯೇ?

3. ಈ ಬೇಡಿಕೆಯನ್ನು ಪೂರೈಸಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸ್ಥಾಪಿಸುವ ಈ ಎರಡು ಸಂಸ್ಥೆಗಳಿಂದ ಹೇಗೆ ಸಾಧ್ಯ?

4. ಈ ಯೋಜನೆಗೆ ತಗುಲುವ ಅಂದಾಜು ಬಜೆಟ್ ಎಷ್ಟು?

5. ಇಷ್ಟಕ್ಕೂ ಕಟ್ಟಡ ಕಾರ್ಮಿಕ ಮಂಡಳಿಯು ತನ್ನ ಕಾರ್ಮಿಕರ ಕಲ್ಯಾಣದ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಆದರೆ ಇದಕ್ಕೆ ಹೊರತಾದ ಕಾರ್ಯಕ್ರಮಗಳನ್ನೇ ರೂಪಿಸಲಾಗುತ್ತಿದೆ. ಈಗಾಗಲೇ ಜಾರಿಯಲ್ಲಿರುವ ಕಲ್ಯಾಣ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನ ಆಗದಿರುವ ಕುರಿತಾಗಿ ನಾವು ನಿರಂತರವಾಗಿ ಕಲ್ಯಾಣ ಮಂಡಳಿಯ ಗಮನ ಸೆಳೆದಿದ್ದೇವೆ.

6. ಕರ್ನಾಟಕದಲ್ಲಿ ಈಗಾಗಲೇ ಕಾರ್ಮಿಕ ಇಲಾಖೆ ಅಡಿಯಲ್ಲಿ ಐಟಿಐ, ಡಿಪ್ಲೋಮ ಸಂಸ್ಥೆಗಳು ನೂರಾರು ಸಂಖ್ಯೆಯಲ್ಲಿವೆ. ಇವುಗಳ ಮೂಲಕ ಕೌಶಲ್ಯ ತರಬೇತಿಯನ್ನು ಕೊಡಲು ಬಳಸಬಹುದಲ್ಲವೇ?

7. ಕಾರ್ಮಿಕ ಇಲಾಖೆ ರಾಜ್ಯದ ಅಗಾದ ಕೌಶಲ್ಯ ಬೆಳವಣಿಗೆ ಅಗತ್ಯವನ್ನು ಪರಿಗಣಿಸಿ ನೂರಾರು ಸಂಖ್ಯೆಯಲ್ಲಿರುವ ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಬೇಕು.

8. ಐಟಿಐ ಮತ್ತು ಡಿಪ್ಲಮೋ ಸಂಸ್ಥೆಗಳನ್ನು ಪೂರ್ಣವಾಗಿ ಉನ್ನತೀಕರಿಸಿ, ಆಧುನೀಕರಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ಕೌಶಲಯುಕ್ತ ಕಾರ್ಮಿಕ ಶಕ್ತಿ ಸೃಜನೆಯಾಗುತ್ತದೆ. ಅಸಲಿಗೆ ತುರ್ತಾಗಿ ರಾಜ್ಯಕ್ಕೆ ಬೇಕಾಗಿರುವುದು ಇಂತಹ ಕಾರ್ಯಾಚರಣೆ.

9. ಕಲ್ಯಾಣ ಮಂಡಳಿ ಪಕ್ಕದಲ್ಲಿರುವ ಸಾಕಷ್ಟು ದೊಡ್ಡದಾದ ಐಟಿಐ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಿ ಒಂದು ಮಾದರಿಯನ್ನು ನಿರ್ಮಿಸಬಹುದು.

10. ಮಾದರಿ ನಿರ್ಮಾಣದ ನಂತರ, ಇದರ ಅನುಭವದ ಆಧಾರದಲ್ಲಿ ಕಾರ್ಮಿಕ ಇಲಾಖೆ ಉಳಿದ ಐಟಿಐಗಳನ್ನು ಅಭಿವೃದ್ಧಿ ಮಾಡಲು ಯೋಜಿಸಬಹುದು. ಬದಲಾಗಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಅಲ್ಲ.

11. ಸರ್ಕಾರದ ಕಾನ್ಸೆಪ್ಟ್ ನೋಟ್‌ನಲ್ಲಿ ಪ್ರಸ್ತಾಪಿಸಿರುವ ಬಹುತೇಕ ಅಂಶಗಳು ಕಟ್ಟಡ ಕಾರ್ಮಿಕರ ನೇರ ಕಾರ್ಯಾಚರಣೆಗೆ ಸಂಬಂಧ ಇಲ್ಲದವುಗಳು. ಜತೆಗೆ ಕಾರ್ಮಿಕ ಇಲಾಖೆ ಪ್ರತ್ಯೇಕವಾಗಿ ಮಾಡಬೇಕಾದವುಗಳು. ಇವು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣದಿಂದ ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸರಿಯಾದ ನಿರ್ಧಾರವಲ್ಲ.

12. ಈ ರೀತಿಯಾಗಿ ಅನಗತ್ಯವಾಗಿ ಕಲ್ಯಾಣ ಮಂಡಳಿ ಹಣವನ್ನು ಇತರೆ ಉದ್ದೇಶಗಳಿಗೆ ಖರ್ಚು ಮಾಡುವುದನ್ನು ಕೈಬಿಡಬೇಕು.

13. ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಗಳು ಸೇರಿದಂತೆ ಹಲವು ಘನ ಕೈಗಾರಿಕೆಗಳೂ ಕೂಡ ರಾಜ್ಯಾದ್ಯಂತ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ನೀಡುತ್ತಿವೆ. ಇವುಗಳನ್ನು ಬಳಸಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಾಗೂ ಕಾರ್ಮಿಕರಿಗೆ ತರಬೇತಿ ನೀಡಬಹುದು

14. ಬಿಲ್ರ‍್ಸ್ ಅಸೋಸಿಯೇಶನ್ ಮತ್ತು ಡೆವಲರ‍್ಸ್ ಸೇರಿದಂತೆ ನಿರ್ಮಾಣ ಉದ್ದಿಮೆಗಳು ತಮ್ಮ ಪಾಲಿನ ಸಿಎಸ್‌ಆರ್ ನಿಧಿಯನ್ನು ಬಳಸಿ ಕಟ್ಟಡ ಉದ್ಯಮಕ್ಕೆ ಸಂಬಂಧಿಸಿ ವಿಷಯಗಳ ಮೇಲೆ ಕೌಶಲ್ಯ ತರಬೇತಿ ನೀಡುವಂತೆ ಕಾರ್ಮಿಕ ಇಲಾಖೆ ನಿರ್ದೇಶಿಸಬೇಕು.

ಈ ಎರಡು ಕೇಂದ್ರಗಳನ್ನು exclusively ಕಟ್ಟಡ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಎನ್ನುವುದು ಅವರ ಟಿಪ್ಪಣಿ ಸಾರಂಶವಾಗಿದೆ. ಆದರೆ ಈ ಕೇಂದ್ರಗಳಿಂದ ತಯಾರಾಗುವ Skilled manpower ಎಷ್ಟು? ಅದರ ಅವಧಿ ಇತ್ಯಾದಿ ವಿವರಗಳನ್ನು ನೀಡಬೇಕು. ಜತೆಗೆ ಈಗಾಗಲೇ ಕಲ್ಯಾಣ ಮಂಡಳಿ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಸ್ಥಾಪಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರ ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿ ಇರುವ ಐಟಿಐ ಕೇಂದ್ರಗಳನ್ನೇ ಇದಕ್ಕಾಗಿ ಬಳಸುವುದು ಸೂಕ್ತ.

ಕೌಶಲ್ಯಾಭಿವೃದ್ಧಿಯನ್ನು ಕಾರ್ಮಿಕ ಇಲಾಖೆ ಐಟಿಐ ಗಳ ಮೂಲಕ ವಿಶಾಲ ತಳಹದಿಯಲ್ಲಿ ಮಾಡಬೇಕು. ಹೀಗೆ ಪ್ರತ್ಯೇಕ ಪ್ರತ್ಯೇಕವಾಗಿ ದ್ವೀಪಗಳನ್ನು ಸೃಷ್ಟಿಸುವ ರೀತಿಯ ವಿಧಾನವು ಅವೈಜ್ಞಾನಿಕವಾದುದು. ಹೀಗಾಗಿ ಇದನ್ನು ಒಪ್ಪಲಾಗದು. ಇದೇ ವಾದ ಸರಣಿಯನ್ನು ಅನುಸರಿಸಿ ರಾಜ್ಯದ ಬೇರೆ ಇಲಾಖೆಗಳೂ ಇದೇ ರೀತಿಯ ಪ್ರಸ್ತಾವಗಳಿಗೆ ಮುಂದಾಗಬಹುದು. ಆಗ ಆಯಾ ಇಲಾಖೆಗಳ ಕೆಲಸ ಬಿಟ್ಟು, ಇಂತಹ ಕೆಲಸಗಳಿಗೆ ಆದ್ಯತೆ ನೀಡಿದಲ್ಲಿ, ಇಲಾಖೆಯ ಮೂಲ ಕೆಲಸವನ್ನು ಬಿಡಬೇಕಾದ ಪರಿಸ್ಥಿತಿ ಬರಬಹುದು. ಉದಾಹರಣೆಗೆ ಕಾರ್ಮಿಕ ಇಲಾಖೆಯ ಲೇಬರ್ ಇನ್ಸ್ಪೆಕ್ಟರ್‌ಗಳಿಗೆ ಕಿಟ್ ಹಂಚುವುದೇ ಪ್ರಧಾನ ಕೆಲಸವಾಗಿದೆ. ಇದೇ ಕೆಲಸವೇ ಅವರ ಹೆಚ್ಚಿನ ಸಮಯವನ್ನು ನುಂಗಿ ಹಾಕುತ್ತಿದೆ.

ಆದ್ದರಿಂದ 1996 ರ ಕಾಯ್ದೆಯ ಉದ್ದೇಶವನ್ನು ಗೌರವಿಸಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೈಜ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

ಮೇಲ್ಕಂಡ ಈ ಆಕ್ಷೇಪಣೆಗಳನ್ನು ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಪ್ರತಿನಿಧಿಸಿ ನೀಡುತ್ತಿದ್ದೇವೆ. ನಮ್ಮ ಈ ಆಕ್ಷೇಪಣೆಗಳನ್ನು ಸಕಾರಾತ್ಮಕ ನೆಲೆಯಲ್ಲಿ ಪರಿಗಣಿಸಿ ಇಂತಹ ನಿರುಪಯುಕ್ತ ಯೋಜನೆಯನ್ನು ಕೈಬಿಡಬೇಕು ಎಂದು ನಾವು ಕೋರುತ್ತೇವೆ. ಜತೆಗೆ ಹಾಲಿ ಇರುವ ಕಲ್ಯಾಣ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮವಹಿಸಬೇಕೆಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್.‌ ಎಐಸಿಸಿಟಿಯುನ ಅಪ್ಪಣ್ಣ, ಎಐಟಿಯುಸಿಯ ಗಿರೀಶ್‌, ಐಎನ್‌ಟಿಯುಸಿಯ ಯಲ್ಲಪ್ಪ, ಎನ್‌ಸಿಎಲ್‌ನ ಲೀಲಾವತಿ, ಎಐಯುಟಿಯುಸಿಯ ಷಣ್ಮುಗಂ ಸೇರಿದಂತೆ ಅನೇಕ ಕಾರ್ಮಿಕರು ಈ ಆಕ್ಷೇಪಣಾ ಪತ್ರಕ್ಕೆ ಸಹಿ ಹಾಕಿದ್ದಾರೆ.

ಇದನ್ನೂ ನೋಡಿ: ಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ ಕಾರ್ಮಿಕ

Donate Janashakthi Media

Leave a Reply

Your email address will not be published. Required fields are marked *