ಸಾಯೋಕೆ ನನ್ನ 1.5 ಕೋಟಿ ರೂ.ಕಾರೇ ಆಗಬೇಕಿತ್ತಾ| ಸವಾರನ ಮೇಲೆ ದರ್ಪ ತೋರಿದ ಭವಾನಿ ರೇವಣ್ಣ, ವಿಡಿಯೋ ವೈರಲ್

ಮೈಸೂರು: ಬೈಕ್ನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನಿಗೆ ಜೆಡಿಎಸ್ನಾಯಕಿ ಭವಾನಿ ರೇವಣ್ಣ ಅವರು ದರ್ಪ ತೋರಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಡಿಸೆಂಬರ್‌3 ಭಾನುವಾರ ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ, ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗಕ್ಕೆ ತುಸು ಹಾನಿಯಾಗಿದೆ. ಈ ವೇಳೆ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು, ಬೈಕ್‌ ಸವಾರನಿಗೆ ಮನಬದಂತೆ ಬೈದಿದ್ದಾರೆ. ವಿಡಿಯೋದಲ್ಲಿ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು ಬಂದು ಬೈಕ್ ಸವಾರನ ಆರೋಗ್ಯ ವಿಚಾರಿಸಿಲ್ಲ. ಬದಲಿಗೆ ಹಿಗ್ಗಾಮುಗ್ಗಾ ಬೈದು  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಯೋಕೆ 1.5 ಕೋಟಿ ಕಾರೇ ಆಗಬೇಕಿತ್ತಾ, ಸುಟ್ಟು ಹಾಕ್ರೋ ಈ ಗಾಡಿನ ಎಂದು ಹೇಳಿರುವುದು ಕಂಡು ಬಂದಿದೆ.

ಕೊಡ್ತೀಯಾ 50 ಲಕ್ಷ ರಿಪೇರಿಗೆ : ಭವಾನಿ ರೇವಣ್ಣ, ಬೈಕ್‌ ಸವಾರನ ಮೊಬೈಲ್‌ ಕಸಿದುಕೊಂಡು ಬೈಕ್‌ ಕೀ ಕಿತ್ತುಕೊಂಡರು. ” ನಿನಗೆ ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ?’ ಎಂದು ಕೇಳಿದರು. ಅಲ್ಲದೇ, ‘ಬಿಟ್‌ಬಿಡಿ ಅಕ್ಕ’ ಎಂದು ಮಧ್ಯಪ್ರವೇಶಿಸಿದ ಸ್ಥಳೀಯರನ್ನು, ‘ಕೊಡ್ತಿಯಾ ₹ 50 ಲಕ್ಷ ರಿಪೇರಿ ಮಾಡಿಸೋಕೆ? ಸ್ಥಳದಲ್ಲಿರುವವರು ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ’ ಎಂದು ಸೇರಿದ್ದವರನ್ನು ಕೂಡ ಭವಾನಿ ರೇವಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

” ಅವನು (ಬೈಕ್‌ ಸವಾರ) ಸತ್ತೋಯ್ತಾನೆ ಅಂತ ಅವನ ಬಗ್ಗೆ ಯೋಚೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?’ ಎಂದೂ ಸ್ಥಳೀಯರ ವಿರುದ್ಧ ಭವಾನಿ ರೇವಣ್ಣ ಕೆಂಡಾಮಂಡಲವಾದರು.

ಬಸ್‌ಗೆ ಸಿಕ್ಕಾಕೊಂಡು ಸಾಯಬೇಕಿತ್ತು‘ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ, ಒಂದೂವರೆ ಕೋಟಿ ಗಾಡಿ ಇದು. ಡ್ಯಾಮೇಜ್ ಮಾಡಿದ್ದೀಯಲ್ಲ, ಸಾಯಂಗಿದ್ರೆ ಬಸ್‌ಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರ್ ಡ್ಯಾಮೇಜ್ ಮಾಡೋಕೆ ನೀನ್ಯಾವನು?’ ಎಂದು ವಾಹನ ಸವಾರರ ವಿರುದ್ಧ ಹರಿಹಾಯ್ದರು.

ಇದು ಯಾವ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುತ್ತೆ. ಗಾಡಿ ಸೀಜ್‌ ಮಾಡಿಸು. ಈ ಗ್ರಾಮ ಎಸ್‌ಐ ಬರೋಕೆ ಹೇಳಿ ಎಂದು ಭವಾನಿ ರೇವಣ್ಣ ಅವರೇ ಬೈಕ್‌ ಸವಾರ ಮತ್ತು ಹಿಂಬದಿ ಸವಾರನ ಫೋಟೋವನ್ನು ಕ್ಲಿಕ್ಕಿಸುತ್ತಿರುವ ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಸಾಲಿಗ್ರಾಮ ಪೊಲೀಸ್ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದರು. ಬೈಕ್‌ ಸವಾರ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಘಟನೆಯ 15 ನಿಮಿಷಯಗಳ ಸಂಪೂರ್ಣ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಪಘಾತದ ಬಳಿಕ ವಾಹನ ಸವಾರನ ಆರೋಗ್ಯ ವಿಚಾರಿಸದೇ ಕಾರಿನ ಬಗ್ಗೆ ಯೋಚಿಸಿದ ಭವಾನಿ ರೇವಣ್ಣ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಷ್ಟೊಂದು ದರ್ಪ, ದುಷ್ಟತನ ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 04 | ಭಾಗ 01

 

Donate Janashakthi Media

Leave a Reply

Your email address will not be published. Required fields are marked *