ಬೆಂಗಳೂರು: ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಆರೋಪಿ ವಿದೇಶಕ್ಕೆ ಓಡಿಹೋಗಿ ತಲೆಮರಿಸಿಕೊಂಡಿದ್ದಾನೆ ಎನ್ನಲಾಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಾರಂಟ್ ಜಾರಿಯಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ.
ಪ್ರಜ್ವಲ್ ರೇವಣ್ಣ ಇನ್ನೂ ಸಿಗದೇ ಆಟವಾಡಿಸುತ್ತಿರುವುದರಿಂದ ವಾರೆಂಟ್ ಜಾರಿ ಮಾಡುವಂತೆ ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಮನವಿಯನ್ನು ಪುರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರಂಟ್ ಜಾರಿಮಾಡಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವುದೇ ತಕರಾರಿಲ್ಲ ಎಂದ ಹೆಚ್.ಡಿ.ದೇವೇಗೌಡ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಇರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ವಾರಂಟ್ ಇದಾಗಿದೆ.
ಇದನ್ನೂ ನೋಡಿ: ಶ್ಯಾಮ್ ರಂಗೀಲಾ ಸ್ಪರ್ಧೆಗೆ ಹೆದರಿದ ಪ್ರಧಾನಿ ಮೋದಿ : ನಾಮಪತ್ರ ತಿರಸ್ಕೃತದ ಹಿಂದೆ ಮೋದಿ ಕೈವಾಡ Janashakthi Media