ಬೂಕರ್ ಪ್ರಶಸ್ತಿ ಪಡೆದ ನಾಡಿನ ಹೆಮ್ಮೆ ಬಾನು ಮುಷ್ತಾಕ್ ರವರಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯು ಪ್ರೀತಿ ಪೂರ್ವಕ ಅಭಿನಂದಿಸಿದೆ ಎಂದು ಸಮಿತಿಯ ಅಧ್ಯಕ್ಷರಾದ ಡಾ.ಮೀನಾಕ್ಷಿ ಬಾಳಿ ಅವರು ತಿಳಿಸಿದ್ದಾರೆ.
ಇದನ್ನು ಓದಿ:ಹಾರೋಹಳ್ಳಿ | ಒಕ್ಕಲಿಗ ಸಮುದಾಯದವರಿಂದ ದಲಿತರ ಮೇಲೆ ಬಹಿಷ್ಕಾರ
ಪತ್ರದ ಮೂಲಕ ಅಭಿನಂದಿಸಿರುವ ಅವರು, ಬೂಕರ್ ಪ್ರಶಸ್ತಿಗಾಗಿ ಸಮಿತಿ ಅಭಿಮಾನದಿಂದ ಅಭಿನಂದನೆಗಳನ್ನು ಸಲ್ಲಿಸಿದೆ, ಹಲವು ಹತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಕನ್ನಡ ಸಾಹಿತ್ಯಕ್ಕೆ ತನ್ಮೂಲಕ ಕನ್ನಡ ಭಾಷೆಯ ಪ್ರಾಯೋಗಿಕತೆಗೆ ಮತ್ತು ಮಹಿಳಾ ಅಸ್ಮಿತೆಗೆ ತಾವು ನೀಡಿದ ಕೊಡುಗೆಗೆ ಸಂದ ಪುರಸ್ಕಾರವಿದು ಎಂದು ಉಲ್ಲೇಖಿಸಿದ್ದಾರೆ.
ಇದನ್ನು ಓದಿ:ಕ್ಯಾಬ್ ಸೇವೆಗೂ ಮುನ್ನ ಟಿಪ್ಸ್ ಪಡೆದರೆ ಕಟ್ಟುನಿಟ್ಟಿನ ಕ್ರಮ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ
ಸೋಲರಿಯದೆ , ದಿಟ್ಟತನದಿಂದ ಛಲದಿಂದ ಮುಂದುವರೆದ ನಿಮ್ಮ ನಡೆ ನಾಡಿನ ಹಲವರಿಗೆ ಅದರಲ್ಲೂ ಮಹಿಳೆಯರಿಗೆ ಮಾದರಿ ಎಂದೇ ಜನವಾದಿ ಭಾವಿಸುತ್ತದೆ. ಧರ್ಮಾಂಧತೆ, ಮತಾಂಧತೆಗಳ ವಿಷ ಬಿತ್ತುತ್ತಿರುವ ಈ ಹೊತ್ತಿನಲ್ಲಿ ಬೂಕರ್ ಪ್ರಶಸ್ತಿ ಯ ಗರಿಯನ್ನು ಮುಡಿಗೇರಿಸಿಕೊಂಡ ನೀವು ನಮ್ಮ ಹೆಮ್ಮೆ. ಇದೊಂದು ಐತಿಹಾಸಿಕ ನಡೆ ಮಾತ್ರವಲ್ಲ ವಿಶ್ವಶಾಂತಿ ಮತ್ತು ಸೌಹಾರ್ದತೆಗೆ ಸಂದ ಜಯ. ಮತ್ತೊಮ್ಮೆ ಮನಸಾರೆ ಅಭಿನಂದನೆ ಸಲ್ಲಿಸಿದ್ದಾರೆ.