– ಎಚ್.ಆರ್.ನವೀನ್ ಕುಮಾರ್, ಹಾಸನ
ಯುದ್ಧ ಯುದ್ಧ ಯುದ್ಧ
ಇಲ್ಲಿ ಗೆದ್ದವನು ಸೋತಿದ್ದಾನೆ
ಸೋತವನು ಸತ್ತಿದ್ದಾನೆ.
ಯುದ್ಧದ ಹಿಂದೆ
ಗೆಲುವು ಸೋಲುಗಳಿಗಿಂತ
ಲಾಭದ ಲೆಕ್ಕಾಚಾರವೇ ಹೆಚ್ಚು.
ಬಾಂಬು ಬಂದೂಕುಗಳನ್ನು ತಯಾರಿಸುವವರು ಬಿಕರಿಗಾಗಿ ಯುದ್ಧಮಾಡಿಸುತ್ತಾರೆ.
ಬದುಕಿನ ತುತ್ತಿನ ಚೀಲವ ತುಂಬಿಸಿಕೊಳ್ಳಲು ಯೋಧರು ಇವುಗಳನ್ನು ಬಳಸುತ್ತಾರೆ.
ಈಗ ಹೇಳಿ ಯುದ್ದದಿಂದ
ಯಾರಿಗೆ ಲಾಭ, ಯಾರಿಗೆ ನಷ್ಟ
ಯಾರು ಸೋತರು, ಯಾರು ಗೆದ್ದರು.
ಯುದ್ಧವೆಂಬುದು ಉನ್ಮಾದ ಮಾತ್ರವಲ್ಲ, ಅದೊಂದು ವ್ಯಾಪಾರ
ಇಲ್ಲಿ ಲಾಭದ ಲೆಕ್ಕಾಚಾರವೇ ಎಲ್ಲಾ.
ಇದನ್ನೂ ಓದಿ:ಹಮಾಸ್-ಇಸ್ರೇಲ್ ಯುದ್ಧದ ಹಿನ್ನೆಲೆ ಏನು?
ಜಾಗವಿಲ್ಲ ಮಾನವೀಯತೆಗೆ ಇಲ್ಲಿ
ಬದುಕಿರುವುದಿಲ್ಲ ಮನುಷ್ಯರಾರು ಇಲ್ಲಿ
ಅವರ ಜೇಬು ತುಂಬಿಸುತ್ತಿದೆ ಇವರು ಹಾರಿಸಿದ ಒಂದೊಂದು ಗುಂಡು.
ದೇಶ ಭಕ್ತಿ, ಗಡಿಗಳು ಮಾತ್ರ ಚರ್ಚೆಯಾಗುತ್ತವೆ ಯುದ್ಧದಲ್ಲಿ
ಚರ್ಚೆಯಾಗದವರು ಯೋಧರ ಹೆಂಡರು, ಮಕ್ಕಳು, ಅಪ್ಪ, ಅಮ್ಮ, ಸಂಸಾರ
ಮಡಿದ ಯೋಧನ ತ್ಯಾಗ ಬಲಿದಾನಗಳ ಗುಣಗಾನ ಅಂತಿಮವಾಗಿ
ನಿಜವಾಗಲೂ ಯುದ್ಧದಲ್ಲಿ ಗೆದ್ದವರಾರು ಸೋತವರಾರು ಈಗ ಹೇಳಿ
ವಿಡಿಯೋ ನೋಡಿ: ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ Janashakthi Media