ನಿಕೊಲಾಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಪಹರಿಸಿ ಬಂಧಿಸಿರುವುದು ಡೊನಾಲ್ಡ್ ಟ್ರಂಪ್ ನ ಉದ್ದಟತನದ ಅಮಾನವೀಯ ಯುದ್ಧ ಕಾರ್ಯಾಚರಣೆಯಲ್ಲದೆ ಮತ್ತೇನೂ ಅಲ್ಲ. ಅದು ಸಾಮ್ರಾಜ್ಯವಾದದ ಅತ್ಯಂತ ಕ್ರೂರ ಪ್ರದರ್ಶನ ಮತ್ತು ಬೇರೆ ದೇಶದ ಆಂತರಿಕ ವ್ಯವಹಾರದಲ್ಲಿ ನೇರ ಅಕ್ರಮ ಹಸ್ತಕ್ಷೇಪ. ಸಾಬೀತಾಗದ ಆರೋಪಗಳ ಆಧಾರದ ಮೇಲೆ ಸಾರ್ವಭೌಮ ದೇಶವೊಂದರ ಚುನಾಯಿತ ನಾಯಕನನ್ನು ಅಪಹರಿಸಿ ಬಂಧಿಸುವುದು ಅಂತರ್ರಾಷ್ಟ್ರೀಯ ಕಾನೂನುಗಳ ಹಾಗೂ ವಿಶ್ವಸಂಸ್ಥೆಯ ಲಿಖಿತ ಸನ್ನದಿನ ಸ್ಪಷ್ಟ ಉಲ್ಲಂಘನೆ. ಮಾನವೀಯತೆ
-ರಾಮ್ ಕುಮಾರ್
-ಕನ್ನಡಕ್ಕೆ: ಟಿ. ಸುರೇಂದ್ರ ರಾವ್
ಸುಳ್ಳು ಆರೋಪಗಳು ಈ ಹಿಂದೆ ಇರಾಕಿನ ಮೇಲೆ ಸಮೂಹ ವಿನಾಶದ ಶಸ್ತ್ರಾಸ್ತ್ರ ಹೊಂದಿದೆ ಎಂದು ಅಮೆರಿಕಾ ದಾಳಿ ಮಾಡಿದ್ದನ್ನು ನೆನಪಿಸುತ್ತದೆ. ಅಷ್ಟೇ ಅಲ್ಲ 1989 ರಲ್ಲಿ ಪನಾಮಾದ ಮೇಲೆ ಅಮೆರಿಕಾ ದುರಾಕ್ರಮಣ ಮಾಡಿ ಮ್ಯಾನ್ಯುವಲ್ ನ್ಯುರೇಗಾ ಅವರನ್ನು ವಶಪಡಿಸಿಕೊಂಡಿದ್ದು ಕೂಡ ನೆನಪಾಗುತ್ತದೆ. ಎಲ್ಲಿಯವರೆಗೆ ಬಲಾಢ್ಯ ಸಾಮ್ರಾಜ್ಯವಾದಿ ದೇಶವೊಂದು ಕಾನೂನುಗಳನ್ನು ಧಿಕ್ಕರಿಸಿ ತನ್ನ ಅಸಮಾನ ಮಿಲಿಟರಿ ಬಲವನ್ನು ಬಳಸಿ ತನ್ನ ಕಾಲಿಗೆ ಮಣಿಸುವಂತೆ ಮಾಡುತ್ತಿರುತ್ತದೋ ಅಲ್ಲಿಯವರೆಗೂ ಜಗತ್ತಿನಲ್ಲಿ ಬೇರಾವ ದೇಶವೂ ಸಾರ್ವಭೌಮ ಶಕ್ತಿಯಾಗಿ ಉಳಿಯಲು ಸಾಧ್ಯವಾಗದಂತಹ ಅಪಾಯಕಾರಿ ದುರಂತಮಯ ನಿದರ್ಶನವಾಗಿ ಈ ದಾಳಿಯು ಉಳಿಯುತ್ತದೆ.
ವೆನಿಜೂಲವು ಅಮೆರಿಕದ ವಿರುದ್ಧ ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ಸಮರ ಸಾರಿದ ಎಂದು ಆರೋಪ ಹೊರಿಸುವುದು ಹಾಸ್ಯಾಸ್ಪದ ಸಂಗತಿ. ಅದನ್ನು ಸಾಬೀತುಪಡಿಸುವ ಯಾವ ನಂಬಲರ್ಹ ಸಾಕ್ಷ್ಯವು ಅಂತರ್ರಾಷ್ಟ್ರೀಯ ಸಂಸ್ಥೆಯಿಂದಾಗಲೀ ಅಥವಾ ನ್ಯಾಯಾಂಗದಿಂದಾಗಲೀ ಅಥವಾ ಅಮೆರಿಕದ ಸರ್ಕಾರಿ ದಾಖಲೆಗಳಲ್ಲಿಯಾಗಲೀ ಇಲ್ಲ. ವೆನಿಜೂಲವು ಯಾವುದೇ ಮಾದಕ ವಸ್ತುಗಳ ಪ್ರಮುಖ ಉತ್ಪಾದಕ ಅಥವಾ ರಫ್ತುದಾರ ದೇಶವಲ್ಲ. ವೆನಿಜೂಲದಲ್ಲಿ ಮಾದಕ ವಸ್ತು ತಯಾರಿಸುವ ಮೂಲ ಧಾತುವಾದ ಕೋಕೊವನ್ನು ಬೆಳೆಯುವುದಿಲ್ಲ.
ಇದನ್ನೂ ಓದಿ: ವೆನೆಜುವೇಲಾ ಅಧ್ಯಕ್ಷ ಮದುರೊ ಅಪಹರಣದ ವಿರುದ್ಧ ಜಗದಗಲಕ್ಕೂ ಪ್ರತಿಭಟನಾ ಪ್ರದರ್ಶನಗಳು
ಆದ್ದರಿಂದ, ಯಾವ ರೀತಿಯಲ್ಲೂ ಅದೊಂದು ಮಾದಕ ವಸ್ತು ಬೆದರಿಕೆ ದೇಶವೆಂದು ವರ್ಗೀಕರಣ ಮಾಡಲಾಗಿಲ್ಲ. ಒಂದೇ ಒಂದು ಸಾಕ್ಷ್ಯವೆಂದರೆ ಮಾದಕ ವಸ್ತು ಸಾಗಾಟ ಬಹಳ ಅಪರೂಪವಾಗಿ ವೆನಿಜೂಲದ ಮೂಲಕ ಆಗಿರಬಹುದು,ಅಷ್ಟೆ. ಆದರೆ, ಈ ಸಾಗಾಟಕ್ಕೆ ವೆನಿಜೂಲ ಸರ್ಕಾರದ ಪ್ರತ್ಯಕ್ಷ ಅಥವ ಪರೋಕ್ಷ ಬೆಂಬಲ ಇರುವ ಯಾವುದೇ ಸಾಕ್ಷ್ಯ ಕೂಡ ಇಲ್ಲ. ಅಂತರ್ರಾಷ್ಟ್ರೀಯ ನ್ಯಾಯಾಲಯದ ಅಥವ ವಿಶ್ವಸಂಸ್ಥೆಯ ಅಥವ ಬಹುಪಕ್ಷೀಯ ವಿಧಾನದ ವರದಿ ಅಥವ ತೀರ್ಪು ಈ ವಿಷಯದಲ್ಲಿ ವೆನಿಜೂಲ ಸರ್ಕಾರದ ವಿರುದ್ಧ ಕಾಣಸಿಗುವುದಿಲ್ಲ. ಕೇವಲ ಆರೋಪಗಳಷ್ಟೇ ಇವೆ.
ವೆನಿಜೂಲವು ಅಮೆರಿಕದ ವಿರುದ್ಧ ಅಪಾಯಕಾರಿ ಶಸ್ತ್ರಾಸ್ತ್ರ ಮಾರಾಟದಲ್ಲಿ ತೊಡಗಿದೆ ಎಂಬ ಅಷ್ಟೇ ತಲೆಬುಡವಿಲ್ಲದ ಹೇಳಿಕೆ ಇದೆ. ಪಾಶ್ಚಿಮಾತ್ಯ ದೇಶಗಳ ಅಕ್ರಮ ಶಸ್ತ್ರಾಸ್ತ್ರ ಬಹುಪಾಲು ಅಮೆರಿಕದಿಂದಲೇ ಸರಬರಾಜಾಗುತ್ತವೆ ಮತ್ತು ಬೇರಾವುದೇ ದೇಶಗಳಿಂದ ಅಲ್ಲ. ವೆನಿಜೂಲವಂತೂ ಇರಲು ಸಾಧ್ಯವಿಲ್ಲ, ಏಕೆಂದರೆ ಅದರ ವಿರುದ್ಧ ತೀವ್ರತರದ ಆರ್ಥಿಕ ದಿಗ್ಬಂಧನ ಮತ್ತು ಶಸ್ತ್ರಾಸ್ತ್ರ ನಿರ್ಬಂಧ ಈಗಾಗಲೇ ಇದೆ.
ಮಡುರೊ ಅವರ ಅಪಹರಣವನ್ನು ಇಡೀ ಜಗತ್ತು ಒಂದಾಗಿ ಖಂಡಿಸಬೇಕು. ಆಧುನಿಕ ವಿಶ್ವ ವ್ಯವಸ್ಥೆಯಲ್ಲಿ ದೇಶಗಳ ಸ್ವಯಂ ನಿರ್ಧಾರದ ಹಕ್ಕುಸ್ವಾಮ್ಯಕ್ಕೆ ಚೌಕಾಶಿ ಸಾಧ್ಯವಿಲ್ಲ.
ಇದನ್ನೂ ನೋಡಿ: ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media
