ಬಿಜೆಪಿ ನಾಯಕರು ಚುನಾವಣೆ ನಂತರ ಯಾಕೆ ವಕ್ಫ್ ವಿವಾದ ಪ್ರಸ್ತಾಪಿಸದೆ ಮೌನವಾಗಿದ್ದಾರೆ ? ಸಚಿವ ಜಮೀ‌ರ್ ಅಹಮದ್ ಖಾನ್ ಪ್ರಶ್ನೆ

ಬೆಂಗಳೂರು : ಅನ್ಯ ವಿಧಾನಸಭಾ ಚುನಾವಣೆ ಮತ್ತು ರಾಜ್ಯದ ಉಪ ಚುನಾವಣೆ ಸಂದರ್ಭದಲ್ಲಿ ವಕ್ಫ್ ವಿವಾದ ಪ್ರಸ್ತಾಪಿಸುತ್ತಿದ್ದ ಬಿಜೆಪಿ ನಾಯಕರು ಚುನಾವಣೆ ನಂತರ ಯಾಕೆ ಮೌನವಾಗಿದ್ದಾರೆ ಎಂದು ವಸತಿ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಪ್ ಸಚಿವ ಜಮೀ‌ರ್ ಅಹಮದ್ ಖಾನ್ ಪ್ರಶ್ನಿಸಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಹುಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.‌ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್‌ ಮುಖಂಡ ಚಂದ್ರಶೇಖರ್ ಅಪ್ಲೋಡು ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಕೋಕಿಲಾ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಎಲ್ಲಾ ಕಡೆ ವಕ್ಸ್ ಎಂದು ಅನಗತ್ಯವಾಗಿ ಹುಯಿಲೆಬ್ಬಿಸಿದರು. ಚುನಾವಣೆ ಮುಗಿದ ನಂತರ ತೆಪ್ಪಗಾಗಿದ್ದಾರೆ ಎಂದರು.

ಇದನ್ನೂ ಓದಿ : ಮೈಕ್ರೋ ಫೈನಾನ್ಸ್: ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ಗರ್ಭಿಣಿಯನ್ನು ಮನೆಯಿಂದ ಹೊರ ನೂಕಿ ಕ್ರೌರ್ಯ ಮೆರೆದ ಫೈನಾನ್ಸ್  ಸಿಬ್ಬಂದಿ

ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಹಿಂದು ಮುಸ್ಲಿಂ ಎಂದು ಸಂಘರ್ಷ ಮೂಡಿಸುವುದೇ ಅವರ ಕಾಯಕವಾಗಿದೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ. ಆದರೆ ಬಡವರ ಕೆಲಸಗಳಿಗೂ ಬಿಜೆಪಿ ಅಡಿ ಮಾಡುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಒಂದೇ ಒಂದು ಮನೆ ಕಟ್ಟಿ ಕೊಟ್ಟೆಲ ಕೇಂದ್ರ ಸರ್ಕಾರ ಬಡವರ ಮನೆ ನಿರ್ಮಾಣಕ್ಕೆ ಸಬ್ಸಿಡಿ ನೀಡಿ ಸರ್ಕಾರದ ನೆರವಿ ಮೊತ್ತದಲ್ಲಿ ಜಿ ಎಸ್ ಟಿ ರೂಪದಲ್ಲಿ ಶೇ 18 ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಬಡವರ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ವಾಗ್ಯಾಳಿ ನಡೆಸಿದರು.

ಬಹುದಿನಗಳ ಕನಸಾಗಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿ, ಚಾಮರಾಜಪೇಟೆಯ ರಸ್ತೆಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಒಟ್ಟು 57.64 ಕೋಟಿ ರೂಪಾಯಿ ಮೊತ್ತದ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿರುವುದು ತಮಗೆ ಸಂತಸ ತಂದಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀವ್ ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ವಾಯುಭಾರ ಕುಸಿತ: ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿ ಭರ್ಜರಿ ಮಳೆ ನಿರೀಕ್ಷೆ – IMD ಮುನ್ಸೂಚನೆ Janashakthi Media

Donate Janashakthi Media

Leave a Reply

Your email address will not be published. Required fields are marked *