ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುತ್ತಿದ್ದಾರೆ, ಇನ್ನೂ ಕೆಲವೆಡೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅನಧಿಕೃತ
ರಾಜ್ಯದಲ್ಲಿ ಅದೆಷ್ಟೋ ಮಂದಿ ಸಾಲ ಕೊಟ್ಟ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಸಾವನ್ನಪ್ಪಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಸರ್ಕಾರ ಕೆಲಸ ಮಾಡುತ್ತಲೇ ಇತ್ತು. ಇದೀಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಅಸ್ತು ಅಂದಿದ್ದು, ರಾಜ್ಯಪಾಲರಿಗೂ ಇದರ ಕರಡು ಪ್ರತಿಯನ್ನು ರವಾನೆ ಮಾಡಲಾಗಿದೆ. ಅನಧಿಕೃತ
ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯನ್ನು ಮುಟ್ಟುಗೋಲು ಹಾಕಲು ಸರ್ಕಾರ ನಿರ್ಧರಿಸಿದ್ದು, ಇದೀಗ ಮೈಕ್ರೋ ಫೈನಾನ್ಸ್ ಬಿಲ್ ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ಇಂದು ಮಧ್ಯಾಹ್ನ ಕರಡು ಪ್ರತಿಯನ್ನು ಪರಿಶೀಲಿಸಿದ್ದ ಸಿಎಂ ಸಿದ್ದರಾಮಯ್ಯ, ಬಳಿಕ ಸುಗ್ರೀವಾಜ್ಞೆ ಅನುಮತಿಗಾಗಿ ರಾಜ್ಯಪಾಲರ ಕರುಡು ಪ್ರತಿಯನ್ನು ಕಳುಹಿಸಿದ್ದಾರೆ. ಅನಧಿಕೃತ
ಇದನ್ನೂ ಓದಿ: ನವ ಉದಾರವಾದ ಕಾರ್ಪೋರೇಟೀಕರಣದ ಮತ್ತೊಂದು ಕಡತ
ಮೈಕ್ರೋ ಫೈನಾನ್ಸ್ ಟಾರ್ಚರ್‌ಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದ್ದು, ಕೆಲದಿನಗಳ ಹಿಂದಷ್ಟೆ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಸಿಎಂ ಸಿದ್ದರಾಮಯ್ಯ ರಿಗೆ ಸುಗ್ರೀವಾಜ್ಞೆ ಪ್ರತಿಯನ್ನು ನೀಡಲಾಗಿತ್ತು. ಆದ್ರೆ ಇದೀಗ ಸರ್ಕಾರ ಅಸ್ತು ಅಂದಿದ್ದು, ಸುಗ್ರೀವಾಜ್ಞೆ ಅನುಮತಿಗಾಗಿ ಸರ್ಕಾರ ರಾಜ್ಯಪಾಲರ ಅಂಗಳಕ್ಕೆ ಸುಗ್ರೀವಾಜ್ಞೆ ಪ್ರತಿಯನ್ನು ಕಳುಹಿಸಲಾಗಿದೆ.
ಸುಗ್ರೀವಾಜ್ಞೆಯಲ್ಲಿ 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆಗೆ ಒಳಪಡಿಸೋಕೆ ಬದಲಾವಣೆ ಮಾಡಿ ಕರಡು ಪ್ರತಿಯನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಅಲ್ಲದೇ ಅನಧಿಕೃತವಾಗಿ ಸಾಲ ನೀಡಿದ್ದರೆ ಸಾಲ ಮನ್ನಾ ಮಾಡೋದಾಗಿ ನಿರ್ಧರಿಸಲಾಗಿದೆ. ಅಲ್ಲದೆ ಸುಗ್ರೀವಾಜ್ಞೆ ನೀಡಿದ 30 ದಿನಗಳಲ್ಲಿ ನೋಂದಣಿ ಕಡ್ಡಾಯ ಮಾಡಬೇಕು ಅಲ್ಲದೇ ಈ ವೇಳೆ ಹಣದ ದಾಖಲೆಯನ್ನೂ ಉಲ್ಲೇಖ ಮಾಡಬೇಕು ಎಂದಿದ್ದಾರೆ.
ಇದನ್ನೂ ನೋಡಿ: ನಾನು ಹೀಗೆ ಇರೋದು, ಇದನ್ನೆ ತಿನ್ನೋದು ಎಂದು ಗಟ್ಟಿಯಾಗಿ ಹೇಳಬೇಕಿದೆ – ಬಂಜಗೆರೆ ಜಯಪ್ರಕಾಶ Janashakthi Media