ಉಡುಪಿ: ಧಾರ್ಮಿಕ ಸಂಘರ್ಷಗಳು ಹೆಚ್ಚಾಗುತ್ತಿದ್ದು, ಈ ನಡುವೆ ವ್ಯಾಪಾರಕ್ಕೂ ಧರ್ಮದ ರೋಗ ಅಂಟಿಸಲಾಗುತ್ತಿದೆ. ಈತನ್ಮಧ್ಯೆ ಉದ್ಯಾವರದ ಕುತ್ಪಾಡಿಯ ಜಾತ್ರೆಯಲ್ಲಿ ಅನ್ಯ ಧರ್ಮದವರಿಗೆ ಅವಕಾಶ ನೀಡಬೇಡಿ ಎಂದು ಬಂದ ಹಿಂದು ಕಾರ್ಯಕರ್ತರನ್ನು ಗ್ರಾಮಸ್ಥರು ಓಡಿಸಿದ ಘಟನೆ ನಡೆದಿದೆ.
ಕುತ್ಪಾಡಿಯ ಮಾಂಗೋಡು ಶ್ರೀ ವಾಸುಕಿ ದೇವಸ್ಥಾನದಲ್ಲಿ ಪ್ರತಿ ವರ್ಷ ಎಲ್ಲ ಧರ್ಮೀಯರು ಅಂಗಡಿಯಿಡುವುದು ವಾಡಿಕೆ. ಈ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಸೌಹಾರ್ದದ ನೆಲೆವೀಡಾದ ಇಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ಹಿಂದು ಕಾರ್ಯಕರ್ತರು ಆಗಮಿಸಿ ವಿವಾದ ಸೃಷ್ಠಿಸಲು ಮುಂದಾದರು ಆದರೆ, ಅವರನ್ನು ಅಲ್ಲಿನ ಗ್ರಾಮಸ್ಥರೇ ವಾಪಸು ಕಳುಹಿಸಿರುವ ಬೆಳಗವಣಿಗೆ ನಡೆದಿದೆ. ಇದರಿಂದ ಹಿಂದು ಸಂಘಟನೆಯವರು ಸೃಷ್ಠಿಸಲು ಹೊರಟ ಕೋಮು ವಿವಾದಕ್ಕೆ ತೆರೆ ಎಳೆದಂತಾಗಿದೆ.
ಹಿಂದೂ ಮುಖಂಡನೊಬ್ಬ ತನ್ನ ಬೆಂಬಲಿಗರೊಂದಿಗೆ ಆಕ್ಷೇಪ ವ್ಯಕ್ತಪಡಿಸಲು ಬಂದಾಗ ಈ ಘಟನೆ ವರದಿಯಾಗಿದೆ. ಇಂದು ಕುತ್ಪಾಡಿಯ ಮಾಂಗೋಡು ಶ್ರೀ ವಾಸುಕಿ ದೇವಸ್ಥಾನದಲ್ಲಿ ನಡೆಯಲಿರುವ ಷಷ್ಠಿಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.