ವಿವಿ ಪುರಂ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಜರಂಗದಳ ನಿರಾಕರಣೆ: ಸಿಪಿಐ(ಎಂ) ಖಂಡನೆ

ಬೆಂಗಳೂರು: ವಿ.ವಿ.ಪುರಂ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದನ್ನು ಬಜರಂಗದಳದವರು ವಿರೋಧಿಸಿರುವ ಕ್ರಮವನ್ನು ಬಜರಂಗದಳದ ಅತಿರೇಕದ ವರ್ತನೆ ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಖಂಡಿಸಿದೆ.

ಹೇಳಿಕೆಯನ್ನು ನೀಡಿರುವ, ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಬಿ.ಎನ್‌.ಮಂಜುನಾಥ್‌, ನವೆಂಬರ್‌ 26, ಸಂವಿಧಾನ ಸಮರ್ಪಣಾ ದಿನವನ್ನು ದೇಶಾದ್ಯಂತ ಆಚರಿಸಿದ್ದೇವೆ. ದೇಶದ ಬಹುತ್ವ ಸಂಸ್ಕೃತಿಗೆ ಕೂಡಿ ಬಾಳುವ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ಅತಿರೇಕ ವರ್ತನೆಯನ್ನು ಹಾಗೂ ವ್ಯಾಪಾರಿಗಳನ್ನು ಧರ್ಮ, ಕೋಮು ಆಧಾರದಲ್ಲಿ ವಿಭಜಿಸುವ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.

ನೆಲದ ಕಾನೂನು ಮತ್ತು ಸೌಹಾರ್ದ ಪರಂಪರೆಗೆ ವಿರುದ್ಧವಾಗಿ ನಡೆಯುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಉಪ ಪೊಲೀಸ್‌ ಆಯುಕ್ತರು(ಡಿಪಿಸಿ) ಇವರಿಗೆ ಸಿಪಿಐ(ಎಂ) ಪಕ್ಷ ಮನವಿ ಸಲ್ಲಿಸಿದೆ. ಮನವಿ ಪತ್ರ ಸ್ವೀಕರಿಸಿದ ಡಿಸಿಪಿಯವರು ನೆಲದ ಕಾನೂನನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಇದು ನಮ್ಮ ಇಲಾಖೆಯ ಕರ್ತವ್ಯವಾಗಿದೆ ಎಂದು ಭರವಸೆಯನ್ನು ನೀಡಿದ್ದಾರೆ ಎಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.

ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಕಾಯ್ದುಕೊಂಡು ಬಾಳಬೇಕೆಂದು ಸಿಪಿಐ(ಎಂ) ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *