ಬೆಂಗಳೂರು: ಮತದಾರರ ದತ್ತಾಂಶ ಮಾರಾಟ ಪ್ರಕರಣವನ್ನು ಭೇದಿಸಿರುವ ಆಗ್ನೆಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, ಪ್ರಮುಖ ಆರೋಪಿ ಎನ್ನಲಾದ ಸೆಂಥಿಲ್ ಎಂಬವರನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
‘ಸೈಬರ್ ಅಪರಾಧ ಹಿನ್ನೆಲೆಯುಳ್ಳ ಸೆಂಥಿಲ್, ಮತದಾರರು ಹಾಗೂ ಇತರ ದತ್ತಾಂಶವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪ್ರಕರಣವೊಂದರಲ್ಲಿ ಸಂಥಿಲ್ ನನ್ನ ಬಂಧಿಸಿದ್ದ. ಪೊಲೀಸರು, ಜೈಲಿಗೆ ಕಳುಹಿಸಿದ್ದರು. ಜಾಮೀನು ಮೇಲೆ ಹೊರಬಂದಿದ್ದ ಈತ, ತಮಿಳು ನಾಡಿನಲ್ಲಿ ನೆಲೆಸಿದೆ. ವ್ಯವಸ್ಥಿತ ಜಾಲ ರೂಪಿಸಿಕೊಂಡು ದತ್ತಾಂಶ ಮಾರಾಟಕ್ಕೆ ಇಳಿದಿದ್ದ, ಈತನ ಬಗ್ಗೆ, ಸಂಗ್ರಹಿಸಿ. ತಮಿಳುನಾ ಡಿನಲ್ಲಿ ಬಂಧಿಸಲಾಗಿದೆ. ಆರೋಪಿ ಸೆಂಥಿಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ‘ಸೆಂಥಿಲ್ ಹಾಗೂ ಇತರರು ಸೇರಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾ ಗಿದೆ’ ಎಂದು ಮೂಲಗಳು ತಿಳಿಸಿವೆ. ಜಾಲತಾಣದಲ್ಲಿ ದತ್ತಾಂಶ: ‘ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಮತದಾರರ ದತ್ತಾಂಶವನ್ನು ಆರೋಪಿ ಸಂಗ್ರಹಿಸಿದ್ದ ಮತದಾರರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಹಾಗೂ ಇತರ ಮಾಹಿತಿ ಆರೋಪಿ ಬಳಿ ಇರುವುದು ಪತ್ತೆಯಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸೆಂಥಿಲ್ ಹಾಗೂ ಇತರರು ಸೇರಿ ಕೊಂಡು, ಸಾಫ್ಟ್‌ವೇರ್ ಅಭಿವೃದ್ಧಿಪಡಿ ಸಿದ್ದಾರೆ. ಅದರ ಮೂಲಕ ದತ್ತಾಂಶ ವನ್ನು ಸಂಗ್ರಹಿಸಿಟ್ಟಿದ್ದಾರೆ. ‘ವೋಟರ್ಸ್ ಡಾಟಾ ಡಾಟ್ ಇನ್’ ಜಾಲತಾಣದಲ್ಲಿ ದತ್ತಾಂಶ ಅಪ್‌ಲೋಡ್ ಮಾಡಿ ಮಾರಾಟಕ್ಕೆ ಇರಿಸಿದ್ದರು’ ಎಂದು ತಿಳಿದು ಬಂದಿದೆ.