ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇಂದು ಖಾಸಗಿ ಶಾಲಾ ಶಿಕ್ಷಕರು ವಿವಿಧ ಬೇಡಿಕೆಗಳನ್ನು ಈಡೆರಿಸಲು ಒತ್ತಾಯಿಸಿ ಖಾಸಗಿ ಶಾಲಾ ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ವತಿಯಿಂದ ರಾಜ್ಯಾದಂತ್ಯ ಪ್ರತಿಭಟನೆ ನಡೆಸಿದ್ದಾರೆ. ‘ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆಗಳು– ಶಿಕ್ಷಕರು ಉಳಿದರೆ ಶಿಕ್ಷಣ‘ ಎಂಬ ಘೋಷಣೆಯಡಿ ಮೌರ್ಯ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಜಾಥ ನಡೆಸಿದ ಶಿಕ್ಷಕರು ಹಲವು ವೇಷ ಭೂಷಣಗಳ ಮೂಲಕ ಪ್ರತಿಭಟನೆ ನಡೆಸಿದರು.
ಖಾಸಗಿ ಶಾಲಾ ಶಿಕ್ಷಕರು ಉಳಿದ ಶಿಕ್ಷಕರಂತೆ ಕೆಲಸ ನಿರ್ವಹಿಸಿದ್ದು, ನಾವು ಆನ್ ಲೈನ್ ಪಾಠಗಳನ್ನು ಮಾಡುತ್ತಿದ್ದೇವೆ. ಆದರೆ ಸರ್ಕಾರ ನಮ್ಮನ್ನು ಕಡೆಗಣಿಸುತಿದ್ದು, ನಮ್ಮ ಸ್ಥಿತಿ ಈಗ ಚಿಂತಾಜನಕವಾಗಿದೆ, ನಮಗೆ ನೀಡಬೇಕಾದ ವಿಶೇಷ ಪ್ಯಾಕೇಜ್ ನೀಡಿಲ್ಲ, ಆಡಳಿತ ಮಂಡಳಿಯವರು ವೇತನ ನೀಡದೆ ನಮ್ಮ ಕುಟುಂಬಗಳನ್ನು ಪರದಾಡುವ ಸ್ಥಿತಿಗೆ ನಿರ್ಮಾಣ ಮಾಡಿದ್ದಾರೆ. ಕೆಲವೆಡೆ ವೇತನ ವಿಳಂಬವಾಗುತ್ತಿದೆ ಎಂದು ಖಾಸಗಿ ಶಾಲಾ ಶಿಕ್ಷಕರೊಬ್ಬರು ಸರ್ಕಾರ ಹಾಗೂ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನು ಕೆಲವು ಶಿಕ್ಷಕರು ನಮಗೆ ಜೀವನ ನಡೆಸೋದು ಕಷ್ಟಸಾಧ್ಯವಾಗಿದೆ, ಸಾಲದ ಕಂತುಗಳನ್ನು ಕಟ್ಟಲಾಗುತ್ತಿಲ್ಲ, ಮಾರ್ಚ್ ತಿಂಗಳಿನಿಂದಲ್ಲೂ ಸರ್ಕಾರ ನಮ್ಮ ಕಡೆಗೆ ಗಮನ ಹರಿಸುತ್ತಿಲ್ಲ ಹಾಗಾಗಿ ಇಂದು ನಾವು ರಸ್ತೆಗಿಳಿದು ಪ್ರತಿಭಟನೆ ಮಾಡಿತ್ತಿದ್ದೇವೆ ಎಂದು ತಿಳಿಸಿದ್ದಾರೆ. “ನಾನು ಬಂಡವಾಳ ಹೂಡಿ ಶಾಲೆಗಳನ್ನು ನಡೆಸುತ್ತಿದ್ದೇವೆ. ಶಾಲೆಗಳು ಆರಂಭವಿಲ್ಲ, ಹೀಗಾಗಿ ಶಿಕ್ಷಕರಿಗೆ ನೀಡಬೇಕಾದ ಸಂಬಳ ವಿಳಂವಾಗುತ್ತಿದ್ದೆ. ಆಡಳಿತ ನಿರ್ವಹಣೆಯನ್ನು ಮಾಡುವುದು ಕಷ್ಟವಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಖಾಸಗಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರೊಬ್ಬರು ಪ್ರತಿಕ್ರೀಯೆ ನೀಡಿದ್ದಾರೆ.