ಬೆಂಗಳೂರು ;ಜ. 28 : ಹಿಂದಿ ಭಾಷೆಯ ಸಮರ್ಥನೆ ಮಾಡಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ದೊಡ್ಡರಂಗೇಗೌಡರವರು ಕನ್ನಡ ಜನತೆಗೆ ಕ್ಷಮೆಯಾಚಿಸಿದ್ದಾರೆ.
ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಮಾತನಾಡಿದ ಅವರು ಹಿಂದಿ ನಮ್ಮ ರಾಷ್ಟೀಯ ಭಾಷೆ. ಇಲ್ಲಿ ಕನ್ನಡ ಅನ್ನುವುದೂ ಹೇಗೋ ಹಾಗೇ ಹಿಂದಿ ಭಾಷೆ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇದನ್ನು ಓದಿ : ದೊಡ್ಡರಂಗೇಗೌಡ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಖಂಡನೆ
ಇವರ ವಿವಾದಾತ್ಮಕ ಹೇಳಿಕೆಯನ್ನು ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ಧರಾಮಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಕನ್ನಡಿಗರು ಖಂಡಿಸಿದ್ದರು.
ದೊಡ್ಡರಂಗೇಗೌಡರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಇದನ್ನು ಅರಿತ ಅವರು ನಾನು ಕನ್ನಡವನ್ನು ಮನದಾಳದಿಂದ ಅಂತರಾಳದಿಂದ ಆರಾಧಿಸುತ್ತೇನೆ, ಕನ್ನಡಿಗರ ಮನನೋಯಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.