ಕಲೆ ಎಂಬುದು ಕಷ್ಟಕರ, ಕಲಿಯಲು ಬಲು ಬೇಸರ, ಕಲಿತು ಕಲಾವಿದನಾದರೆ ಎಷ್ಟೊಂದು ಮನೋಹರ ಎಂಬ ಹಿರಿಯರ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ. ಇಲ್ಲೋಬ್ಬ ವಿದ್ಯಾರ್ಥಿ ಅಂತಹ ಅದ್ಬುತ ಕಲೆಯ ಮೂಲಕ ಸಾಧನೆಯ ಶಿಖರವನ್ನೇರುತ್ತಿದ್ದಾನೆ, ಯಾರೂ ಆ ಬಾಲಕ. ಈ ಸ್ಟೋರಿ ನೋಡಿ.
ನಾನು ಹೇಳೋಕೆ ಹೊರಟಿರುವ ಸ್ಟೋರಿಯ ಕೇಂದ್ರಬಿಂದು ಹರ್ಜತ್ ಅಲಿ, ಹರ್ಜತ್ ಅಲಿ ಕೊಪ್ಪಳ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮೊದಲ ವರ್ಷದ ವ್ಯಾಸ್ಯಾಂಗ್ ಮಾಡುತ್ತಿದ್ದಾನೆ. ಇವರ ಸ್ವಂತ ಊರು ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ. ಈಗ ವಿಷಯಕ್ಕೆ ಬರೋಣ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಪ್ರತಿಭೆ ಇದ್ದೆ ಇರುತ್ತೆ. ಆ ಪ್ರತಿಭೆಯನ್ನು ಪೋಷಿಸಿ ಬೆಳಸಿದಾಗ ಮಾತ್ರ ಅದು ಖ್ಯಾತಿಯನ್ನು ಪಡೆಯಲು ಸಾಧ್ಯ. ಸಾಧಿಸುವ ಛಲ ಇದ್ರೆ ಕಲೆ ಕೂವಶವಾಗುತ್ತೆ ಎಂಬುದನ್ನು ಹರ್ಜತ್ ನಿಜವಾಗಿಸಿದ್ದಾರೆ.
ಹೌದು! ಕಲೆಯೆನ್ನುವುದೇ ಹಾಗೆ ಒಂದು ಸಲ ಅದರ ಹುಚ್ಚು ಹಿಡಿದ್ರೆ, ಅದರಿಂದ ಹೊರಗೆ ಬರುವುದು ಅಸಾಧ್ಯ, ಸಾಮಾನ್ಯವಾಗಿ ಚಿತ್ರಗಳನ್ನು ಬಿಡಿಸುವವರು ಬಣ್ಣ ಹಾಗೂ ಪೆನ್ಸಿಲ್, ಪೇಂಟಿಂಗ್ ಬ್ರಷ್ಗಳ ಮಧ್ಯೆ ಕಲಾವಿದರು ತಮ್ಮ ಕೈ ಚಳಕವನ್ನು ತೋರಸ್ತಿರ್ತಾರೆ. ಆದ್ರೆ ಹರ್ಜತ್ ಟ್ಯಾಲೆಂಟ್ ಡಿಫರೆಂಟ್ ಆಗಿದೆ. ಬಾಯಿಂದ, ಕಾಲಿಂದ್, ಬ್ಯಾಟ್, ಭೌಲ್, ಡಂಬಲ್ಸ್ ನಿಂದ, ಉಲ್ಟಾ ಮಲಗಿ ಚಿತ್ರಬಿಡಿಸುವ ಹರ್ಜತ್ ನ ಟ್ಯಾಲೆಂಟ್ ಗೆ ಜನ ಫಿದಾ ಆಗ್ತಾ ಇದ್ದಾರೆ.
ನೋಡಿದ್ರಲ್ ಹರ್ಜತ್ ನ ಕೈಚಳಕವನ್ನ, ಬ್ಯಾಟ್ ಮತ್ತು ಬಾಲ್‌ಗಳನ್ನು ನಾವು ಕ್ರಿಕೆಟ್ ಆಡೋದಕ್ಕೆ ಬಳಸುತ್ತೇವೆ. ಆದರೆ ಹರ್ಜತ್ ಅವುಗಳನ್ನು ಪೇಂಟಿಂಗ್ ಮಾಡೋದಕ್ಕೆ ಬಳಸುತ್ತಾರೆ. ಬ್ಯಾಟ್ ಮತ್ತು ಬಾಲ್ ಮೂಲಕ ಮಾಡಿರುವ ಪೇಟಿಂಗ್ ಒಂದಿದೆ ನೋಡ್ಕೊಂಡು ಬರೋಣ ಬನ್ನಿ.
ಹರ್ಜತ್ಗೆ ಬಾಲ್ಯದಿಂದಲೇ ಪೇಂಟಿಂಗ್ ಹುಚ್ಚು. ಶಿಕ್ಷರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ . ತಂದೆ ಚಾಂದ್ ಭಾಷಾ ಕೃಷಿ ಮತ್ತು ಹೈನುಗಾರಿಕೆ ಕೆಲಸ ಮಾಡುತ್ತಾರೆ. ತಾಯಿ ಅಲ್ಲಾಬಿ ಬಳೆ ಮಾರುತ್ತಾರೆ. ಚಿಕ್ಕ ಹಾಗೂ ಬಡತನ ಕುಟುಂದಲ್ಲಿ ಬೆಳೆದ ಹರ್ಜತ್ ಈ ಕಲೆಯನ್ನು ಈಗ ಕರಗತ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಈ ಲಕ್ಡೌನ್ ಸಮಯದಲ್ಲಿ ಅವರು ಕಲೆಯಲ್ಲಿ ಕಲಿತದ್ದು ಬಹಳಷ್ಟಿದೆ. ಗೆಳೆಯರ ಬೆಂಬಲ ಕುಟುಂಬಸ್ತರ ಸಹಕಾರ ಈ ಸಾಧನೆ ಮಾಡಲು ಸಾಧ್ಯವಾಯ್ತು ಎನ್ನುವುದು ಹರ್ಜತ್ ರವರ ಮನದಾಳದ ಮಾತು.
ನಮ್ಮ ಗೆಳೆಯ ಬಳಿ ಇಂತಹ ಕಲೆ ಇದೆ ಅಂತಾ ನಮಗೆ ಗೊತ್ತಿರಲಿಲ್ಲ, ನಾವೆಲ್ಲ ಆತನ ಜೊತೆಗೆ ನಿಲ್ತೇವೆ. ಆತ ಇನ್ನಷ್ಟು ಸಾಧನೆ ಮಾಡಬೇಕು. ಟಿವಿ. ಪೇಪರ್‌ಗಳಲ್ಲಿ ಗೆಳಯನ ಸುದ್ದಿ ಬಂದಾಗ ನಮಗೆ ತುಂಬಾ ಖುಷಿಯಾಗುತ್ತೆ ಆಂತಾರೆ ಹರ್ಜತ್ ಗೆಳಯರಾದ ಮಲ್ಲಿಕಾರ್ಜುನ್ ಮತ್ತು ವಿರೇಶ್,
ಪದವಿ ಗಳಿಸುವುದು ಸುಲಭ ಆದರೆ ಪದವಿ ಜೊತೆಗೆ ಪ್ರತಿಭೆಯನ್ನು ಬೆಳೆಸಿಕೊಳ್ಳುವುದು ಸುಲಭದ ಕೆಲಸವಲ್ಲ, ಹರ್ಜತ್ ಸಾಧನೆಗೆ ನಾವೆಲ್ಲ ಬೆನ್ನು ತಟ್ಟುತ್ತಿದ್ದೇವೆ. ಇಂತಹ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಓದಿದ ಹೆಮ್ಮೆ ನಮಗಿದೆ ಅಂಥಾ ಹೇಳ್ತಾರೆ ಹರ್ಜತ್ ನ ಫ್ರೌಡಶಾಲಾ ಶಿಕ್ಷಕರಾದ ಅಜಮೀರ್ ನಂದಾಪುರ್ ರವರು
ಒಟ್ಟಿನಲ್ಲಿ ಪ್ರತಿಭೆ ಬೆಳೆಯೋದಕ್ಕೆ ಸಹಕರ ಇದ್ರೆ ಸಾಧಿಸುವ ಛಲ ತಾನಾಗಿಯೇ ಬರುತ್ತದೆ ಎಂಬ ಮಾತು ಹರ್ಜತ್ ಬದುಕಿನಲ್ಲಿ ಬಂದಾಗಿದೆ. ಈ ವ್ಯಕ್ತಿ ಇನ್ನೂಷ್ಟು ಸಾಧನೆ ಮಾಡಲಿ, ಕರ್ನಾಟಕಕ್ಕೆ, ದೇಶಕ್ಕೆ ಕೀರ್ತಿ ತರುವ ಕಲಾವಿದನಾಗಲಿ ಎಂಬುದು ಜನಶಕ್ತೀ ಮೀಡಿಯಾದ ಕಳಕಳಿ.