ಅಮೃತವನ್ನು ಕಡಿದು ಮಕ್ಕಳಿಗೆ ಉಣಿಸಬೇಕಿರುವ ಜಾಗದಲ್ಲಿ ವಿಷ ಬಡಿಸಲಾಗುತ್ತಿದೆ- ಸಬಿಹಾ ಭೂಮಿಗೌಡ

ಬೆಂಗಳೂರು:ಅಮೃತವನ್ನು ಕಡಿದು ಮಕ್ಕಳಿಗೆ ಉಣ್ಣೀಸಬೇಕಿರುವ ಜಾಗದಲ್ಲಿ ವಿಷ ಬಡಿಸಲಾಗುತ್ತಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಖೇದ ವ್ಯಕ್ತಪಡಿಸಿದರು.

ಹೊಸ ಶಿಕ್ಷಣ ನೀತಿಗಳ ಮೂಲಕ ಪಠ್ಯಪುಸ್ತಕಗಳಲ್ಲಿ ನಡೆಯುತ್ತಿರುವ ಮತೀಯವಾದಿಕರಣ ಮತ್ತು ಇತಿಹಾಸದ ತಿರುಚುವಿಕೆಯ ಕುರಿತು ಶ್ರೀಪಾದ್‌ ಭಟ್‌ ಅವರು ರಚಿಸಿರುವ ʼವಿಷವಟ್ಟು ಸುಡುವಲ್ಲಿʼ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,  ʻಸಮುದ್ರ ಮಂತನದ ಸಮಯದಲ್ಲಿಉಧ್ಬವವಾದ ವಿಷವನ್ನು ಎರಡು ಗುಂಪುಗಳು ಬೇಡ ಎಂದು ಹೇಳಿದ ಸಂದರ್ಭದಲ್ಲಿ ಆ ವಿಶವನ್ನ ಶಿವ ಕುಡಿದ ಕಥೆಯನ್ನು ನಾವೆಲ್ಲಾ ಕೇಳಿದ್ದೇವೆ. ಇದೇ ರೀತಿ ವರ್ತಮಾನದಲ್ಲಿ ವಿಷವನ್ನು ಬಹಳ ಪ್ರಜ್ಙಾಪೂರ್ವಕವಾಗಿ ವ್ಯವಸ್ತಿತವಾಗಿ ನಮ್ಮ ಮುಂದಿಡುವಂತಹ ಕೆಲಸಗಳು ನಡೆಯುತ್ತಿವೆ. ʼವಿಶವಟ್ಟು ಸುಡುವಲ್ಲಿʼ ಕೃತಿಯು ಪಠ್ಯಪುಸ್ತಕವನ್ನು ರಚಿಸುವ ಒಂದು ಆಯಾಮದಲ್ಲಿ ವಿಶವನ್ನು ಹೇಗೆ ಉಣಿಸಲಾಗುತ್ತಿದೆ ಎಂದು ತುಂಬ ತಾರ್ಕಿಕವಾಗಿ ಮತ್ತು ಚಾರಿತ್ರಿಕವಾಗಿ ನಮ್ಮ ಮುಂದೆ ಕಟ್ಟಿಕೊಡುತ್ತದೆ. ಇದರ ಮೂಲಬೀಜಗಳು ಎಷ್ಟು ಹಿಂದಿನಿಂದ ಇವೆ ಮತ್ತು ಯಾವರೀತಿಯ ತಂತ್ರೋಪಯೋಗಗಳಿಂದ ಮತ್ತು ಅದಿಕಾರದಿಂದ ತಂದೊಡ್ಡಲಾಗದೆ ಎಂದು ಸಾಕ್ಷ್ಯಾಧಾರಗಳ ಮೂಲಕ ತಿಳಿಸಿಕೊಡುತ್ತದೆ ಎಂದರು.

ಶಿಕ್ಷಣ ವ್ಯವಸ್ಥೆದಲ್ಲಿ ಅಷ್ಟೇ ಅಲ್ಲದೆ ಜಾತ್ಯತೀತ ಮನೋಭಾವದವರು ಯಾವೆಲ್ಲಾ ರೀತಿಯಲ್ಲಿ ತಮ್ಮ ಬರವಣಿಗೆಗಳಲ್ಲಿ ಮತ್ತು ಲೇಕನಗಳಲ್ಲಿ ಅವರ ಆಲೋಚನೆಗಳನ್ನು ತಂದುಕೊಟ್ಟಿದ್ದಾರೆ ಎಂದು ಅತ್ಯಂತ ಅಚ್ಚುಕಟ್ಟಾಗಿ ಓದಿಸಿ ಹೇಳುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಪಠ್ಯಪುಸ್ತಕವನ್ನು ರಚಿಸುವ ಒಂದು ಆಯಾಮದಲ್ಲಿ‌ ಆಗುತ್ತಿರುವ ಕೋಮುವಾದಿಕರಣವನ್ನು ಬೆಂಬಿಸಿ ಬಹುತ್ವವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿರುವ ಪ್ರಕ್ರಿಯೆಯನ್ನು ಮೂಲಭೂತ ಪ್ರಶ್ನೆಯಾಗಿ ನಮ್ಮ ಮುಂದಿಡುತ್ತದೆ. ಪಠ್ಯದಲ್ಲಿ ಯಾವರೀತಿಯ ವಿಷಯವನ್ನು ಹೊಂದಿರಬೇಕು ಎಂದು ನಮಗೆ ತಿಳಿದಿದ್ದರು ಆದನ್ನು ಹೆದರಿಸುವ ದಾರಿ ಯಾವುದು ಎಂಬುದರ ಕುರಿತ್ತು ನಾವು ಚಿಂತನಮಂಥನವನ್ನು ಮಾಡಬೇಕಿದೆ ಎಂದು ನಮಗೆ ಮನದಟ್ಟುಮಾಡುವಲ್ಲಿ ಈ ಪುಸ್ತಕ ಯಶಸ್ವಿಯಾಗಿದೆʼ ಎಂದು ಸಬಿಯಾ ಭೂಮಿಗೌಡ ಹೇಳಿದರು.

ನ್ಯಾಷನಲ್‌ ಕಾಲೇಜಿನ ಕನ್ನಡ ಪ್ರಾದ್ಯಪಕ ರವಿಕುಮಾರ್‌ ಬಾಗಿ ಮಾತನಾಡಿ, ʻಈ ಪುಸ್ತಕ ಒಂದು ೫ ವರ್ಷಗಳ ಮುಂಚೆ ಬಂದಿದ್ದರೆ ಈ ವಿಷಮ ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗಾದರು ತಡೆಯಲು ಸಹಾಯವಾಗುತ್ತಿತ್ತು ಎನ್ನಿಸುತ್ತದೆ. ಲೋಕದ ಕಣ್ಣಿಗೆ ಯಾವುದು ವಿಷವಾಗಿ ಕಾಣುತ್ತಿದೆಯೋ ಅದು ಈ ಅಂದಭಕ್ತರಿಗೆ ಅಮೃತವಾಗಿ ಕಾಣಿಸುತ್ತದೆ. ಮತೀಯವಾದಿ ರಾಜಕರಣ ಇಡೀ ಸಮಾಜವನ್ನು ಕಬ್ಜ ಮಾಡಿಕೊಂಡುಬಿಟ್ಟಿದೆ. ಈಗ ಈ ವಿಷವನ್ನು ತಟ್ಟೆಯಲ್ಲಿಟ್ಟು ಶಿಕ್ಷಣಯೆಂಬ ಮಾದ್ಯಮದ ಮೂಲಕ ರಾಷ್ಟ್ರ, ರಾಷ್ರ್ಟೀಯತೆ ಹೆಸರಿನಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಉಣಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಬಹುತ್ವ ವನ್ನು ಕಳೆದು ಏಕತ್ವವನ್ನು ತರುವ ಪ್ರಯತ್ನ ನಡೆಯುತ್ತಿದೆ.  ಪುರಾಣ, ನಂಬಿಕೆಗಳ ಮೂಲಕ ದೇವರು ಮತ್ತು ಧರ್ಮ ಎಂಬ ಅಸ್ತ್ರಗಳನ್ನು ಇಡಿದು ಇಡೀ ಚರಿತ್ರೆಯನ್ನೇ ತಿರುಗಿಸಿ ತಮ್ಮದೆಯಾದ ಸಿದ್ದಾಂತವನ್ನು ಹೇಳಹೊರಟಿದ್ದಾರೆ. ಈ ವಿಷವನ್ನು ಹರಡಲು ಮಕ್ಕಳನ್ನು ಮತ್ತು ಪಠ್ಯವನ್ನು ಮುಖ್ಯವಾಗಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಏನೇ ಪದವಿಗಳನ್ನು ಪಡೆದಿದ್ದರು, ಡಾಕ್ಟರೇಟ್ ಗಳನ್ನು ಪಡೆದಿದ್ದರು , ವಿಜ್ಙಾನಿಗಳಾಗಿದ್ದರು, ಪ್ರೊಫೇಸರ್‌ ಗಳಾಗಿದ್ದರು ಜಾತಿಗಳಲ್ಲಿ ಬಿದ್ದು ಒದ್ದಾಡುವುದನ್ನು ಬಿಟ್ಟು ಎದ್ದುಬರುವ ಕೆಲಸವನ್ನು ನಮ್ಮ ಜನ ಮಾಡುತ್ತಿಲ್ಲ. ಇದರಿಂದಾಗಿ ನಮ್ಮ ಪಠ್ಯಪುಸ್ತಕಗಳು ಮತ್ತು ಅವುಗಳನ್ನು ಭೋದಿಸುವ ಕ್ರಮ ಹಾಗೂ ಭೋದಕರು ಇದಕ್ಕೆಲ್ಲಾ ಮೊದಲ ಕಾರಣಕರ್ತೃಗಳಾಗಿದ್ದಾರೆ ಎಂದರು.

ವಿದ್ಯಾಭಾರತಿ ಎಂಬ ಶಿಕ್ಷಣ ಸಂಸ್ಥೆಯ ಮೂಲಕ ೫೦ ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ತಮ್ಮ ವೃತ್ತದಲ್ಲಿ ಸಿಕ್ಕಿಸಿಕೊಂಡಿದ್ದಾರೆ.ಕರ್ನಾಟಕದಲ್ಲಿ ಸಿಟಿ ಪ್ರೊಫೇಸರ್‌ ಕೈಯಲ್ಲಿ ಪಠ್ಯವನ್ನು ಕೊಟ್ಟು ಕಳೆದ ೪ ವರ್ಷಗಳಲ್ಲಿ ರಾಜ್ಯದ ಪರಿಸ್ಥಿತಿಯನ್ನು ಎಷ್ಟು ಹದಗೆಡಿಸಲಾಗಿದೆ ಎಂದು ನಾವು ನೋಡಬಹುದು. ಜ್ಞಾನವೆಂಬ ಅಮೃತವನ್ನು  ಕಡಿದು ಮಕ್ಕಳಿಗೆ ಉಣ್ಣಿಸಬೇಕಾದಂತ ಜಾಗದಲ್ಲಿ ಮಕ್ಕಳೀಗೆ ವಿಷವನ್ನು ಉಣ್ಣಲು ಬಡಿಸಲಾಗುತ್ತಿದೆ. ಹೀಗಾಗಿ ವಿಷವನ್ನು ಕುಡಿವಯುವ ಶಿವರು ನಮ್ಮ ನಾಡಲ್ಲಿ ಹುಟ್ಟಬೇಕಿದೆ ಮತ್ತು ಶಿವನ ಗಂಟಲಲ್ಲಿಯೇ ವಿಷವನ್ನು ತಡೆಯುವ ಪಾರ್ವತಿಯರು ನಮ್ಮ ನಾಡಿನಲ್ಲಿ ಜನಿಸಬೇಕಿದೆʼ ಎಂದು ರವಿಕುಮಾರ್ ಬಾಗಿ ಹೇಳಿದರು.

ಹಿರಿಯ ಚಿಂತಕ ಎಸ್‌ ಜಿ‌ ಸಿದ್ದಾರಾಮಯ್ಯ ಮಾತನಾಡಿ, ʼಇಂದು ನಮ್ಮ ರಾಷ್ಟ್ರದೊಳಗೆ ಪೂರ್ತಿ ದೇಶವೇ ಹತ್ತಿ ಉರಿಯುವಂತ ಕೆಲಸಗಳು ನಡೆಯುತ್ತಿದೆ. ನಮ್ಮಲ್ಲಿ ಪ್ರಜಾಪ್ರಭುತ್ವದ ಅಮೃತಮಂತನ ನಡೆಯಬೇಕಿದೆ. ಇದು ಆಗಬೇಕಾದರೆ ಬೇಕಿರುವ ನಿಜವಾದ ಅರಿವು ಎಂದರೆ ಅದು ಶಿಕ್ಷಣ. ಸಂವಿದಾನದಲ್ಲಿ ಇದಕ್ಕಾಗಿಯೇ ಕಡ್ಡಾಯ ಶಿಕ್ಷಣವೆಂಬ ವಿಷಯವನ್ನು ತರಲಾಗಿದೆ. ಅದರೆ ಇದನ್ನು ಮತ್ತೆ ತಿರುಚಿ ವರ್ಣಾಶ್ರಮದಂತೆ ಕೆಲವು ವರ್ಣಗಳಿಗೆ ಮಾತ್ರ ಶಿಕ್ಷಣ ಎಂಬಂತೆ ಹೊಸ ಶಿಕ್ಷಣ ನೀತಿಗಳನ್ನು ತಂದು ದೇಶದ ಭೌತಿಕತೆಯನ್ನು ನಾಶಮಾಡಲಾಗುತ್ತಿದೆ.  ಶಿಕ್ಷಣ ಪ್ರಜಾಪ್ರಭುತ್ವವದ ರಕ್ಷಾ ಶಕ್ತಿ, ಆದರೆ ಅದರಲ್ಲಿ ಈಗ ವಿಷ ಬಿದ್ದಿದೆ. ಶಿಕ್ಷಣದೊಳಗೆಯೇ ಶಿಕ್ಷಣವಂಚಿತರನ್ನು ಮಾಡಬಹುದಾದಂತಹ ಎಲ್ಲಾ ಸ್ವರೂಪಗಳನ್ನು ಶಿಕ್ಷಣನೀತಿಯೊಳಗೆ ಈಗಾಗಲೆ ಸೇರಿಸಿದ್ದಾರೆ. ಶಿಕ್ಷಣ ಪಡೆಯುತ್ತಿರುವ ಎಲ್ಲಾ ಕೆಳವರ್ಗದ ಮಕ್ಕಳನ್ನ ಮತ್ತೆ ಕಾಲಾಳುಗಾಳನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಸ್ಥಿತಿಯಲ್ಲಿ ವಿಷವಟ್ಟುಸುಡುವಲ್ಲಿ ಕೃತಿಯ ಮಹತ್ವ ಅರ್ಥವಾಗುತ್ತದೆ. ಇಂದಿಗೂ ನಮಗೆ ರಾಜಕೀಯ ಸ್ವತಂತ್ರ್ಯ ಸಿಕಿದೆಯೇ ಹೊರತು ಸಾಂಸ್ಕೃತಿಕ ಸ್ವತಂತ್ರ್ಯ ಸಿಕ್ಕಿಲ್ಲ. ನಮ್ಮ ರಾಜ್ಯದ ಶಿಕ್ಷಣಸಚಿವರು ಹಿಂದಿನ ಎಲ್ಲಾ ಶಿಕ್ಷಣನೀತಿಗಳನ್ನು ಅದ್ಯಾಯನ ಮಾಡಿರಬೇಕು. ಆಗ ಮಾತ್ರ ಹೊಸ ನೀತಿ ಕಾನೂನುಗಳನ್ನು ರಚಿಸುವಾಗ ವಿವೇಕದಿಂದ ಯೋಚಿಸಲು ಅವರಿಗೆ ಸಾದ್ಯವಾಗುತ್ತದೆ. ಹೀಗಾಗಿ ನಾವು ವೈಚಾರಿಕತೆಯನ್ನು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ತುಂಬ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಪುಸ್ತಕ ಓದುವುದು ಮುಖ್ಯವಾಗಿದೆʼ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಮಾವಳ್ಳಿ ಶಂಕರ್‌ ಮಾತಾಡಿ,  ʼರಾಜಕೀಯ ಗುಲಾಮಗಿರಿಗಿಂತ ಸಾಮಾಜಿಕ ಗುಲಾಮಗಿರಿ ಹೆಚ್ಚು ಅಪಾಯಕಾರಿ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಆದರೆ ನಮ್ಮನ್ನು ಇಂದಿಗೂ ಸಾಮಾಜಿಕವಾಗಿ ಹಿಂದಿಡುವ ಕೆಲಸಗಳು ನಡೆಯುತ್ತಲೇ ಇವೆ. ಹೀಗಿರುವಲ್ಲಿ ನಾವು ವಿಷವಟ್ಟು ಸುಡುವಲ್ಲಿ ಪುಸ್ತಕವನ್ನು ಓದುವುದು ತುಂವಾ ಮುಖ್ಯವಾದದ್ದು. ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಶಿಕ್ಷಕರಿಗೂ ಈ ಪುಸ್ತಕ ತಲುಪುವ ರೀತಿಯಲ್ಲಿ ಎಲ್ಲರೂ ಈ ಪುಸ್ತಕವನ್ನು ಓದುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದರು.

ಎಸ್‌ ಎಫ್‌ ಐ ನ ರಾಜ್ಯ ಕಾರ್ಯದರ್ಶಿ ಭೀಮನಗೌಡ ಪುಸ್ತಕದ ಕುರಿತು ಪ್ರತಿಕ್ರಯಿಸಿದರು. ಕ್ರಿಯಾ ಮಾಧ್ಯಮದ ನಿರ್ದೇಶಕಿ ಕೆ ಎಸ್‌ ವಿಮಲಾ ಪ್ರಸ್ತಾವಿಕವಾಗಿ ಮಾತನಾಡಿದರು.  ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ರುದ್ರೇಶ್‌ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿದರು. ಪುಸ್ತಕ ಪ್ರಿಯರು, ಚಿಂತಕರು, ಸಾಹಿತಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *