ಗಾಯಗೊಂಡ ಬಾಲಕಿಯ ಸಹಾಯಕ್ಕೆ ಬಾರದೇ ಫೋನ್‍ನಲ್ಲಿ ದೃಶ್ಯೀಕರಿಸಲು ತಲ್ಲೀನರಾದ ಜನ

ಲಕ್ನೋ: ಉತ್ತರ ಪ್ರದೇಶ ರಾಜ್ಯದ ಕನೌಜ್‍ನಲ್ಲಿ ಅಮಾನವೀಯ ಘಟನೆಯೊಂದ ಜರುಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯು ತನ್ನನ್ನು ಸಹಾಯ ಮಾಡಿ ಅಂಗಲಾಚುತ್ತಿದ್ದರೂ ಸಹ ಸುತ್ತ ನೆರೆದಿದ್ದ ಜನ ಆಕೆಯನ್ನು ರಕ್ಷಣೆ ಮಾಡುವ ಬದಲಾಗಿ ಮೊಬೈಲ್‌ ನಲ್ಲಿ ಚಿತ್ರೀಕರಣ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ವೈರಲ್‌ ಆಗಿರುವ ವಿಡಿಯೋವೊಂದರಲ್ಲಿ ಕನೌಜ್‌ನಲ್ಲಿರುವ ದಕ್ ಬಾಂಗ್ಲಾ ಅತಿಥಿ ಗೃಹದ ಹಿಂದೆ ಮನೆಯಿಂದ ನಾಪತ್ತೆಯಾದ 13 ವರ್ಷದ ಬಾಲಕಿಯೊಬ್ಬಳಿಗೆ ತಲೆಯಿಂದ ಹಿಡಿದು ಮೈ ಮೇಲೆ ಗಾಯಗಳಾಗಿವೆ. ತೀವ್ರವಾದ ಬಳಲಿಕೆಯಿಂದ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದಾಳೆ ಅಲ್ಲದೆ, ತನಗೆ ಸಹಾಯ ಮಾಡುತ್ತಿದ್ದರೂ ಸಹ ಸಹಾಯ ಮಾಡುವುದರ ಬದಲಾಗಿ ಅನೇಕರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆಹಿಡಿಯುತ್ತಿರುವುದು ಕಂಡು ಬಂದಿದೆ.

13 ವರ್ಷದ ಬಾಲಕಿ ಭಾನುವಾರ(ಅಕ್ಟೋಬರ್‌ 23)ದಂದು ಮನೆಯಿಂದ ನಾಪತ್ತೆಯಾಗಿದ್ದಳು. ಹಲವು ಗಂಟೆಗಳ ಬಳಿಕ ತಲೆ ಹಾಗೂ ಮೈ ಮೇಲಿನ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ. ಅಲ್ಲದೇ ಆಕೆಯ ತೋಳುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೂ ಸಹಾಯ ಮಾಡದೇ ಆದರೆ ಈ ವೇಳೆ ಅನೇಕ ವ್ಯಕ್ತಿಗಳು ಸಹಾಯ ಮಾಡದೇ ಆಕೆಯ ಸುತ್ತಾ ಮೊಬೈಲ್ ಹಿಡಿದುಕೊಂಡು ವೀಡಿಯೋ ಮಾಡಿದ್ದಾರೆ.

ವಿಡಿಯೋದಲ್ಲಿ ಸಂಭಾಷಣೆಯೊಂದು ಹರಿದಾಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೀರಾ ಎಂದು ಓರ್ವ ವ್ಯಕ್ತಿ ಕೇಳುತ್ತಿದ್ದರೆ, ಮತ್ತೋರ್ವ ಪೊಲೀಸ್ ಮುಖ್ಯಸ್ಥರ ಸಂಖ್ಯೆಯನ್ನು ಕೇಳುತ್ತಿರುವುದನ್ನು ಧ್ವನಿ ಪ್ರಸಾರವಾಗಿದೆ. ಆದರೆ ಬಾಲಕಿಗೆ ಸಹಾಯ ಮಾಡಲು ಯಾರು ಕೂಡ ಮುಂದಾಗಲಿಲ್ಲ.

ಪೊಲೀಸರು ಬರುವವರೆಗೂ ಬಾಲಕಿ ಕಾಯುತ್ತಿದ್ದಳು. ನಂತರ ಪೊಲೀಸರು ಬಂದು ಆಕೆಯನ್ನು ಕೈಯಲ್ಲಿ ಎತ್ತುಕೊಂಡು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕಳುಹಿಸಿದ್ದಾರೆ. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಎಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಪೊಲೀಸರು ನಿವಾಸಿಗಳ ವಾದವನ್ನು ನಿರಾಕರಿಸುತ್ತಿದ್ದಾರೆ.

ಇದೀಗ ಬಾಲಕಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲದ ಕಾರಣ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗುರ್ಸಹೈಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಪಾಂಡೆ, ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಮತ್ತು ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲು ಕಾಯುತ್ತಿದ್ದಾರೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *