ಒಲಿಂಪಿಕ್ಸ್ ನಿಂದ ವಿನೇಶ್ ಪೊಗಟ್ ಅನರ್ಹ, ಕೈತಪ್ಪಿದ ಚಿನ್ನದಂಥ ಅವಕಾಶ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಚಿನ್ನದ ಪದಕದ ಭರವಸೆ ಮೂಡಿಸಿದ್ದ ಭಾರತದ ವಿನೇಶ್ ಪೊಗತ್ ಅವರನ್ನು ಅನರ್ಹಗೊಳಿಸಲಾಗಿದೆ.

ಮಹಿಳೆಯರ 50 ಕೆಜಿ ತೂಕದ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಪೊಗಟ್ ಅವರನ್ನು ನಿಗದಿಗಿಂತ ಕೆಲವು ಗ್ರಾಂ ತೂಕ ಹೆಚ್ಚು ಹೊಂದಿದ್ದಕ್ಕಾಗಿ ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿದೆ. ಇದರಿಂದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಆಘಾತ ಉಂಟಾಗಿದೆ.

ಇದಕ್ಕೂ ಮುನ್ನ ಮಾಜಿ ವಿಶ್ವ ಚಾಂಪಿಯನ್ ಲ ವಿನೇಶ್ ಪೊಗತ್ ಮಂಗಳವಾರ ನಡೆದ ಮಹಿಳೆಯರ 50 ಕೆಜಿ ವಿಭಾಗದ ಫ್ರೀಸ್ಟೈಲ್ ಸೆಮಿಫೈನಲ್ ನಲ್ಲಿ 5-0 ಅಂಕಗಳಿಂದ ಕ್ಯೂಬಾದ ಯುಸ್ನೆಲಿಯಸ್ ಗುಜ್ಮನ್ ಲೊಪೆಜ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು. ಈ ಮೂಲಕ ಭಾರತಕ್ಕೆ ಕುಸ್ತಿಯಲ್ಲಿ ಈ ಬಾರಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದರು.

ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ವಿನೇಶ್ ಪೋಗತ್ ಸತತ 82 ಪಂದ್ಯಗಳಲ್ಲಿ ಗೆದ್ದು ಅಜೇಯರಾಗಿದ್ದ ಜಪಾನ್ ನ ಯೂ ಸುಸಾಕಿ ಅವರನ್ನು ಸೋಲಿಸಿದ್ದರು. ಈ ಮೂಲಕ ಸತತ ಗೆಲುವಿನ ಕೊಂಡಿ ಕಳಚಿದ ಆಘಾತಕ್ಕೆ ಸುಸಾಕಿ ಒಳಗಾದರು.

ಇದನ್ನೂ ಓದಿಪ್ಯಾರಿಸ್ ಒಲಿಂಪಿಕ್ಸ್: ವಿನೇಶ್‌ ಫೋಗಟ್‌ ಫೈನಲ್‌ಗೆ ಲಗ್ಗೆ

ಯೂ ಸುಸಾಕಿ ಸೋಲಿಯದ ಕುಸ್ತಿಪಟುವಾಗಿದ್ದು ಒಲಿಂಪಿಕ್ ಚಾಂಪಿಯನ್, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅವರ ವಿರುದ್ಧದ ಹೋರಾಟದಲ್ಲಿ 29 ವರ್ಷದ ವಿನೇಶ್ ಪೊಗತ್ ಕೊನೆಯ ಕ್ಷಣದಲ್ಲಿ ಚಿಗರೆಯಂತೆ ಬಿದ್ದು 3-2ರಿಂದ ರೋಚಕ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದರು.

ಒಲಿಂಪಿಕ್ಸ್ ನಲ್ಲಿ ಇದುವರೆಗೆ ಹಾಕಿ ನಂತರ ಭಾರತಕ್ಕೆ ಅತೀ ಹೆಚ್ಚು ಪದಕ ಬಂದಿರುವುದು ಕುಸ್ತಿಯಲ್ಲಿ. ಕುಸ್ತಿಯಲ್ಲಿ ಇದುವರೆಗೆ 7 ಪದಕಗಳು ಬಂದಿದ್ದವು.

ಕೆಡಿ ಜಾಧವ್ (ಪುರುಷರ 52 ಕೆಜಿ ವಿಭಾಗ), ಸುಶೀಲ್ ಕುಮಾರ್ ಕಂಚು (ಪುರುಷರ 66 ಕೆಜಿ ವಿಭಾಗ, 2008 ಬೀಜಿಂಗ್ ಒಲಿಂಪಿಕ್ಸ್ ಮತ್ತು ಬೆಳ್ಳಿ 66 ಕೆಜಿ ವಿಭಾಗ 2012 ಲಂಡನ್ ಒಲಿಂಪಿಕ್ಸ್), ಯೋಗೇಶ್ವರ್ ದತ್ (ಕಂಚು, 60ಕೆಜಿ, 2012 ಲಂಡನ್), ಸಾಕ್ಷಿ ಮಲಿಕ್ (ಮಹಿಳಾ ವಿಭಾಗದ 58ಕೆಜಿ 2016ರಿಯೊ ಒಲಿಂಪಿಕ್ಸ್), ರವಿ ಕುಮಾರ್ ದಾಹಿಯಾ (57 ಕೆಜಿ 2020ರ ಟೊಕಿಯೊ ಒಲಿಂಪಿಕ್ಸ್), ಭಜರಂಗ್ ಪೂನಿಯಾ (ಕಂಚು, 65 ಕೆಜಿ ವಿಭಾಗ, 2020 ಟೊಕಿಯೊ ಒಲಿಂಪಿಕ್ಸ್).

ದೂರು ನೀಡಲು ಭಾರತ ನಿರ್ಧಾರ: ಕೇವಲ ಕೂದಲೆಳೆ ಅಂತರದಲ್ಲಿ ಫೈನಲ್ ಪಂದ್ಯ ಆಡುವುದರಿಂದ ವಿನೇಶ್ ಫೋಗಟ್ ಅವಕಾಶ ಕಳೆದುಕೊಂಡಿದ್ದು, ಅವರ ಅನರ್ಹತೆ ಪ್ರಶ್ನಿಸಿ ದೂರು ನೀಡಲು ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ನಿರ್ಧರಿಸಿದೆ.

 

Donate Janashakthi Media

Leave a Reply

Your email address will not be published. Required fields are marked *