ನವದೆಹಲಿ : ಇನ್ನೆನು ಬಂಗಾರ ಇಲ್ಲವೆ ಬೆಳ್ಳಿಯ ಪದಕವನ್ನು ಭಾರತಕ್ಕೆ ನೀಡಲಿದ್ದ ವಿನೇಶ್ ಫೋಗಟ್ ಒಲಿಂಪಿಕ್ಸ್‌ನಿಂದ ಅನರ್ಹರಾಗಿದ್ದರೆ ಎಂಬ ಸುದ್ದಿ ಭಾರತೀಯ ಕ್ರೀಡಾಭಿಮಾನಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ಅಷ್ಟೆ ಇಲ್ಲ ಇದರಲ್ಲಿ ದೇಶದ ಹಾಗೂ ಅಂತರಾಷ್ಟ್ರೀಯ ಕುತಂತ್ರ ಇದೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.
ಅನರ್ಹ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬ ಪ್ರತಿಕ್ರಿಯೆ ನೀಡಿದೆ. ಕುಸ್ತಿ ಫೆಡರೇಶನ್ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ವಿನೇಶ್ ಕುಟುಂಬ ಆರೋಪಿಸಿದೆ.
ತಲೆಯ ಮೇಲಿನ ಕೂದಲು ಕೂಡ 100 ಗ್ರಾಂ ತೂಕವನ್ನು ಹೆಚ್ಚಿಸುತ್ತದೆ. ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕೈವಾಡ ಇದರಲ್ಲಿದೆ. ಇದರಲ್ಲಿ ಸರ್ಕಾರ ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕೈವಾಡವಿದೆ ಎಂದು ವಿನೇಶ್ ಫೋಗಟ್ ಅವರ ಮಾವ ರಾಜ್ಪಾಲ್ ರಾಠಿ ಆರೋಪಿಸಿದ್ದಾರೆ.
ಇದೊಂದು ಹೃದಯ ವಿದ್ರಾವಕ ಸುದ್ದಿಯಾಗಿದೆ. ಇದರ ಹಿಂದೆ ಷಡ್ಯಂತ್ರ ಇದೆ. ವಿನೇಶ್ ಜೊತೆ ನಾನಿನ್ನೂ ಮಾತನಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಫೋಗಟ್ ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದೀಗ ಒಲಿಂಪಿಕ್ಸ್ನಲ್ಲೂ ಮುಂದುವರಿದಿದೆ. ಫೋಗಟ್ ಅನರ್ಹ ಮಾಡಿರೋದು ಬೇಸರ ತಂದಿದೆ. ನಿನ್ನೆಯ ಪಂದ್ಯದಲ್ಲಿ ಅವರ ತೂಕ ಹೆಚ್ಚಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಒಲಿಂಪಿಕ್ಸ್ ನಿಂದ ವಿನೇಶ್ ಪೊಗಟ್ ಅನರ್ಹ, ಕೈತಪ್ಪಿದ ಚಿನ್ನದಂಥ ಅವಕಾಶ
ಈ ಕುರಿತು ಕ್ರೀಡಾ ವಿಶ್ಲೇಷಕ ಹರೀಶ್ ಗಂಗಾಧರ ಫೆಸ್ಬುಕ್‌ನಲ್ಲಿ ಬರೆದುಕೊಂಡಿದ್ದು, ಕಳೆದಾರು ತಿಂಗಳಲ್ಲಿ ನಾನು ನನ್ನ ದೇಹದ ತೂಕ ಇಳಿಸಿಕೊಂಡಿದ್ದೇನೆ. ಪ್ರತಿದಿನ ನನ್ನ ದೇಹದ ತೂಕ ನಾನೇ ಚೆಕ್ ಮಾಡಿಕೊಳ್ಳುತ್ತೇನೆ. ನಾನು ಯಾವ್ ಒಲಿಂಪಿಕ್ಸ್ನಲ್ಲಿ ಕೂಡ ಭಾಗವಹಿಸಬೇಕಿಲ್ಲ ಆದರೆ ವೆಹಿಂಗ್ ಸ್ಕೇಲ್ ಮೇಲೆ ದಿನಕ್ಕೊಮ್ಮೆಯಾದರೂ ನಿಲ್ಲುತ್ತೇನೆ. ಇನ್ನು ಒಲಿಂಪಿಕ್ ಸ್ವರ್ಣ ಪದಕಕ್ಕೆ ಆಡುವ ಅರ್ಹತೆ ಗಿಟ್ಟಿಸಿದ ಆಟಗಾರ್ತಿ ತನ್ನ ದೇಹದ ತೂಕದ ಮೇಲೆ ನಿಗಾ ಇಡಲ್ಲ ಅನ್ನುವ ಮಾತು ನಂಬಲಾಸಾಧ್ಯ.
53 ತೂಕದ ಕೆಟಗರಿಯಲ್ಲಿ ಒಲಿಂಪಿಕ್ ಕೋಟ ಪಡೆದ ಅಂತಿಮ್ ಪಂಘಲ್ ಅವರನ್ನು ಗಮದಲ್ಲಿರಿಸಿಕೊಂಡು 50 ಕೆಜಿ ಕೆಟಗರಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿ ಆ ಕೆಟಗರಿಯಲ್ಲಿ ಕೋಟ ಪಡೆದ ಫೊಗಾಟ್ ನಿಂದ ಇಂತಹ ಪ್ರಮಾದ ನಿರೀಕ್ಷಿಸಲಾಗದು. ವಿಶ್ವ ದರ್ಜೆಯ ಕೋಚ್ ವೋಲ್ಲರ್ ಏಕೋಸ್ ಜೊತೆಗೆ ಬೆಂಗಳೂರು ಮತ್ತು ಸ್ಪೇನ್ ದೇಶಗಳಲ್ಲಿ ನಿರಂತರ ತಯಾರಿಯಲ್ಲಿ ತೊಡಗಿದ್ದ ಪೊಗಾಟ್ 150 ಗ್ರಾಂ ಮೇಲೆ ನಿಗಾ ಇಡಲಿಲ್ಲವೇ??? ಪದಕ ಬರುತ್ತೋ ಬಿಡುತ್ತೋ ಆದರೆ ಫೊಗಾಟ್ ಅವರ ಈ ಕ್ಷಣದ ಮನಸ್ಥಿತಿ ಹೇಗಿರಬಹುದು ಅನ್ನುವುದರ ಊಹೆ ಕೂಡ ಮಾಡಿಕೊಳ್ಳಲಾಗುವುದಿಲ್ಲ… ನಿನ್ನೆ ಶುಭಾಷಯ ಕೋರದವರೆಲ್ಲಾ ಇಂದು ಸಾಂತ್ವನ ಹೇಳಲು ಮುಂದಾಗಿದ್ದಾರೆ. ಸಂದೇಹಗಳಲ್ಲೊಂದು ಸ್ಯಾಡಿಸ್ಟಿಕ್ ವ್ಯಂಗ್ಯವಿದೆ..
ದೇಶದ ಕ್ರೀಡಾ ಇತಿಹಾಸದ ಪುಸ್ತಕಗಳಲ್ಲಿ ಸುವರ್ಣ ಅಧ್ಯಾಯವಾಗಬೇಕಿದ್ದ ಈ ಸಾಧನೆ ರಾತ್ರೋರಾತ್ರಿ ಕರಾಳ ಅಧ್ಯಾಯವಾಗಿಬಿಟ್ಟಿತು ಎಂದು ಬರೆದುಕೊಂಡಿದ್ದಾರೆ.
ಮೂರು ಪಂದ್ಯಗಳಲ್ಲಿ ಕಾಣದ 100 ಗ್ರಾಂ ಹೆಚ್ಚಳ ಈಗ ಎಲ್ಲಿಂದ ಕಂಡು ಬಂತು? ಇದರಲ್ಲಿ ಏನೋ ಷಡ್ಯತಂತ್ರ ಇರಬೇಕು. ಇವರು ಪದಕವನ್ನು ಗೆದ್ದಿದ್ದರೆ ಅದು ಮೋದಿಯವರಿಗೆ ಸೋಲಾಗುತ್ತಿತ್ತು ಹಾಗಾಗಿ ಇಲ್ಲಿ ರಾಜಕೀಯ ಕುತಂತ್ರ ನಡೆದಿದೆ ಎಂದು ವಿನೇಶ್ ಫೋಗಟ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.