ಜಿಂದಾಲ್‌ ಕಂಪನಿ ವಿರುದ್ಧಪ್ರತಿಭಟಿಸಿದ ರೈತರ ಮೇಲೆ ಪೊಲೀಸ್‌ ಲಾಠಿಚಾರ್ಜ್‌

ಭುವನೇಶ್ವರ :  ರೈತರು ತಮ್ಮ ಭೂಮಿ ಮತ್ತು ವೀಳ್ಯದೆಲೆ ತೋಟುವನ್ನು ಉಳಿಸಿಕೊಳ್ಳವುದಕ್ಕಾಗಿ  ಜಿಂದಾಲ್‌ ಸ್ಟೀಲ್‌ ವರ್ಕ್‌ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಲಾಠೀಚಾರ್ಜ್‌ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಧಿಂಕಿಯಾ ಗ್ರಾಮದ ಬಳಿ ನಡೆದಿದೆ.

ಧಿಂಕಿಯಾ, ನುಗಾಂವ್ ಮತ್ತು ಗಡಕುಜಾಂಗ್‌ನ ಕಡಲತೀರದ ಗ್ರಾಮ ಪಂಚಾಯತ್‌ಗಳಲ್ಲಿ ಉಕ್ಕಿನ ಸ್ಥಾವರವನ್ನು ಸ್ಥಾಪಿಸಲು JSWಗೆ ಭೂಮಿ ಮತ್ತು ವೀಳ್ಯದೆಲೆ ತೋಟಗಳನ್ನು ನೀಡಲು ಒಡಿಶಾ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದರು.

ತಮ್ಮ ಭೂಮಿ ಮತ್ತು ವೀಳ್ಯದೆಲೆ ತೋಟಗಳನ್ನು ಉಳಿಸಿಕೊಳ್ಳಲು ಜಿಂದಾಲ್ ಸ್ಟೀಲ್ ವರ್ಕ್ಸ್ (JSW) ಲಿಮಿಟೆಡ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ತೋಟಗಳನ್ನು ಕೆಡವದಂತೆ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಪೊಲೀಸರು ಮಾರಣಾಂತಿಕವಾಗಿ ಲಾಠಿ ಚಾರ್ಜ್ ಮಾಡಿದ್ದು, ಮಹಿಳೆಯರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರವಾಗಿ ಗಾಯಗೊಂಡಿದ್ದಾರೆ.

ಧಿಂಕಿಯಾ ಗ್ರಾಮದ ಮಹಿಳೆಯರು ಈ ಹಿಂದೆ ದೇಬೇಂದ್ರ ಸ್ವೈನ್ ಅವರನ್ನು ಬಂಧಿಸುವ ಪೊಲೀಸರ ಪ್ರಯತ್ನವನ್ನು ವಿಫಲಗೊಳಿಸಿದ್ದರು, ನಂತರ ನೂರಾರು ಜನರು ತಕ್ಷಣವೇ ಪೊಲೀಸರನ್ನು ಗ್ರಾಮವನ್ನು ತೊರೆಯುವಂತೆ ಒತ್ತಾಯಿಸಿದರು. “ಪೊಲೀಸ್ ಅಧಿಕಾರಿಗಳು ನಮ್ಮನ್ನು ನಿರ್ದಯವಾಗಿ ಥಳಿಸಿದ್ದಾರೆ, ಅವರು ಜಿಂದಾಲ್‌ನಿಂದ ಹಣವನ್ನು ತೆಗೆದುಕೊಂಡಿದ್ದಾರೆ” ಎಂದು 7 ನೇ ತರಗತಿಯ ಹುಡುಗಿ ಸುಭಾಸ್ಮಿತಾ ಸತ್ಪತಿ ಆರೋಪಿಸಿದ್ದಾರೆ.

“ನಮ್ಮ ಭೂಮಿ ಮತ್ತು ಮನೆಗಾಗಿ ನಾವು ಹೋರಾಡುತ್ತಿರುವುದು ನಮ್ಮ ಏಕೈಕ ತಪ್ಪು. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ನಮ್ಮ ಸ್ನೇಹಿತರೊಬ್ಬರು ನೆಲದ ಮೇಲೆ ಬಿದ್ದಾಗ ಅವರು ಕೆಟ್ಟದಾಗಿ ಥಳಿಸಿದ್ದಾರೆ” ಎಂದು ಸುಭಾಸ್ಮಿತಾ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ರಾಜ್ಯ ಸರಕಾರ ಪೊಲೀಸರನ್ನು ಬಳಸಿ ನಮ್ಮ ಮೇಲೆ ದಾಳಿ ನಡೆಸುತ್ತಿದೆ. ನಾವು ಯಾವುದೇ ಕಾರಣಕ್ಕೂ ಭೂಮಿಯನ್ನು ಕೊಡುವುದಿಲ್ಲ ಎಂದು ಪ್ರತಿಭಟನೆಕಾರರು ಎಚ್ಚರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *