ವಿಜಯಪುರ: ಪ್ರೇಯಸಿ ಕಣ್ಣೆದುರಿಗೆ ಪ್ರಿಕಕರನನ್ನು ಕೊಲೆ ಮಾಡಿರುವ ದುರ್ಘಟನೆವೊಂದು ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿ ಶವವನ್ನೂ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಕೊಲೆಯಾದ ಯುವಕ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ.
ಪ್ರೇಯಸಿಯ ಕಣ್ಣೆದುರೇ ಪ್ರಿಯಕರ ರವಿ ನಿಂಬರಗಿ(32)ಯನ್ನು ಭೀಕರವಾಗಿ ಕೊಲೆಗೈದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಅನ್ಯಕೋಮಿನ ಯುವತಿ ಅಮೀನಾ ಬೇಗಂನನ್ನು ಪ್ರೀತಿಸುತ್ತಿದ್ದ ರವಿಯನ್ನು ಕೊಲೆಗೈಯಲು ಯುವತಿಯ ಮನೆಯವರು ಸಂಚು ಮಾಡಿದರು. ಬರೋಬ್ಬರಿ 8 ಜನರು ರವಿ ನಿಂಬರಗಿ ಮೇಲೆ ದಾಳಿ ಮಾಡಿದ್ದಾರೆ. ಯುವಕನನ್ನು ಅಟ್ಟಾಡಿಸಿ ಹೊಡೆದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಮುಖ್ಯಮಂತ್ರಿಗಳೇ ತಮ್ಮ ಬದ್ಧತೆ ಸಂವಿಧಾನದ ಮೌಲ್ಯಗಳಿಗಿರಲಿ: ಪ್ರತಿಭಟನಾಕಾರರ ಆಗ್ರಹ
ರವಿ ಬಳಗಾನೂರಿನಿಂದ ಸಂತೆ ಮಾಡಿಕೊಂಡು ಬರುವ ವೇಳೆ ಈ ಘಟನೆ ನಡೆದೆ. ಘಟನೆ ನಡೆಯುತ್ತಿದ್ದಂತೆ ಯುವಕನ ಮನೆಗೆ ಓಡೋಡಿ ಬಂದು ಯುವತಿ ವಿಷಯ ಮುಟ್ಟಿಸಿದ್ದಾರೆ. ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಕೊಲೆಗಾರರು ಹಾಗೂ ಮೃತದೇಹದ ಪತ್ತೆಗೆ ತೀವ್ರ ಶೋಧ ಕೈಗೊಂಡಿದ್ದಾರೆ. ಯುವಕ ಬದುಕಿದ್ದಾನಾ ಅಥವಾ ಆರೋಪಿಗಳು ಕೊಲೆ ಮಾಡಿದ್ದಾರಾ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬರಬೇಕಿದೆ.
ಬಳಗಾನೂರ ಗ್ರಾಮದ ರವಿ ನಿಂಬರಗಿ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯೆ ಸಾಕಷ್ಟು ಸಲ ವೈಮನಸ್ಸು ಉಂಟಾಗಿತ್ತು. ಯುವತಿಯ ಪೋಷಕರು ರವಿಯ ಮೇಲೆ ಹಲ್ಲೆ ಮಾಡಲು ಸಂಚು ರೂಪಿಸಿದ್ದರು.
32 ವರ್ಷದ ರವಿ ನಿಂಬರಗಿ ಕೊಲೆ ಆಗಿದ್ದಾನೆ ಎನ್ನಲಾಗಿದ್ದು, ಅವನ ಶವ ಇನ್ನೂ ಪತ್ತೆಯಾಗಿಲ್ಲ. ಯುವತಿಯೇ ತಮ್ಮ ಕುಟುಂಬದ ಎಂಟು ಮಂದಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಶುಕ್ರವಾರ ಸಂಜೆಯೇ ಘಟನೆ ನಡೆದಿದೆ.
ಇದನ್ನು ಓದಿ: ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು?
ರವಿ ನಿಂಬರಗಿಯ ಕುಟುಂಬಸ್ಥರು ನಿನ್ನೆಯಿಂದ ತಮ್ಮ ಮಗ ಕಾಣಿಯಾಗಿದ್ದಾನೆ ಎಂದು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಬಳಗಾನೂರು ಗ್ರಾಮಕ್ಕೆ ಭೇಟಿ ನೀಡಿ ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಯುವತಿಯ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿ ನಿಂಬರಗಿ ಸೋದರ ಶುಕ್ರವಾರ ಮಧ್ಯಾಹ್ನವೇ ಅತ ಮನೆಯಿಂದ ಹೊರ ಹೋಗಿದ್ದನು. ಸಂಜೆ ಐದು ಗಂಟೆಗೆ ಆತನನ್ನ ಕೊಲ್ಲಲಾಗಿದೆ ಎಂಬ ಸುದ್ದಿ ಬಂತು. ಕೊಲೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಆತನ ಚೀಲ ಮತ್ತು ಚಪ್ಪಲಿ ಸಿಕ್ಕಿದೆ. ಯುವತಿಯ ಕುಟುಂಬದವರಾದ ಅಲ್ತಾಫ್ ಮತ್ತಿ ಇಸ್ಮಾಯಿಲ್ ಸೇರಿದಂತೆ ಎಂಟು ಜನರು ಕೊಲೆ ಮಾಡಿದ್ದಾರೆ. ಸಂಜೆ ಸುಮಾರು ಏಳು ಗಂಟೆಗೆ ಮನೆ ಹತ್ತಿರ ಬಂದಿದ್ದ ಯುವತಿಯೇ ನಮಗೆ ಕೊಲೆಯಾಗಿದೆ ಎಂದು ಹೇಳಿದ್ದಳು.