ವಿಜಯಪುರ ಜಿಲ್ಲೆ: ಬಸ್ಸಿಗಾಗಿ ಪ್ರತಿನಿತ್ಯ ಜನರ ಪರದಾಟ

ವಿಜಯಪುರ: ಜನರ ಪರದಾಟ ಇವತ್ತೊಂದು ದಿನದಲ್ಲ, ಇದು ದಿನನಿತ್ಯದ ಪರದಾಟವಾಗಿದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸ್ಸು ನಿಲ್ದಾಣದಲ್ಲಿ ಕಂಡ ಈ ದೃಶ್ಯ ಇಲ್ಲಿಯ ಜನರ ದಿನನಿತ್ಯದ ಬದುಕಿನಲ್ಲಿ ಒಂದಾಗಿದೆ.

ಕೂಲಿ ಮಾಡುವ ಜನರು, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸಣ್ಣಪುಟ್ಟ ವ್ಯಾಪಾರ ಮಾಡುವ ವ್ಯಾಪಾರಸ್ಥರು, ಊರು ಕೇರಿಗೆಂದು ಹೋಗುವವರು ದಿನನಿತ್ಯ ಅನುಭವಿಸುವ ಹಿಂಸೆ ಎಂದು ಹೇಳಬಹುದು.

ಬಿಜಾಪುರ ಜಿಲ್ಲೆಯನ್ನು ಈ ಮೊದಲು ಬಿಜ್ಜನಹಳ್ಳಿ ವಿಜಯಪುರ ಎಂಬ ಹೆಸರಿದ್ದವು. ಜಿಲ್ಲೆಯೂ ಐತಿಹಾಸಿಕ ಸ್ಥಳಗಳಿಂದ ಕೂಡಿದ್ದು, 10 -11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರು ಸ್ಥಾಪಿಸಿದರು. ನಂತರದ ದಿನಗಳಲ್ಲಿ ಅಂದರೆ 12ನೇ ಶತಮಾನದ ಕೊನೆಯಲ್ಲಿ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಒಳಗಾದ ಬಿಜಾಪುರ, ಕ್ರಿ.ಶ. 1247ರಲ್ಲಿ ಬೀದರಿನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು ಎಂಬ  ಇತಿಹಾಸ ಇದೆ. ಈಗ ಇಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಒಟ್ಟಾಗಿ ಬದುಕುತ್ತಿದ್ದಾರೆ.

ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯಲ್ಲಿ ಜನರಿಗಾಗಿ ಸಂಚಾರದ ವ್ಯವಸ್ಥೆ ಇಲ್ಲವೆಂಬುವುದೇ ಬೇಸರದ ಸಂಗತಿ. ಇಂಡಿ ತಾಲ್ಲೂಕಿನ ಬಸ್ ನಿಲ್ದಾಣಕ್ಕೆ ಬೆಳಗೆ 11 ಗಂಟೆಗೆ ನಾನು ಬಂದೆ. ಸರಿಸುಮಾರು 2 ಗಂಟೆಗಳ ಕಾಲ ಬಸ್ಸಿಗಾಗಿ ಕಾಯ್ದು ಕುಳಿತು ಸಾಕಾಗಿ ಹೊಯಿತು. 1 ಗಂಟೆ 10 ನಿಮೀಷಕ್ಕೆ ಬಸ್ ಬಂದಿತ್ತು. ಅಷ್ಟೊತ್ತಿಗಾಗಲೆ ಬಸ್ ನಿಲ್ದಾಣದಲ್ಲಿ ದೊಡ್ಡ ಜನರ ಸಮೂಹವೆ ನೆರೆದಿತ್ತು. ಇದನ್ನು ನೋಡಿದ ನನಗೆ ಬೆಂಗಳೂರ ಮೆಜೆಸ್ಟಿಕ್ ಬಸ್ ನಿಲ್ದಾಣ ನೆನಪಿಗೆ ಬಂತು. ಅಲ್ಲಿಯ ವಿಷಯ ಬೇರೆ ದೊಡ್ಡ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದ ಜನರ ದಿನನಿತ್ಯದ ಬದುಕಿನ ಒಂದು ಭಾಗ, ಅಲ್ಲಿ ಸಾಕಷ್ಟು ಬಸ್ಸಿನ ವ್ಯವಸ್ಥೆ ಕೂಡ ಇದೆ. ಬೆಂಗಳೂರಿಗೆ ಹೊಲಿದಸಿದರೆ ಬಿಜಾಪೂರ ಚಿಕ್ಕದು, ಆದರೂ ಇಲ್ಲಿ ಇಷ್ಟೊಂದು ಪರದಾಟ ಕಂಡು ಧಿಗ್ಭ್ರಮೆಗೊಂಡಿರುವೆ.

ಇದು ಇಂಡಿ ತಾಲ್ಲೂಕಿನ ಸಮಸ್ಯೆ ಒಂದೇಯಲ್ಲ. ಚಡಚಣ ತಾಲೂಕಿನ ಸಮಸ್ಯೆ ಕೂಡ ಹೌದು.

ಚಡಚಣ ತಾಲೂಕಿನ ಹೊರ್ತಿ ಎಂಬ ಊರಿನಲ್ಲಿ ಸಂಜೆಯಾದರೆ ಸಾಕು 5 ರಿಂದ 8 ಕಿಲೋ ಮೀಟರ್ ನ ಪಕ್ಕದ ಊರಿಗೆ 400 ರಿಂದ 500 ರೂಪಾಯಿ ಬಾಡಿಗೆಗೆ ಕೇಳತ್ತಾರೆ. ಬೇರೆ ಬೇರೆ ಹಳ್ಳಿ ಜನರು ಹೊರ್ತಿಗೆ ಹೋಗಿ ಸಂತೆ ಮಾಡುತ್ತಾರೆ. ಆದರೂ ಕೂಡ ಅಲ್ಲಿ ಬಸ್ಸಿನ ವ್ಯವಸ್ಥೆ ಇಲ್ಲ. ಸಂಜೆ 5.30 ಕೊನೆಯ ಬಸ್ ಇದೆ. ಆ ಜನರಿಗೆ 500 ರೂಪಾಯಿ ಕೊಟ್ಟು ಊರು ತಲುಪಲು ಸಾಧ್ಯವೆ.??! ಅಲ್ಲಿನ ಜನಪ್ರತಿನಿಧಿ, ಶಾಸಕರು, ಜಿಲ್ಲಾ ಅಧಿಕಾರಿಗಳು ಈ ಬಗ್ಗೆ ಯಾವುದೇ ಗಮನವನ್ನು ಹರಿಸುತ್ತಿಲ್ಲ.

ಈ ಸಮಸ್ಯೆಯನ್ನು ತಕ್ಷಣವೇ ಆಡಳಿತ ನಡೆಸುವವರು ಬಗೆಹರಿಸಲು ಮುಂದಾಗಬೇಕು. ಜನರ ನೆಮ್ಮದಿಯಿಂದ ಬದುಕುವಂತಹ ವಾತವರಣ ನಿರ್ಮಾಣ ಮಾಡಬೇಕು.

ವರದಿ: ಪ್ರಿಯಾಂಕಾ ಮಾವಿನಕರ್

Donate Janashakthi Media

Leave a Reply

Your email address will not be published. Required fields are marked *