- ಬಸವರಾಜ್ ಹೊರಟ್ಟಿ ರಾಜಿನಾಮೆ
- ಹಂಗಾಮಿ ಸಭಾಪತಿಯಾಗಿ ರಘುನಾಥ್ ಆಯ್ಕೆ
ಬೆಂಗಳೂರು : ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿಯನ್ನಾಗಿ ರಘುನಾಥ್ ಮಲ್ಕಾಪುರೆ ಅವರನ್ನು ನೇಮಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
ಮೇಲ್ಮನೆ ಸಭಾಪತಿ ಕಚೇರಿಯ ಕರ್ತವ್ಯಗಳನ್ನು ನಿಭಾಯಿಸುವ ಸಲುವಾಗಿ ರಘುನಾಥ್ ಮಲಕಾಪುರೆಯವರನ್ನು ನೇಮಕಮಾಡಲಾಗಿದೆ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಭಾರತದ ಸಂವಿಧಾನದ 184 ನೇ ವಿಧಿಯ ಷರತ್ತು(1) ರ ಅನ್ವಯ ಹಂಗಾಮಿ ಸಭಾಪತಿ ನೇಮಕ ಮಾಡಲಾಗಿದ್ದು, ಮೇ 17 ರಿಂದಲೇ ಅಧಿಕಾರ ಜಾರಿಗೆ ಬರಲಿದೆ. ಸದನವು ಅಧ್ಯಕ್ಷರನ್ನ ನೇಮಕ ಮಾಡುವವರೆಗು ಮಲಕಾಪುರೆ ಅವರೇ ಸಭಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಹಾಗಾಗಿ ಮಲಕಾಪುರೆಯವರು ಮಂಗಳವಾರ ಅಧಿಕಾರಕ್ಕೇರಿದ್ದರಿಂದ ಪರಿಷತ್‌ನ ಕಾರ್ಯದರ್ಶಿ ಕೆ.ಆರ್. ಮಹಲಕ್ಷ್ಮಿ ಅವರು ಶುಭಕೊರಿದರು.
ಈಗಾಗಿ ಹಂಗಾಮಿ ಸಭಾಪತಿಗಳನ್ನು ಭೇಟಿಯಾದ ಹೊರಟ್ಟಿಯವರು ಮಂಗಳವಾರ ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಬಗ್ಗೆ ತಮ್ಮ ನಿವಾಸದಲ್ಲಿ ಮಾತನಾಡಿದ ಹೊರಟ್ಟಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲರು ಅಂಗೀಕಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.