ವಿಧಾನ ಮಂಡಲದ 15 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು-ಸದಸ್ಯರುಗಳ ನೇಮಕ

ಬೆಂಗಳೂರು: ಇತ್ತೀಚಿಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿದಿದ್ದು, ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ ಮಾಡಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಕ್ಕುಬಾಧ್ಯತೆಗಳ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

2021-2022ನೇ ಸಾಲಿನ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲಾಗಿದೆ. 9 ಜಂಟಿ ಸಮಿತಿಗಳು ಹಾಗೂ 6 ವಿಧಾನಸಭೆಯ ಸಮಿತಿಗಳನ್ನು ರಚಿಸಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.

ಜಂಟಿ ಸಮಿತಿಗಳು:

ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ರಮೇಶ್ ಕುಮಾರ್ ಅಧ್ಯಕ್ಷರಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿ ಸದಸ್ಯರಿದ್ದಾರೆ.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷರಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಕುಮಾರ್ ಬಂಗಾರಪ್ಪ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾಗಿದ್ದು, ಸಮಿತಿಗೆ ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರನ್ನು ನೇಮಿಸಲಾಗಿದೆ.

ಶಾಸಕ ರವಿ ಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ಅಧೀನ ಶಾಸನ ರಚನಾ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿ ಸದಸ್ಯರನ್ನು ನೇಮಿಕ ಮಾಡಲಾಗಿದೆ.

ಸಾ ರಾ ಮಹೇಶ್ ಅಧ್ಯಕ್ಷತೆಯಲ್ಲಿ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕಿ ಕೆ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗ್ರಂಥಾಲಯ ಸಮಿತಿ ಅಧ್ಯಕ್ಷರಾಗಿದ್ದು, ವಿಧಾನಸಭೆಯ 5 ಸದಸ್ಯರು ಮತ್ತು ವಿಧಾನಪರಿಷತ್ತಿನ 3 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಜಿ ಸೋಮಶೇಖರ ರೆಡ್ಡಿ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ವಿಧಾನಸಭೆಯ ಸಮಿತಿಗಳು :

ಶಾಸಕ ಅಭಯ್ ಪಾಟೀಲ್ ಅಧ್ಯಕ್ಷತೆಯಲ್ಲಿ ಅಂದಾಜುಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಭರವಸೆಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಧ್ಯಕ್ಷತೆಯಲ್ಲಿ ಹಕ್ಕು ಬಾಧ್ಯತೆಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 11 ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಉಪಸಭಾಧ್ಯಕ್ಷ ಚಂದ್ರಶೇಖರ ಮಾಮನಿ ಅಧ್ಯಕ್ಷತೆಯಲ್ಲಿ 11 ಸದಸ್ಯರ ಖಾಸಗಿ ಸದಸ್ಯರುಗಳ ವಿಧೇಯಕ ನಿರ್ಣಯಗಳ ಸಮಿತಿ, 16 ಸದಸ್ಯರ ಅರ್ಜಿಗಳ ಸಮಿತಿ, ಹಾಗೂ 13 ಸದಸ್ಯರ ವಸತಿ ಸೌಕರ್ಯ ಸಮಿತಿಯನ್ನು ರಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *