ಬೆಂಗಳೂರು| ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶ: 50 ರೂ. ಶುಲ್ಕ

ಬೆಂಗಳೂರು: ಇನ್ನು ಮುಂದೆ ವೀಕೆಂಡ್ ಗಳಲ್ಲಿ ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲ್ ಘೋಷಣೆ ಮಾಡಿದ್ದೂ, ಆದರೆ ಅದರ ಜೊತೆಗೆ ಸರ್ಕಾರ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ.

ಸಾರ್ವಜನಿಕರಿಗೆ ಇಷ್ಟು ದಿನ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ನಿಂತು ಫೋಟೋ ಹೊಡೆಸಿಕೊಳ್ಳುವುದಷ್ಟೇ ಅವಕಾಶವಾಗಿತ್ತು. ಆದರೆ ಈಗ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಜೂನ್ 1 ರಿಂದ ಪ್ರತೀ ತಿಂಗಳ ಎಲ್ಲಾ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ ವಿಧಾನಸೌಧವನ್ನು ಇನ್ನಷ್ಟು ಹತ್ತಿರದಿಂದ ನೋಡಬಹುದು ಎಂದು ಖುಷಿಯಲ್ಲಿದ್ದ ಜನರಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ.

ಇದನ್ನೂ ಓದಿ: ಬೆಂಗಳೂರು| ರಾಜ್ಯಾದ್ಯಂತ 5 ದಿನ ಭಾರಿ ಮಳೆ: ಐಎಂಡಿ

ವಿಧಾನಸೌಧದ ಒಳಗೆ ಪ್ರವೇಶಿಸಲು ಆನ್ ಲೈನ್ ಮೂಲಕ ಬುಕಿಂಗ್ ಮಾಡಿ ಶುಲ್ಕ ಪಾವತಿಸಬೇಕಾಗುತ್ತದೆ. ಕೆಸ್ ಟಿಡಿಸಿ ವೆಬ್ ಸೈಟ್ ನಲ್ಲಿ ನೀಡಲಾಗುವ ಸ್ಲಾಟ್ ಗಳ ಆಧಾರದಲ್ಲಿ ಬುಕಿಂಗ್ ಮಾಡಿ ಶುಲ್ಕ ಪಾವತಿಸಿದರೆ ಒಳಗೆ ಪ್ರವೇಶಿಸಲು ಅನುಮತಿ ಸಿಗುತ್ತದೆ. 16 ವರ್ಷದೊಳಗಿನವರಿಗೆ ಉಚಿತ ಪ್ರವೇಶವಿದೆ. ಆದರೆ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಲಾ 50 ರೂ. ಶುಲ್ಕ ವಿಧಿಸಲಾಗುತ್ತದೆ.

ಇದಕ್ಕೆ ಬಿಜೆಪಿ ಭಾರೀ ಟೀಕೆ ನಡೆಸಿದೆ. ವಿಧಾನಸೌಧವಿಟ್ಟುಕೊಂಡೂ ರಾಜ್ಯ ಸರ್ಕಾರ ಹಣ ವಸೂಲಿಗೆ ಮುಂದಾಗಿದೆ. ಅಂದರೆ ಈ ಸರ್ಕಾರ ಎಂಥಾ ಲಜ್ಜೆಗೆಟ್ಟ ಸರ್ಕಾರವಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ನೋಡಿ: ಫ್ಯಾಸಿಸಂ ವಿರುದ್ಧ ವಿಜಯದ 80 ವರ್ಷಗಳ ನಂತರ ಈಗ ಅದನ್ನು ಯಾಕೆ ನೆನಪಿಸಿಕೊಳ್ಳಬೇಕು ?

Donate Janashakthi Media

Leave a Reply

Your email address will not be published. Required fields are marked *