ಚಾಮರಾಜನಗರ: ರೌಡಿಗಳಂತೆ ಸಾರ್ವಜನಿಕ ಸ್ಥಳದಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ, ಪೇದೆಗಳಿಬ್ಬರು ಹೊಡೆದಾಡಿಕೊಂಡಿಕೊಂಡ ವಿಡಿಯೋ ವೈರಲ್ ಆಗಿದೆ.
ಕೆಎಸ್ಆರ್ಟಿಸಿ ಬಸ್ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಗುಂಡ್ಲುಪೇಟೆಗೆ ಬರುತ್ತಿತ್ತು. ಈ ಬಸ್ನಲ್ಲಿ ಮೈಸೂರಿನ ಪೊಲೀಸ್ ಪೇದೆ ಕೊಟ್ರೇಶ್ ಐನಾಳ್ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಗಲಾಟೆ ನಡೆದಿದ್ದು ಯಾಕೆ?: ಕೊಟ್ರೇಶ್ ಕುಟುಂಬ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಬಳಿಕ, ಬೆಟ್ಟದಿಂದ ಗುಂಡ್ಲುಪೇಟೆಗೆ ವಾಪಾಸ್ ಆಗುವ ವೇಳೆ ಕೊಟ್ರೇಶ್ ಅವರ ಚಿಕ್ಕಮ್ಮ ಮುಂದೆ ಕುಳಿತಿದ್ದರೇ ಕೊಟ್ರೇಶ್ ಹಿಂದೆ ಕುಳಿತಿದ್ದರು.
ಕೊಟ್ರೇಶ್ ಅವರ ಟಿಕೆಟ್ ಅನ್ನು ಚಿಕ್ಕಮ್ಮ ತೆಗೆದುಕೊಂಡಿದ್ದರು. ಇದು ತಿಳಿಯದೇ ಕೊಟ್ರೇಶ್ ಕೂಡ ಟಿಕೆಟ್ ಪಡೆದುಕೊಂಡಿದ್ದಾರೆ. ಬಸ್‌ನಿಂದ ಇಳಿದ ಬಳಿಕ ಎರಡು ಬಾರಿ ಟಿಕೆಟ್ ಪಡೆದ ವಿಚಾರಕ್ಕೆ ಕಂಡಕ್ಟರ್ ಲೋಕೇಶ್ ಹಾಗೂ ಕಾನ್ಸ್‌ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ, ವಿಕೋಪಕ್ಕೆ ತಿರುಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾನ್ಸ್‌ಟೇಬಲ್ ಸಿವಿಲ್ ಡ್ರೆಸ್‌ನಲ್ಲಿದ್ದ ಕಾರಣ ಸಾರಿಗೆ ಸಂಸ್ಥೆಯ ಇತರೆ ಚಾಲಕರು, ಕಂಡಕ್ಟರ್‌ಗಳು ಕೂಡ ಕೊಟ್ರೇಶ್‌ಗೆ ಹೊಡೆದಿರುವುದು ಈ ವೀಡಿಯೋದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಗುಂಡ್ಲುಪೇಟೆ ಠಾಣೆಯಲ್ಲಿ ಇಬ್ಬರೂ ದೂರು-ಪ್ರತಿದೂರು ಕೊಟ್ಟಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರೆಬೇಕಿದೆ.
ಇದನ್ನು ಓದಿ : ಸಾವರ್ಕರ್ ಕುರಿತು ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ : ಪುಣೆಯ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನು ನೋಡಿ : ಮಹಾರಾಷ್ಟ್ರದಲ್ಲಿ ಬಿಜೆಪಿಯ ತಂತ್ರ ಬ್ಯೂಮರಾಂಗ್ ಆಗುತ್ತಾ? ಹೌದು ಎನ್ನುತ್ತಿವೆ ಲೆಕ್ಕಾಚಾರಗಳು!?