ಬೆಂಗಳೂರು: ಇದೀಗ ಹದಿನೆಂಟು ವರ್ಷ ಆಗಿರುವ ಅತ್ಯಾಚಾರ ಸಂತ್ರಸ್ತೆಯು ಆರೋಪಿಯನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಆರೋಪಿಯ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೋ) ಅಡಿಯಲ್ಲಿ ದಾಖಲಾದ ಆರೋಪವನ್ನು ರದ್ದುಗೊಳಿಸಿ, ಒಂದು ತಿಂಗಳೊಳಗೆ ಮದುವೆ ಮಾಡುವಂತೆ ಆದೇಶಿಸಿದೆ.
ವ್ಯಕ್ತಿಯನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಸಂತ್ರಸ್ತೆ ಮತ್ತು ಆಕೆಯ ತಂದೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರುಇರುವ ನ್ಯಾಯ ಪೀಠಕ್ಕೆ ಹಾಜರಾಗಿ ಅಫಿಡವಿಟ್ ಸಲ್ಲಿಸಿ, ವಿಚಾರಣೆಯನ್ನು ರದ್ದುಪಡಿಸಲು ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ. ಪೋಕ್ಸೋ
ಇದನ್ನೂ ಓದಿ: “ಕಲೆಕ್ಷನ್ ಕೊಡಿ, ನಿಗಮ ಮಂಡಳಿ ಅಧಿಕಾರ ಪಡಿ”: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಸಂತ್ರಸ್ತೆಯು ಈಗ ತನಗೆ 18 ವರ್ಷ ತುಂಬಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. “ನಾನು ಅರ್ಜಿದಾರರೊಂದಿಗೆ ಪ್ರಣಯದಲ್ಲಿ ಇದ್ದೇನೆ. ಅವರನ್ನು ಮದುವೆಯಾಗಿ ಸಂತೋಷದ ವೈವಾಹಿಕ ಜೀವನ ನಡೆಸಲು ಉದ್ದೇಶಿಸಿದ್ದೇನೆ ಹಾಗೂ ಅವರು ಅದಕ್ಕೆ ಒಪ್ಪಿದ್ದಾರೆ” ಎಂದು ತಿಳಿಸಿದ್ದಾರೆ. ಪೋಕ್ಸೋ
“ಈ ಅಫಿಡವಿಟ್ ಮೂಲಕ, ನಾನು ಅರ್ಜಿದಾರರನ್ನು ಮದುವೆಯಾಗಲು ನನ್ನ ಇಚ್ಛೆಯಿಂದ ತೀರ್ಮಾನ ಕೈಗೊಂಡಿದ್ದೇನೆ. ಅದರ ಪ್ರಕಾರ ನನ್ನ ಅರ್ಜಿಯನ್ನು ಅನುಮತಿಸಿ, ಗೌರವಾನ್ವಿತ ನ್ಯಾಯಾಲಯವು ತನ್ನ ಅಧಿಕಾರವನ್ನು ಚಲಾಯಿಸಲು ಮತ್ತು ವಿಚಾರಣೆಯನ್ನು ರದ್ದುಗೊಳಿಸಲು ನನಗೆ ಯಾವುದೇ ಅಭ್ಯಂತರವಿಲ್ಲ” ಎಂದು ಹೇಳಿದ್ದಾರೆ.
ಈ ವೇಳೆ ಆರೋಪಿಯನ್ನು ಸಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೈಕೋರ್ಟ್ ತನ್ನ ತೀರ್ಪಿನಲ್ಲಿ “ಅರ್ಜಿದಾರರು ಸಂತ್ರಸ್ತೆಯನ್ನು ವಿವಾಹವಾಗಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಅವರ ನಡುವೆ ನಡೆದ ಲೈಂಗಿಕ ಕ್ರಿಯೆಯು ಅವರು ಪ್ರೇಮದಲ್ಲಿ ಇದ್ದ ಕಾರಣ ಅದು ಒಪ್ಪಿಗೆಯಿಂದ ನಡೆದಿದೆ” ಎಂದು ಉಲ್ಲೇಖಿಸಿದ್ದು, ವಿಚಾರಣೆಯಲ್ಲಿ ಸಂತ್ರಸ್ತೆ ತನ್ನ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ ಪ್ರತಿಕೂಲವಾಗಿ ವರ್ತಿಸಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಸುಳ್ಳು ಜಾಹಿರಾತು ನೀಡಿ ದಾರಿ ತಪ್ಪಿಸಿದರೆ 1 ಕೋಟಿ ದಂಡ ಹಾಕುತ್ತೇವೆ: ಪತಂಜಲಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ
“ಈ ನ್ಯಾಯಾಲಯದ ಮುಂದೆ ಹಾಜರಾದ ಸಂತ್ರಸ್ತೆ ಆರೋಪಿಯೊಂದಿಗೆ ತನ್ನ ವಿವಾಹವನ್ನು ನೆರವೇರಿಸಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ. ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸಲು ಅವಕಾಶ ನೀಡಿದರೆ, ಅದು ಆರೋಪಿಯ ಜೈಲುವಾಸಕ್ಕೆ ಕಾರಣವಾಗುತ್ತದೆ. ಹೀಗಾದರೆ ನ್ಯಾಯ ಸಿಗುವ ಬದಲು ಸಂತ್ರಸ್ತೆಗೆ ಹೆಚ್ಚು ಸಂಕಟ ಮತ್ತು ದುಃಖ ಆಗುತ್ತದೆ” ಎಂದು ಹೈಕೋರ್ಟ್ ಹೇಳಿದೆ. ಆರೋಪಿಯ ವಿರುದ್ಧದ ವಿಚಾರಣೆಯನ್ನು ಒಂದು ತಿಂಗಳೊಳಗೆ ಸಂತ್ರಸ್ತೆಯನ್ನು ಮದುವೆಯಾಗುವ ಷರತ್ತಿನ ಮೇಲೆ ಮುಂದೂಡಲಾಗಿದೆ.
“ಈ ಆದೇಶವು ಅರ್ಜಿದಾರ ಆರೋಪಿಯು ಇಂದಿನಿಂದ ಒಂದು ತಿಂಗಳೊಳಗೆ ಸಂತ್ರಸ್ತೆಯೊಂದಿಗೆ ವಿವಾಹವಾಗಬೇಕು. ಅಲ್ಲದೆ ಅದನ್ನು ಸಕ್ಷಮ ಪ್ರಾಧಿಕಾರದ ಮುಂದೆ ನೋಂದಾಯಿಸಿಕೊಳ್ಳಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ” ಎಂದು ಹೈಕೋರ್ಟ್ ತೀರ್ಪು ಹೇಳಿದೆ.
ವಿಡಿಯೊ ನೋಡಿ: ವಿಶ್ವಕಪ್ ಮೇಲೆ ಕಾಲಿಟ್ಟಾಗ ಚುರ್ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023