ಮುಂಬೈ: ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ಅವರು 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜುಲೈ 18ರ ಸಂಜೆ ಮುಂಬೈನಲ್ಲಿ ಕೊನೆಯುಸಿರೆಳೆದರು. ಅವರು ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಮತ್ತು ಗಜಲ್ ಗಾಯಕರಾಗಿದ್ದರು. `23 ಮಾರ್ಚ್ 1931: ಶಹೀದ್’ ಚಲನಚಿತ್ರದಲ್ಲಿ ಇವರು ಹಾಡಿದ್ದ “ಮೇರಾ ರಂಗ್ ದೇ ಬಸಂತಿ ಚೋಲಾ…’ ಗೀತೆ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದೆ.
ಎಪ್ಪತ್ತರ ದಶಕದ ಬ್ರಿಜ್ ಸಿನಿಮಾಗಳ ‘ದಿಲ್ ದೂಂಡ್ ತ ಹೈ, ಏಕ್ ಅಕೇಲ ಇಸ್ ಶಹರ ಮೆ, ದೋ ದಿವಾನೆ ಶಹರ ಮೆ, ಕರೋಗೆ ಯಾದ್, ನಾಮ್ ಘೂಮ್ ಜಾಯೇಗ, ಕಭೀ ಕಿಸಿ ಕೋ ಮುಕಮ್ಮಲ್, ಕಿಸಿ ನಜರ್ ಕೊ ತೇರಾ, ತೋಡಿ ಸಿ ಜಮೀನ್, ತೋಡಿಸಿ ಆಸಮಾನ್, ಬೀತೆ ನ ಬಿತಾಯಿ ರೈನಾ, ಹುಜೂರ್ ಇಸ್ ಕದರ್ ಬಿ, ಜಿಂದಗಿ ಜಿಂದಗಿ ಮೇರೆ ಘರ್ ಆನಾ’ ಗಳಂತಹ ಜನಪ್ರಿಯ, ಮಧುರ ಗೀತೆಗಳನ್ನು ಗೀತೆಗಳನ್ನು ಹಾಡಿ ಖ್ಯಾತಿ ಗಳಿಸಿದ್ದರು ಭೂಪೇಂದ್ರ ಸಿಂಗ್ ಅವರದ್ದು.
ಮೌಸಂ, ಸತ್ತೆ ಪೆ ಸತ್ತಾ, ಅಹಿಸ್ತಾ ಅಹಿಸ್ತಾ, ದೂರಿಯಾನ್ ಮತ್ತು ಹಕೀಕತ್ ಸೇರಿದಂತೆ ಅನೇಕ ಚಲನಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಭೂಪೇಂದ್ರ ಸಿಂಗ್ ಅವರ ಪ್ರಸಿದ್ಧ ಹಾಡುಗಳು ‘ಮೇರಾ ರಂಗ್ ದೇ ಬಸಂತಿ ಚೋಲಾ’, ‘ಪ್ಯಾರ್ ಹಮೆ ಕಿಸ್ ಮೋಡ್ ಪೇ ಲೇ ಆಯೆ’, ‘ಹುಜೂರ್ ಈಸ್‌ಕದರ್’, ‘ಏಕ್ ಅಕೇಲಾ ಇಸ್ ಶೆಹರ್ ಮೇ’, ‘ಜಿಂದಗಿ ಮಿಲ್ಕೆ ಬಿತಾಯೇಂಗೆ’, ‘ಬೀಟಿ ನಾ ಬಿತಾಯೆ ರೈನಾ’, ‘ನಾಮ್ ಗುಮ್ ಜಾಯೇಗಾ’ ಸೇರಿದಂತೆ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ.
ಎವರ್ಗ್ರೀನ್ ಅಂದರೇನು ಅಂತ ಕೇಳಿದರೆ ಮೇಲಿನ ಹಾಡುಗಳನ್ನು ಆರಾಮಾಗಿ ಉದಾಹರಿಸಬಹುದು. ಗಿಟಾರ್ ವಾದಕರಾಗಿದ್ದ ಭೂಪೇಂದ್ರ ಆರಂಭದಲ್ಲಿ ಆರ್. ಡಿ. ಬರ್ಮನ್ ತಂಡಕ್ಕೆ ಗಿಟಾರ್ ನುಡಿಸುತ್ತಿದ್ದರು. ‘ಹರೇ ರಾಮ ಹರೇ ಕೃಷ್ಣ’ ಸಿನಿಮಾದ ‘ ದಮ್ ಮಾರೋ ದಮ್’ ಹಾಡಿನ ಆರಂಭದಲ್ಲಿ ಬರುವ ಗಿಟಾರ್ ಮಾಂತ್ರಿಕತೆ, ‘ಯಾದೋಂಕಿ ಬಾರಾತ್’ ಸಿನಿಮಾದ ‘ಚುರಾಲಿಯ ಹೈ ತುಮ್ನೆ’ ಹಾಡಿನ ಗಿಟಾರ್ ತರಂಗಗಳು ಈ ಭೂಪೇಂದ್ರ ಕೈಚಳಕ.
‘ದನಿಯೇ ನನ್ನ ಗುರುತು’ ಎಂದು ಹಾಡಿದ ಭೂಪೇಂದ್ರ ಅವರ ನಿಜ ಬದುಕಿನಲ್ಲೂ ಈ ಸಾಲುಗಳು ಸತ್ಯ. ರಫಿ, ಮುಕೇಶ್, ಕಿಶೋರ್ ರೀತಿ ಕ್ರೇಜಿ ಹುಟ್ಟಿಸುವ ಹಾಡುಗಾರರಲ್ಲ. ಆದರೆ ತಲಾತ್ ಮಹಮೂದ್ ತರ ಏಕಾಂತದಲ್ಲಿ ಗುನುಗುನಿಸಲು ಬಯಸುವಂತಹ ಹಾಡುಗಾರ ಭೂಪೇಂದ್ರ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.
ಖ್ಯಾತ ಗಾಯಕ ಭೂಪಿಂದರ್ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಅವರು. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಮೂತ್ರಕೋಶದಲ್ಲಿನ ಸಮಸ್ಯೆಯೂ ಇದರಲ್ಲಿ ಸೇರಿತ್ತು. ಭೂಪಿಂದರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಿಥಾಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಭೂಪಿಂದರ್ ನಿಧನಕ್ಕೆ ಬಾಲಿವುಡ್ ಹಾಗೂ ಸಂಗೀತ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.