ಮಂಡ್ಯ| ‘ತಿಥಿ’ ಚಿತ್ರದ ಸಂಚುರಿಗೌಡ ಖ್ಯಾತಿಯ ಹಿರಿಯ ನಟ ಸಿಂಗ್ರೀಗೌಡ ನಿಧನ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೆಳ್ಳಾಳೆ ಗ್ರಾಮಕ್ಕೆ ಇಂದು ಕಲೆಗೂಡು ಶೋಕ. ಸಿಂಗ್ರೀಗೌಡ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜನವರಿ 4ರ ರಾತ್ರಿ ನಿಧನರಾಗಿದ್ದಾರೆ. ತಿಥಿ

ರಾಷ್ಟ್ರೀಯ ಪ್ರಶಸ್ತಿ ಪಡೆದ ತಿಥಿ ಚಿತ್ರದಲ್ಲಿ ಸಂಚುರಿಗೌಡ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದ ಸಿಂಗ್ರೀಗೌಡ, ಆ ಪಾತ್ರದ ಯಶಸ್ಸಿನ ಬಳಿಕ ತಮ್ಮದೇ ಗ್ರಾಮದಲ್ಲಿ ಸಂಚುರಿಗೌಡ ಎಂದೇ ಮನೆಮಾತಾಗಿದ್ದರು. ಇಳಿ ವಯಸ್ಸಿನಲ್ಲೇ ಅತ್ಯುತ್ತಮ ನಟನೆ ಮೂಲಕ ಸಹಜ ಅಭಿನಯಕ್ಕೆ ಹೊಸ ಅರ್ಥ ನೀಡಿದವರು.

ಇದನ್ನೂ ಓದಿ: ವೆನೆಜುವೇಲಾ ಅಧ್ಯಕ್ಷ ಮದುರೊ ಅಪಹರಣದ ವಿರುದ್ಧ ಜಗದಗಲಕ್ಕೂ ಪ್ರತಿಭಟನಾ ಪ್ರದರ್ಶನಗಳು

“ಹೋಗೋ ಮುಕ್ಕಾ” ಎಂಬ ಡೈಲಾಗ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಅವರು, ತಿಥಿ, ಹಾಲುತುಪ್ಪ, ಚಿನ್ನದಗೊಂಬೆ, ಹಳ್ಳಿ ಪಂಚಾಯಿತಿ, ತರ್ಲೆ ವಿಲೇಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ಮನೋಜ್ಞ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.

ಜನವರಿ 5ರಂದು ಬೆಳ್ಳಾಳೆ ಗ್ರಾಮದಲ್ಲೇ ಸಿಂಗ್ರೀಗೌಡ (ಸಂಚುರಿಗೌಡ) ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಇತ್ತೀಚಿಗಷ್ಟೇ ತಿಥಿ ಚಿತ್ರದ ಮತ್ತೋರ್ವ ಹಿರಿಯ ನಟ ಗಡ್ಡಪ್ಪ ನಿಧನರಾಗಿದ್ದು, ಒಂದೇ ಚಿತ್ರದ ಇಬ್ಬರು ಹಿರಿಯ ಕಲಾವಿದರು ಕಳೆದುಕೊಂಡ ನೋವು ಕನ್ನಡ ಚಿತ್ರರಂಗಕ್ಕೂ, ಅಭಿಮಾನಿಗಳಿಗೂ ಮತ್ತಷ್ಟು ಆಘಾತ ತಂದಿದೆ.

ಸಹಜ ಅಭಿನಯ, ಗ್ರಾಮೀಣ ಬದುಕಿನ ನೈಜತೆಯನ್ನು ತೆರೆಯ ಮೇಲೆ ಜೀವಂತಗೊಳಿಸಿದ ಸಿಂಗ್ರೀಗೌಡ ಅವರ ನೆನಪುಗಳು ಸದಾ ಜೀವಂತವಾಗಿರಲಿವೆ.

ಇದನ್ನೂ ನೋಡಿ: ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media

Donate Janashakthi Media

Leave a Reply

Your email address will not be published. Required fields are marked *