ಕೊಲಿಜಿಯಂ ಶಿಫಾರಸ್ಸು ಬಗೆಗಿನ ಮಾಧ್ಯಮಗಳ ವರದಿ ಊಹಾಪೋಹ: ನ್ಯಾ. ಎನ್‌ ವಿ ರಮಣ

ನವದೆಹಲಿ: ಸುಪ್ರೀಂ ಕೋರ್ಟಿನ ಕೊಲಿಜಿಯಂ ಶಿಫಾರಸ್ಸಿನಂತೆ 9 ಮಂದಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದನ್ನೋತ್ತಿ ಹೊಂದಲಿದ್ದಾರೆ ಎಂಬ ಮಾಧ್ಯಮಗಳಲ್ಲಿ ವರದಿಗಳ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಮಾಧ್ಯಮಗಳ ವರದಿಯೂ ಊಹಾತ್ಮಕವಾದದ್ದು ಎಂದಿದ್ದಾರೆ.

ಈ ಬಗ್ಗೆ ಬಾರ್‌ ಅಂಡ್‌ ಬೆಂಚ್‌ ನಲ್ಲಿ ಸುದ್ದಿ ಪ್ರಕಟವಾಗಿದೆ. ಇಂದು ನಿವೃತ್ತಿ ಹೊಂದಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನವೀನ್‌ ಸಿನ್ಹಾ ಅವರೊಂದಿಗಿನ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರು ಮೇಲಿನಂತೆ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಿ.ವಿ. ನಾಗರತ್ನ ಹೆಸರು ಶಿಫಾರಸು

ಕೊಲಿಜಿಯಂ ಪ್ರಕ್ರಿಯೆಯ ಬಗೆಗಿನ ಮಾಧ್ಯಮದ ವರದಿಯ ಊಹಾಪೋಹದ ಸುದ್ದಿಗಳಾಗಿವೆ. ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಇದು ಒಂದು ಪವಿತ್ರ ಪ್ರಕ್ರಿಯೆಯಾಗಿದ್ದು ನನಗೆ ತೀವ್ರ ಅಸಮಾಧಾನವಾಗಿದೆ. ಅಲ್ಲದೆ, ಊಹಾತ್ಮಕ ವರದಿಗಳನ್ನು ಪ್ರಕಟಿಸದ ಹಿರಿಯ ಪತ್ರಕರ್ತರಿಗೂ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

ʻʻಹಿರಿಯ ಪತ್ರಕರ್ತರು ಇಂತಹ ಪ್ರಕ್ರಿಯೆಯನ್ನು ಊಹಿಸಿ ಬರೆಯದೇ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಅಂತಹ ಪತ್ರಕರ್ತರು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ನನಗೆ ತೀವ್ರ ನಿರಾಶೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಕೊಲಿಜಿಯಂ ಒಂಭತ್ತು ಹೆಸರುಗಳನ್ನು ಶಿಫಾರಸ್ಸು ಮಾಡಿದ್ದರೂ ಸಹ ಆ ಪತ್ರಕ್ಕೆ ಕೊಲಿಜಿಯಂ ನ್ಯಾಯಮೂರ್ತಿಗಳು ಇನ್ನೂ ಅಂಕಿತ ಹಾಕಿಲ್ಲ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *