ಬೆಂಗಳೂರು: ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಊಯು ಕಾರ್ಯಕರ್ತರು ಮಸಿ ಬಳಿದ ಘಟನೆ ಜರುಗಿದೆ.
ಯಲಹಂಕದಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಸಂಚಾರ ತಡೆ ನಡೆಸಿದ್ದರು. ಈ ವೇಳೆ ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಬಳಿಕ ಸೇತುವೆಗೆ ʼಭಗತ್ ಸಿಂಗ್ ಮೇಲ್ಸೇತುವೆʼ ಹೆಸರಿನ ಬ್ಯಾನರ್ ಹಾಕಿದ್ದಾರೆ.
ನಾಮಫಲಕಕ್ಕೆ ಮಸಿ ಬಳಿದಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಕೃತ್ಯ ಎಸಗಿದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಟಾಸ್ಕ್‌ಪೋರ್ಸ್ ರಚನೆ
ಕಳೆದ 2020 ಮೇ 9 ರಂದು ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಯಲಹಂಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿರುವ ಮೇಲ್ಸೇತುವೆಗೆ ಸಾವರ್ಕರ್ ಎಂದು ನಾಮಕರಣ ಮಾಡಿದ್ದರು. ಈ ಹಿಂದೆ ಈ ಮೇಲ್ಸೇತುವೆ ನಾಮಕರಣ ಕಾರ್ಯಕ್ರಮ ಎರಡು ಬಾರಿ ರದ್ದಾಗಿರುವ ಬಗ್ಗೆ ವರದಿಯಾಗಿತ್ತು.
ಈ ಹೆಸರಿಡಲು ಮುಂದಾಗಿದ್ದಾಗ ಪ್ರತಿಪಕ್ಷಗಳು, ಸಂಘಟನೆಗಳು ಅಡ್ಡಿಯುಂಟು ಮಾಡಿದ್ದರಿಂದ ಆಗಿನ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಘೋಷಿಸದ ಕಾರಣ ಕಾರ್ಯಕ್ರಮ ರದ್ದುಮಾಡಿತ್ತು.
ಮೇಲ್ಸೇತುವೆಗೆ ಮೇ.28ರಂದೇ ಈ ಹೆಸರಿಡಲು ದಿನ ನಿಗದಿಪಡಿಸಲಾಗಿತ್ತು. ಇದಕ್ಕೆ ಪ್ರತಿಪಕ್ಷಗಳು, ಸಂಘಟನೆಗಳು ಅಡ್ಡಿಯುಂಟು ಮಾಡಿದ್ದವು. ಜತೆಗೆ ಗೆಜೆಟ್ ನೋಟಿಫಿಕೇಷನ್ ಘೋಷಿಸದ ಕಾರಣ ಸರ್ಕಾರ ಕಾರ್ಯಕ್ರಮ ರದ್ದುಮಾಡಿತ್ತು. ನಿಯಮದಂತೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡ ಮೇಲೆ ಹೆಸರಿಡಲು ದಾರಿ ಸುಗಮವಾಯಿತು. ಬಳಿಕ ಸೆ. 1ಕ್ಕೆ ಮಾಜಿ ರಾಷ್ಟ್ರಪತಿಪ್ರಣಬ್ ಮುಖರ್ಜಿ ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮತ್ತೂಮ್ಮೆ ಮುಂದೂಡಲಾಗಿತ್ತು.
ಇದನ್ನು ನೋಡಿ : ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆ – Janashakthi Media