ವೇದ ಹಾಗೂ ವೇದನೆ : ವಸ್ತುನಿಷ್ಠ ನೋಟ

ವೇದವನಷ್ಟೇ ಓದಿದರೆ – ಶಾಸ್ತ್ರ ಬುದ್ಧವಾಗಿ ಹಾಡಿದರೆ ಸಾಲದು. ಮನುಷ್ಯನ ವೇದನೆಗಳನ್ನು ಅರ್ಥ ಮಾಡಿಕೊಂಡು ಆ ವೇದನೆಗಳಿಗೆ ಸೂಕ್ತ ಪರಿಹಾರವನ್ನು ಕೊಡುವುದೇ ವೇದದ ಮುಖ್ಯ ಸಾರ. ಆದರೆ ಭಾರತದಲ್ಲಿ ಈ ಕಾರ್ಯ ಸಾಧ್ಯವಾಗಲಿಲ್ಲ. ವೇದಗಳನ್ನು ಪ್ರಚಾರ ಮಾಡಲು ನಮ್ಮ ದೇವರು ಹಾಗೂ ದೇವಾಲಯದ ಸುತ್ತ ಕೇಂದ್ರೀಕರಿಸಿಕೊಂಡ ಧರ್ಮ ಹಾಗೂ ಇಂತಹ ಧರ್ಮದವರ ನಿಯಂತ್ರಣಕ್ಕೆ ಒಳಪಟ್ಟ ಪ್ರಭುತ್ವ ಮುಂದಾಯಿತೆ ಹೊರತು, ವೇದದ ಮೂಲಸಾರದ ಪ್ರಕಾರ ಧರ್ಮ ಹಾಗೂ ಪ್ರಭುತ್ವ ಜನರ ವೇದನೆಗಳನ್ನು ಬಗೆಹರಿಸಲು ಮುಂದಾದುದ್ದಕ್ಕೆ ಚರಿತ್ರೆಯಲ್ಲಿ ದಾಖಲೆಗಳೆ ಇಲ್ಲ.

– ಎನ್ ಚಿನ್ನಸ್ವಾಮಿ ಸೋಸಲೆ

ಇದಕ್ಕೆ ಕಾರಣ ವೇದಗಳು ದೇವರು ಕೇಂದ್ರಿತ ಧರ್ಮದವರ ಸೃಷ್ಟಿಯ ಪ್ರಕಾರ ‘ ದೇವರ ರೂಪ’ ಪಡೆದದ್ದು. ವೇದ ಅಥವಾ ವ್ಯಕ್ತಿ ದೇವರ ರೂಪವನ್ನು ಪಡೆದ ತಕ್ಷಣ ಅವನು ಪ್ರಶ್ನಪೀತನಾಗುತ್ತಾನೆ. ಅದು ಮತ್ತು ಅವನು ಪೂಜೆಗೆ ಒಳಪಡುತ್ತಾನೆ/ ಒಳಪಡುತ್ತದೆ . ಮುಂದುವರೆದು ಜನರಿಗೆ ಅದೊಂದು ಅಜ್ಞಾನದ ಸರಕಾಗಿ ಅನಾವರಣಗೊಳ್ಳುತ್ತದೆ. ಇದೆ ಪರಂಪರೆಯಿಂದಲೂ ಭಾರತದಲ್ಲಿ ಆಗಿರುವುದು. ಇಂದಿಗೂ ಆಗುತ್ತಿರುವುದು. ಈ ವಿಷಯದಲ್ಲಿ ಮಾತ್ರ ಬದಲಾವಣೆ ಎಂಬುದು ಮರೀಚಿಕೆಯಾಗಿಯೇ ಇದೆ.

ನಾವು ವೇದವನ್ನು ಓದಿ ಶ್ರೇಷ್ಠ ನಾಗರಿಕರು ಎಂದು ಕರೆಸಿಕೊಳ್ಳಲು ಅಂಬಲಿಸುತಿದ್ದೇವೆಯೇ ಹೊರತು – ಮನುಷ್ಯರ ಬದುಕಿನ ವೇದನೆಗಳನ್ನು ಸರಿಪಡಿಸಿ ಆ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರು ಎನಿಸಿಕೊಳ್ಳುತ್ತಿಲ್ಲ. ಏಕೆಂದರೆ ಇವುಗಳ ಆಧಾರದ ಮೇಲೆಯೇ ಭಾರತದಲ್ಲಿ ಪ್ರಾಚೀನ ಕಾಲದಿಂದ ಸ್ಪೃಷ್ಯ- ಅಸ್ಪೃಶ್ಯ, ಶ್ರೇಷ್ಠಕುಲ- ಕನಿಷ್ಠಕುಲ, ಊರಿನವಾಸಿ ಸ್ಪೃಶ್ಯ – ಕೇರಿಯವಾಸಿ ಅಸ್ಪೃಶ್ಯ , ಮಾಂಸಹಾರಿ ದೇವರು ಹಾಗು ದೇವಾಲಯದ ಹಿನ್ನಲೆ ಯಿಂದ ಕನಿಷ್ಠ – ಸಸ್ಯ ಆಹಾರ ದವರು ಹಾಗು ದೇವಾಲಯದ ಹಿನ್ನಲೆ ಯಿಂದ ಶ್ರೇಷ್ಠ , ಅಂತಹ ವೃತ್ತಿ ಕನಿಷ್ಠ – ಇಂತಹ ವೃತ್ತಿ ಶ್ರೇಷ್ಠ -… ಇತ್ಯಾದಿ ಇತ್ಯಾದಿ ಎಂದೆಲ್ಲ ಮಾನವ ಮಾನವರಲ್ಲಿ ಹೊಡೆದಾಡುವ – ಹೊಡೆದಾಳುವ ನೀತಿಯ ಅಮಾನುಷ, ಅಮಾನವೀಯ ವಿಭಾಗವನ್ನು ಮಾಡಿಕೊಂಡು, ಈ ವಿಭಾಗಗಳಿಗೂ ಕಾರಣವನ್ನಾಗಿ ಅದಾಗಲೇ ನಾವು ” ದೇವರ ರೂಪ” ನೀಡಿದ್ದ ವೇದಗಳನ್ನೇ ಅವುಗಳು ಹಾಗು ಸೃಷ್ಟಿಸಿದ್ದ ಪುರಾಣಗಳನ್ನೇ ಸಾಕ್ಷಿಕರಿಸಿದ್ದು – ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಸಿದ್ದು . ಇಂತಹ ಸಂದರ್ಭದಲ್ಲಿ “ವಸುದೇವ ಕುಟುಂಬಕಂ” ಎಂಬ ಭ್ರಾತೃತ್ವದ ಸಂಸ್ಕೃತಿಯ ಸಾರವನ್ನು ಸಾರಿದ ವೇದಗಳು ಯಾವುದೇ ಸಂದರ್ಭ ದಲ್ಲಿಯೂ ಕಿಂಚಿತ್ತಾದರೂ ತನ್ನಿಂದಲೇ ಜನರು ಎದುರಿಸಿದ ಮನ ಕಲಕುವ ಮಾನಸಿಕ ಹಾಗೂ ದೈಹಿಕ ವೇದನೆಯನ್ನು ಬಗೆಹರಿಸಲಿಲ್ಲ. ಏಕೆಂದರೆ ಈ ವೇದಗಳನ್ನು ಸಹ ಇಂತಹ ಅಸ್ಪೃಶ್ಯ ಮನಸ್ಸುಗಳೇ ಸೃಷ್ಟಿ ಮಾಡಿದ್ದು.

ಇದನ್ನೂ ಓದಿ: ಕಲಬುರಗಿ | ಪ್ರತಿ ವಿದ್ಯಾರ್ಥಿಗೂ ಶಿಸ್ತು ಕಲಿಸುವ ಸೇತುವೆ ಎನ್ಎಸ್ಎಸ್ : ಎಚ್.ಟಿ.ಪೋತೆ

ಇಂತಹ ಜನರಲ್ಲಿ ಶಾಶ್ವತವಾಗಿ ಮನೆ ಮಾಡಿದ್ದ ಅಸ್ಪೃಶ್ಯ ಮನಸ್ಸುಗಳ ಅಜ್ಞಾನದ ಶಾಶ್ವತ ವೇದನೆಗಳನ್ನು ಸರಿಪಡಿಸಲು ಭಾರತದಲ್ಲಿ ಇಂದು ಜಾರಿಯಲ್ಲಿರುವುದೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ. ನಮ್ಮ ಸಂವಿಧಾನ ವೇದಗಳು ಈ ನೆಲದಲ್ಲಿ ಸೃಷ್ಟಿಸಿದ ಅಸಮಾನತೆಯ ವೇದನೆಗಳನ್ನು ಬೌದ್ಧಿಕವಾಗಿ ಹಾಗೂ ಭೌತಿಕವಾಗಿ ಸರಿಪಡಿಸುವ ಬಹುದೊಡ್ಡ ಸಾಧನವಾಗಿದೆ. ಇಂತಹ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವ ವಿವೇಚನೆ ನವ ಭಾರತಿಯರಿಗೆ ಪ್ರಜ್ಞಾಪೂರ್ವಕವಾಗಿ ಬರಬೇಕಾಗಿದೆ. ಇದಾದಾಗ ಮಾತ್ರ ನಮ್ಮ ಭಾರತ “ಅರಿವಿನ ಭಾರತ” ವಾಗುತ್ತದೆ . ಈ ಮಾದರಿಯಲ್ಲಿ ಅಂಬೇಡ್ಕರವರ ಚಿಂತನೆಗಳ ಅರಿವನ್ನು ಗ್ರಹಿಸಬೇಕಾಗಿದೆ.

ಆದರೆ, ಇಂದು ನಮ್ಮ ದೇಶದ ವೇದ ರೂಪಿತ ಸಂವಿಧಾನವನ್ನೇ ಅವಲಂಬಿಸಿರುವ ಪಾರಂಪರಿಕ ಜನರು ತಾವು ಸಾಂಸ್ಕೃತಿಕವಾಗಿ ಎಷ್ಟೆಲ್ಲ ವೇದನೆಗಳನ್ನು ಅನುಭವಿಸುತ್ತಿದ್ದರು ಸಹ, ಈ ವೇದನೆಗೆ ಕಾರಣವಾದ ವೇದದ ಸಿದ್ಧಾಂತಗಳನ್ನೇ ಕಂಗೊಳಿಸುವಂತೆ ಮಾಡಲು ಮುಂದಾಗುತ್ತಿರುವುದು ದುರಂತವೇ ಸರಿ. ಮುಂದುವರೆದು ಇಂತಹ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವವರೇ ಈ ನೆಲದಲ್ಲಿ ರಾಷ್ಟ್ರೀಯವಾದಿಗಳಾಗಿದ್ದಾರೆ ಹಾಗೂ ಅದೇ ರಾಷ್ಟ್ರೀಯತೆಯಾಗಿದೆ. ಇದಕ್ಕೆ ಕಾರಣ ವೇದ ಎಂಬುದು ಪುರಾಣ – ಸಂವಿಧಾನ ತತ್ವ ಸಿದ್ಧಾಂತಗಳನ್ನು ಪ್ರತಿಪಾದನೆ ಮಾಡುವವರು ಧರ್ಮ ದ್ರೋಹಿಗಳಾಗುತ್ತಿದ್ದಾರೆ. ಮುಂದುವರೆದು ಈ ಹಿನ್ನೆಲೆಯಿಂದ ರಾಷ್ಟ್ರದ್ರೋಹಿಗಳೂ ಆಗುತ್ತಿದ್ದಾರೆ. ಇದು ವಾಸ್ತವ.

ಅಂದರೆ ವೇದಗಳ ಪರವಾಗಿ ಮಾತನಾಡುವುದು ರಾಷ್ಟ್ರೀಯತೆ – ವೇದನೆಗಳ ಪರವಾಗಿ ಮಾತನಾಡುವುದು ರಾಷ್ಟ್ರದ್ರೋಹ ಎಂಬುದಾಗಿದೆ. ಈ ಕಾಲಕ್ಕೂ ಸಹ ಸುಳ್ಳಾಗಬಹುದಾದ ಪುರಾಣದ ವೇದವನ್ನೇ ಆರಾಧಿಸುತಿದ್ದೇವೆಯೇ ಹೊರತು – ನಿಜವಾಗಲೇಬೇಕಾದ ಶ್ರಮ ಸಿದ್ಧಾಂತದಿಂದ ರೂಪಿತವಾದ ವಾಸ್ತವ ಹಿನ್ನೆಲೆಯ ಗಾದೆಗಳನ್ನು ಅಲ್ಲಗಳೆಯುತ್ತಿದ್ದೇವೆ.

80 ವರ್ಷದ ಪ್ರಜಾಪ್ರಭುತ್ವ ಭಾರತದಲ್ಲಿ ನಾವು ವೇದಗಳನ್ನು “ಕೇಳಿ” ಆಚರಿಸಿದಷ್ಟು – ಜನರ ವೇದನೆಗಳನ್ನು ನಿರ್ಮೂಲನೆ ಮಾಡಲೇ ಬಂದಿರುವ ಸಂವಿಧಾನವನ್ನು “ಓದಿ” ಅರ್ಥೈಸಿಕೊಂಡಿಲ್ಲ. ಇದಕ್ಕೆ ಬಹು ಮುಖ್ಯ ಕಾರಣ ಎರಡುವರೆ ಸಾವಿರ ವರ್ಷಗಳಿಂದ ಭಾರತೀಯರು ಎದುರಿಸಿದ ಶಿಕ್ಷಣ ದಿಂದ ಸಂಪೂರ್ಣವಾಗಿ ವಂಚಿತರಾದ ಹಿನ್ನೆಲೆಯ ಸಮಸ್ಯೆ. ಇದೆ ಇಂದಿನ ವಾಸ್ತವ ಭಾರತದ ಚಿತ್ರಣ.

ಇಂದಿಗೂ ಸಹ ಭಾರತದ ಚರಿತ್ರೆ ರಚನೆ ಹಾಗೂ ಬೋಧನೆ ಆಗುತ್ತಿರುವುದು ವೇದ ಶಾಸ್ತ್ರಗಳ ಹಿನ್ನೆಲೆಯಿಂದಲೇ ಹೊರತು, ಸಂವಿಧಾನದ ಆಧಾರದಲ್ಲಲ್ಲ. ಅಂದರೆ ನಮ್ಮ ಪಠ್ಯಕ್ರಮಗಳು ಹಾಗೂ ಬೋಧನಾ ಕ್ರಮಗಳು ಪ್ರಜಾಪ್ರಭುತ್ವ ಹಿನ್ನೆಲೆಯ ಸಂವಿಧಾನ ಭಾರತಕ್ಕೆ ತೆರೆದುಕೊಂಡಿಲ್ಲ ಎಂಬುವುದು ಸ್ಪಷ್ಟ.

ಇದನ್ನೂ ನೋಡಿ: ವಲಸೆ ಕಾರ್ಮಿಕರ ಮನೆಗೆ ನುಗ್ಗಿ ಆಧಾರ್‌ ಪರಿಶೀಲಿಸಲು ಪುನೀತ್‌ ಕೆರೆಹಳ್ಳಿ ಯಾರು? Janashakthi Media

Donate Janashakthi Media

Leave a Reply

Your email address will not be published. Required fields are marked *