ವಿಬಿ ಗ್ರಾಮ್‌ಜಿ ಯೋಜನೆಗೆ ಕರಡು ನಿಯಮ ಪ್ರಕಟ: ಜುಲೈ 1ರಿಂದ ಜಾರಿಗೆ ಸಿದ್ಧತೆ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಬದಲಿಯಾಗಿ ಜಾರಿಗೆ ಬರಲಿರುವ “ವಿಕಸಿತ ಭಾರತ್‌–ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್‌ (ಗ್ರಾಮೀಣ)” ಯೋಜನೆಗೆ ಕೇಂದ್ರ ಸರ್ಕಾರ ಕರಡು ನಿಯಮಗಳನ್ನು ಪ್ರಕಟಿಸಿದೆ. ಜುಲೈ 1ರಿಂದ ದೇಶಾದ್ಯಂತ ಯೋಜನೆ ಜಾರಿಗೆ ತರುವ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ವಿಬಿ ಗ್ರಾಮ್‌ಜಿ 

ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿರುವ ಕರಡು ನಿಯಮಗಳು ಯೋಜನೆಯ ಆಡಳಿತಾತ್ಮಕ, ಹಣಕಾಸು ಮತ್ತು ನಿರ್ವಹಣಾ ಚೌಕಟ್ಟನ್ನು ವಿವರಿಸುತ್ತವೆ. ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣಾ ಸಮಿತಿ, ದೂರು ನಿವಾರಣಾ ವ್ಯವಸ್ಥೆ, ಕೂಲಿ ಪಾವತಿ, ನಿರುದ್ಯೋಗ ಭತ್ಯೆ ಹಾಗೂ ಆಡಳಿತ ವೆಚ್ಚ ಸೇರಿದಂತೆ ಹಲವು ಅಂಶಗಳನ್ನು ಕರಡು ನಿಯಮಗಳಲ್ಲಿ ಒಳಗೊಂಡಿದೆ.

ಹೊಸ ಯೋಜನೆಯಡಿ ಪ್ರಸ್ತುತ ಜಾರಿಯಲ್ಲಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಹಂತ ಹಂತವಾಗಿ ವರ್ಗಾವಣೆ ನಡೆಯಲಿದೆ. ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳು ಮುಂದುವರಿಯಲಿದ್ದು,  ದಾಖಲೆಗಳ ವರ್ಗಾವಣೆ ಮತ್ತು ಇ-ಕೆವೈಸಿ ದೃಢೀಕೃತ ಉದ್ಯೋಗ ಚೀಟಿಗಳ ಮಾನ್ಯತೆ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಬಿ ಗ್ರಾಮ್‌ಜಿ 

ಇದನ್ನೂ ಓದಿ : NCERT ಪಠ್ಯಪುಸ್ತಕ ವಿವಾದ | ಮೂವರು ಶಿಕ್ಷಣ ತಜ್ಞರ ಕುರಿತು ಹಿಂದಿನ ಆದೇಶ ತಿದ್ದುಪಡಿ ಮಾಡಿದ ಸುಪ್ರೀಂ ಕೋರ್ಟ್‌

ಹೊಸ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಭರವಸೆ ನೀಡಲಾಗುತ್ತದೆ. ಹಿಂದಿನ ಯೋಜನೆಯಲ್ಲಿ ಇದು 100 ದಿನಗಳಷ್ಟಿತ್ತು. ಜೊತೆಗೆ ಗ್ರಾಮೀಣ ಮೂಲಸೌಕರ್ಯ, ನೀರಾವರಿ, ಜಲ ಸಂರಕ್ಷಣೆ ಮತ್ತು ಹವಾಮಾನ ಪ್ರತಿರೋಧಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸರಕಾರ ಹೇಳಿತ್ತು. ಇದು ಶುದ್ದ ಸುಳ್ಳು, ಗ್ರಾಮೀಣ ಜನರ ಕನಸುಗಳನ್ನು, ಉದ್ಯೋಗಗಳನ್ನು ಕಸಿದುಕೊಳ್ಳುವ ಯೋಜನೆ ಎಂದು ಜನಪರ ಸಂಘಟನೆಗಳು ವಿಪಕ್ಷಗಳು ಆರೋಪಿಸಿದ್ದವು.

ಯೋಜನೆ ಜಾರಿಗೆ ರಾಜ್ಯಗಳ ಸಹಭಾಗಿತ್ವವೂ ಕಡ್ಡಾಯವಾಗಿದ್ದು, ಹೆಚ್ಚಿನ ರಾಜ್ಯಗಳಿಗೆ ಕೇಂದ್ರ–ರಾಜ್ಯ ವೆಚ್ಚ ಹಂಚಿಕೆ ಅನುಪಾತವನ್ನು 60:40ರಂತೆ ನಿಗದಿಪಡಿಸಲಾಗಿದೆ. ಈಶಾನ್ಯ ಮತ್ತು ಪರ್ವತ ರಾಜ್ಯಗಳಿಗೆ 90:10 ಅನುಪಾತ ಅನ್ವಯವಾಗಲಿದೆ.

ಕರಡು ನಿಯಮಗಳ ಕುರಿತು ರಾಜ್ಯ ಸರ್ಕಾರಗಳು, ತಜ್ಞರು, ನಾಗರಿಕ ಸಂಘಟನೆಗಳು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯ ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವಿಬಿ ಗ್ರಾಮ್‌ಜಿ 

ಇದನ್ನೂ ನೋಡಿ : ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media

Donate Janashakthi Media

Leave a Reply

Your email address will not be published. Required fields are marked *