ವಾಸಿಸಲು ನೆಲೆಯಿಲ್ಲದೆ ಬದುಕು ಸಾಗಿಸುತ್ತಿರುವ ಕೃಷ್ಣಗೊಲ್ಲ ಸಮುದಾಯ

ಬೆಂಗಳೂರು: ಹಸು ಕರು ಹೋರಿಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಶೃಂಗರಿಸಿಕೊಂಡು ಶಹನಾಯಿ ಮೇಳ ಮತ್ತು ಡೋಲು ನುಡಿಸುತ್ತಾ ಊರು ಕೇರಿಗಳ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ವಸತಿಹೀನ ಅಲೆಮಾರಿ ಭಿಕ್ಷುಕರನ್ನು ಬಲು ಬಾಧೆಗೀಡುಮಾಡಿದೆ.

ಒಂದೆಡೆ ಕೊರೊನಾ ಲಾಕ್‌ಡೌನ್ ಎದುರಾದರೆ ಮತ್ತೊಂದೆಡೆ, ವಾಸಿಸಲು ಭದ್ರವಾದ ನೆಲೆಯಿಲ್ಲದೆ ಊರೂರು ಅಲೆಯುತ್ತಾ ಟೆಂಟುಗಳಲ್ಲಿ ವಾಸಿಸುತ್ತಾ ಭಿಕ್ಷಾಟನೆಯಿಂದಲೇ ಬದುಕುತ್ತಿರುವ ಕೋಲೆ ಬಸವನವರು- ಕವಲೇ ಬಸವನವರು – ಗಂಗೆತ್ತಿನವರು ಎಂಬ ಹಲವಾರು ಹೆಸರುಗಳಿಂದ ಗುರುತಿಸಿಕೊಂಡಿರುವ ಕೃಷ್ಣಗೊಲ್ಲ ಸಮುದಾಯದವರ ಪಾಡಂತೂ ಹೇಳತೀರದು.

ಆದರೀಗ ಕೊರೊನಾ ಲಾಕ್‌ಡೌನಿನಿಂದಾಗಿ ಭಿಕ್ಷಾಟನೆಗೆ ಹೋಗುವಂತಿಲ್ಲ. ತಮಗೂ ಮತ್ತು ತಮ್ಮ ಕುಟುಂಬದ ಮಕ್ಕಳ ಹೊಟ್ಟೆಗಳಿಗೆ ಅನ್ನ ನೀರು ಕೊಡಲಾಗದ ಸಂಕಷ್ಟದ ಕಾಲದಲ್ಲಿ ಅವರ ಬದುಕಿಗೆ ಆಧಾರವಾಗಿರುವ ದನಗಳಿಗೆ ಮೇವು ನೀರು ಇಲ್ಲದವರಾಗಿದ್ದಾರೆ. ಹೀಗಿದ್ದೂ ಎರಡು ವರ್ಷಗಳ ಕಾಲ ಕೊರೊನಾ ದಿನಗಳಲ್ಲಿ ಬೆಂಗಳೂರು ಮಹಾನಗರದ ಹೆಣ್ಣೂರು ಬಂಡೆ ಸಮೀಪದಲ್ಲಿ ಜೀವಿಸುತ್ತಿರುವ ಇಂತಹ ಲಕ್ಷಾಂತರ ಮಂದಿ ಕರ್ನಾಟದಲ್ಲಿ ವಾಸವಾಗಿದ್ದಾರೆ.

ಕೋಲೆ ಬಸವ ಸಮುದಾಯದ 54 ಅಲೆಮಾರಿ ಕುಟುಂಬಗಳು ಬೆಂಗಳೂರು ಮಹಾನಗರದ ಹೆಣ್ಣೂರು ಬಡಾವಣೆ ಸಮೀಪದ ಹೆಣ್ಣೂರು ಬಂಡೆ ಜಾಗದಲ್ಲಿ ಕಳೆದ 15 ವರ್ಷಗಳಿಂದ   ನೆಲೆಸಿವೆ. ಈಗ್ಗೆ 15 ವರ್ಷಗಳಿಗೂ ಮೊದಲು ಹೆಣ್ಣೂರು ಬಂಡೆ ಸಮೀಪದಲ್ಲಿಯೇ ಮತ್ತೊಂದು ಕಡೆಯಲ್ಲಿ ಏಳೆಂಟು ವರ್ಷಗಳ ಕಾಲ ನೆಲೆಸಿದ್ದರು.

ಇವರು ನೆಲೆಸಿರುವ ಭೂಮಿ ಯಾರ ಮಾಲೀಕತ್ವದಲ್ಲಿದೆ ಎಂಬುದು ತಿಳಿಯದು. ನಿವೇಶನದ ಮಾಲೀಕರು ಒಕ್ಕಲೆಬ್ಬಿಸಿದಾಗ ಇವರು ಬೇರೆ ನೆಲೆ ಹುಡುಕಿಕೊಳ್ಳುತ್ತಾ ಚಲಿಸಬೇಕಾಗಿದೆ.

ಕೊರೊನಾ ಮೊದಲನೇ ಅಲೆಯ ಕಾಲದಿಂದಲೂ ʻಇಂಡಿಯನ್ ಫೋಕ್ ಬ್ಯಾಂಡ್ʼ ಯುವ ಕಲಾವಿದರ ತಂಡದ ಮೂಲಕ ಈ ಭಿಕ್ಷುಕರಿಗೆ ಆಹಾರ ವಿತರಿಸಲಾಗುತ್ತಿದೆ. ಜಂಬೆ ಸಂಗೀತ ವಾದ್ಯದ ಮೂಲಕ ಅಂತರಾಷ್ಟ್ರೀಯ ಕಲಾವಿದನಾಗಿ ಗುರುತಿಸಿಕೊಂಡಿರುವ ಉತ್ಸಾಹಿ ಯುವಕ ಬಾಲು ಜಂಬೆ ಈ ತಂಡದ ರೂವಾರಿ ಆಹಾರ ವಿತರಣೆ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ.

ಆಹಾರ ವಿತರಿಸಿದ ಸಂದರ್ಭದಲ್ಲಿ ಬಾಲು ಜಂಬೆ, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾದ ವೈ.ಮರಿಸ್ವಾಮಿ, ದಲಿತ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಲಯನ್ ಕೆ.ವಿ.ಬಾಲಕೃಷ್ಣ, ಚಲನಚಿತ್ರ ಕಲಾವಿದ – ಸಾಮಾಜಿಕ ಕಾರ್ಯಕರ್ತ ಚೇತನ್, ನಾಗೇಶ್, ಮಹೇಶ್, ನರಸಿಂಹಯ್ಯ ಮುಂತಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *