ಕೊಪ್ಪಳ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ,ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ದಲಿತ, ಹಿಂದುಳಿದ ವಿದ್ಯಾರ್ಥಿನೀಯರು 6 ರಿಂದ 10 ನೇ ತರಗತಿ ಹಾಗೂ ಪಿಯುಸಿ ಓದುತ್ತಿರುವ ವಿದ್ಯಾರ್ಥಿನೀಯರಿಗೆ ಸುರಕ್ಷತಾ ದೃಷ್ಟಿಯಿಂದ ನೀಡಬೇಕಾದ ನ್ಯಾಪ್‌ಕಿನ್ಸ್(ಸ್ಯಾನಿಟರಿ ಪ್ಯಾಡ್) ಕೊಡದಿರುವ ಪ್ರಾಚಾರ್ಯರ ಹಾಗೂ ವಾರ್ಡನ್ ಮೇಲೆ ಕಾನೂನು ಶಿಸ್ತು ಕ್ರಮಜರುಗಿಸಬೇಕೆಂದು ಎಸ್‌ಎಫ್‌ಐ ಮನವಿ ಮಾಡಿದೆ.
ಭಾರತ ವಿದ್ಯಾರ್ಥಿ ಫೆಡರೇಷನ್ ಕೊಪ್ಪಳ ಜಿಲ್ಲಾ ಸಮಿತಿಯ ನಿಯೋಗವು ಅಪಾರ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸರಕಾರ ಹೆಣ್ಣು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ವಿದ್ಯಾರ್ಥಿನೀಯರ ಶಿಕ್ಷಣಕ್ಕೆ ಒತ್ತು ನೀಡಲು ಪ್ರೋತ್ಸಾಯಿಸುತ್ತದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕೆಲ ವಸತಿ ಶಾಲೆಗಳಲ್ಲಿ ವರ್ಷ ಕಳೆದರೂ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್ಸ್(ಸ್ಯಾನಿಟರಿ ಪ್ಯಾಡ್) ಕೂಡದೇ ಇರುವ ಜಿಲ್ಲೆಯ ಕೆಲ ಪ್ರಾಚಾರ್ಯರು ಹಾಗೂ ವಾರ್ಡನ್ ಮೇಲೆ ಶಿಸ್ತುಕ್ರಮ ಜರುಗಿಸಿ, ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಬಯಲೇ ಶೌಚಾಲಯ! ಹಸಿ ಸೌದೆ ಬಳಸಿ ಅಡುಗೆ!! ಇದು ಸರಕಾರಿ ಹಾಸ್ಟೇಲ್‌ನ ಅವ್ಯವಸ್ಥೆ
ಎಸ್‌ಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ ಸರಕಾರ ಎಲ್ಲಾ ವಸತಿ ಶಾಲೆಗಳಿಗೆ ವಾರ್ಷಿಕವಾಗಿ ನ್ಯಾಪ್‌ಕಿನ್ ಖರೀದಿಸಲು ವರ್ಷಕ್ಕೆ ಸುಮಾರು 40 ಸಾವಿರದಷ್ಟು ಹಣ ಬಿಡುಗಡೆ ಮಾಡುತ್ತದೆ. ಆದರೆ, ಕೆಲ ಮೊರಾರ್ಜಿ ವಸತಿ ಶಾಲೆಗಳು ಸರಕಾರಿ ಆಸ್ಪತ್ರೆಗಳಿಂದ ನ್ಯಾಪ್ ಕಿನ್ ತೆಗೆದುಕೊಂಡು ವಿತರಣೆ ಮಾಡಿದ್ದಾರೆ. ಬೆರಳೆಣಿಕೆಯಷ್ಟು ಶಾಲೆಗಳು ಮಾತ್ರ ಖರೀದಿ ಮಾಡಿ ವಿತರಣೆ ಮಾಡಿದ್ದು, ಇನ್ನು ಉಳಿದ ಶಾಲೆಗಳು ಎರಡು ವರ್ಷ ಕಳೆದರೂ ನ್ಯಾಪ್ ಕಿನ್ ವಿತರಣೆ ಮಾಡಿಲ್ಲ. ಆದ್ದರಿಂದ ಅಂತಹ ಶಾಲೆಗಳ ಮೇಲೆ ತನಿಖೆ ಮಾಡಿ ಸೂಕ್ತವಾದ ಕಾನೂನು ಕ್ರಮ ಜರುಗಿಸಿ ಹೆಣ್ಣು ಮಕ್ಕಳಿಗೆ ಸಿಗಬೇಕಾದ ನ್ಯಾಯಯುತವಾದ ಮೂಲಭೂತ ಸೌಲಭ್ಯ ಕೊಡಬೇಕು ಎಂದು ಒತ್ತಾಯಿಸಿದರು.
ವಸತಿ ಶಾಲೆಗಳಲ್ಲಿ ನ್ಯಾಪ್ ಕಿನ್ ವಿತರಣೆ ಮಾಡದೆಯೇ ವರದಿ ತಯಾರು ಮಾಡಲಾಗುತ್ತಿದೆ. ಹಾಗಾಗಿ ಸಂಬಂಧಪಟ್ಟದ ಇಲಾಖೆಯ ಉನ್ನತ ಅಧಿಕಾರಿಗಳು ಎಲ್ಲಾ ಮೊರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿನೀಯರಿಂದ ಮಾಹಿತಿ ಪಡೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಪದವಿ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿಗೆ ಮುಂದಾದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕ್ರಮಕ್ಕೆ ಖಂಡನೆ; ಎಸ್ಎಫ್ಐ
ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಎಂ ಮಾತನಾಡಿ, ಅಧಿಕಾರಿಗಳು ಮಾಹಿತಿ ಪಡೆಯುವಾಗ ವಿದ್ಯಾರ್ಥಿನೀಯರೊಂದಿಗೂ ಮಾತನಾಡಿ ಸ್ಪಷ್ಟನೆ ಪಡೆದುಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ತಪ್ಪಿತಸ್ಥ ಪ್ರಾಚಾರ್ಯರು ಮತ್ತು ವಾರ್ಡನ್ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಅಕ್ರಮದ ಬಗ್ಗೆ ವರದಿಗಳು ಬಹಿರಂಗಗೊಂಡಿರುವುದರಿಂದ ವಿದ್ಯಾರ್ಥಿನೀಯರ ಮೇಲೆ ವಿದ್ಯಾರ್ಥಿಗಳಿಗೆ ಒತ್ತಡ ಸಾಧ್ಯತೆಗಳು ಇವೆ. ಈಗಾಗಲೇ ವರದಿ ದಾಖಲಾತಿಯಲ್ಲಿ ವಿದ್ಯಾರ್ಥಿಗಳಿಂದ ಸಹಿ ಪಡೆಯಲು ಪ್ರಾಚಾರ್ಯರು ಮುಂದಾಗುತ್ತಿದ್ದಾರೆ. ಇರುವುದರಿಂದ ಸಮಗ್ರವಾಗಿ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.
ಸರಕಾರಕ್ಕೂ, ವಿದ್ಯಾರ್ಥಿಗಳಿಗೂ ಮೋಸ, ವಂಚನೆ ಮಾಡಿ ಹೆಣ್ಣು ಮಕ್ಕಳ ನ್ಯಾಪ್ ಕಿನ್ ನಲ್ಲೂ ಭ್ರಷ್ಟಾಚಾರಕ್ಕೆ ಮಾಡುತ್ತಿರುವ ಮೊರಾರ್ಜಿ ದೇಸಾಯಿ, ಶ್ರೀಮತಿ ಇಂದಿರಾಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರು ಹಾಗೂ ವಾರ್ಡನ್ ಮೇಲೆ ಶಿಸ್ತು ಕ್ರಮ ಜರುಗಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ರಾಜ್ಯ ಸಮಿತಿ ಹಾಗೂ ಜಿಲ್ಲಾ ಪದಾಧಿಕಾರಿಗಳ ನಿಯೋಗ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಲಕ್ಷ್ಮಣ ಹೊಮ್ಮಿನಾಳ, ಬಸವರಾಜ ರಾಠೋಡ್, ಮೌನೇಶ, ರಮೇಶ ಇತರರು ಇದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ