ಸಿಡ್ನಿ: ವರ್ಣ ತಾರತಮ್ಯ ವನ್ನು ವಿರೋಧಿ ಅಭಿಯಾನಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಾರತ ತಂಡವೂ ಆಸ್ಟ್ರೇಲಿಯಾ ಬಳಗದೊಂದಿಗೆ ಕೈಜೋಡಿಸಿತು.
ಶುಕ್ರವಾರ ಇಲ್ಲಿ ಉಭಯ ತಂಡಗಳ ನಡುವಣ ಆರಂಭವಾದ ಮೊದಲ ಏಕದಿನ ಪಂದ್ಯದಲ್ಲಿ ಈ ಅಭಿಯಾನ ಆರಂಭವಾಯಿತು. ಆಸ್ಟ್ರೇಲಿಯಾದ ಸ್ಥಳೀಯ ಮೂಲನಿವಾಸಿಗಳಿಗೆ ಬೆಂಬಲ ಸೂಚಿಸುವ ಅಭಿಯಾನ ಇದಾಗಿದೆ.
’ನಮ್ಮ ತಂಡವು ಜನಾಂಗೀಯ ತಾರತಮ್ಯವನ್ನು ವಿರೋಧಿಸುತ್ತದೆ. ಅದಕ್ಕಾಗಿ ವಿನೂತನ ರೀತಿಯಲ್ಲಿ ಜಾಗೃತಿ ಅಭಿಯಾನ ನಡೆಸುತ್ತೇವೆ‘ ಎಂದು ಈಚೆಗೆ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ ಹೇಳಿದ್ದರು.
ಸಿಡ್ನಿ ಪ್ರದೇಶದ ಮೂಲನಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುವ ಬರಿಗಾಲು ವೃತ್ತವನ್ನು ಪ್ರದರ್ಶಿಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗರು ಗೌರವ ಸೂಚಿಸಿದರು.