ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸಚಿವರ ಮನೆ ಮುಂದೆ ಧರಣಿ

ದೊಡ್ಡಬಳ್ಳಾಪುರ: ಡಿ.1 ರಿಂದ ಕೆಲಸ ಸ್ಥಗಿತಗೊಳಿಸಿ  ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ನಳಿನಾಕ್ಷಿ ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಧರಣಿಯಲ್ಲಿ ರಾಜ್ಯದ ಎಲ್ಲಾ ಅಂಗನವಾಡಿ ನೌಕರರು ಭಾಗವಹಿಸಲಿದ್ದಾರೆ ಕೇಂದ್ರ ಸರ್ಕಾರದ ಸಚಿವರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಶಿವಮೊಗ್ಗ | ತಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸ್ವಚತಾ ಸಿಬ್ಬಂದಿಗೊಂಳಿಗೆ ಕೈ ಜೋಡಿಸಿ – ಸಂಪತ್‌ ಸಿ ಎಂ

ಬೇಡಿಕೆಗಳು: ಐಸಿಡಿಸಿ ಯೋಜನೆಯ ಸುವರ್ಣ ಮಹೋತ್ಸವನ್ನು ಕೆಂದ್ರ ಸರ್ಕಾರ ಆಚರಿಸಬೇಕು. ಐಸಿಡಿಸಿ ಯೋಜನೆಯನ್ನು ಕಾಯಂ ಮಾಡಬೇಕು, ಕಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು. ಅಂಗನವಾಡಿಗಳ ಘಟಕ ವೆಚ್ಚ ಹೆಚ್ಚಳವನ್ನು ಕೂಡಲೇ ಮಾಡಬೇಕು ಮತ್ತು ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು.

2018 ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ ₹2,700, ಸಹಾಯಕಿಗೆ ₹1,350 ಮಾತ್ರವೇ ನೀಡುತ್ತಿದೆ. ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು. ಎಫ್‌ಆರ್‌ಎಸ್ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ 6 ತಿಂಗಳಿಗೊಮ್ಮೆ ಎಫ್‌.ಆರ್‌.ಎಸ್ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು.

ಇದನ್ನೂ ನೋಡಿ : ICDS ಯೋಜನೆ ಖಾಯಂ ಮಾಡಿ| ವೇತನ ಹೆಚ್ಚಳಕ್ಕೆ ಆಗ್ರಹಿಸಿ ಡಿಸೆಂಬರ್ 1 ರಿಂದ ಅಂಗನವಾಡಿ ನೌಕರರ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *