ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆ ಮುಚ್ಚಬಾರದು: ಕಾರ್ಮಿಕರು ಪ್ರತಿಭಟನೆ

ಕೋಲಾರ: ‘ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು’ ಎಂದು ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂದೆ ಕಾರ್ಖಾನೆಯ ಕಾರ್ಮಿಕರು ಹಾಗೂ ಸಿಐಟಿಯು ಮುಖಂಡರು ಜುಲೈ 23ರಂದು ಪ್ರತಿಭಟನೆ ನಡೆಸಿದರು.

ಮಾಲೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯಿಂದ ಬೈಕ್ ರ‍್ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದ ಕಾರ್ಮಿಕರು, ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಮಾಲೀಕರ ಧೋರಣೆ ಖಂಡಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಚ್.ಎನ್ ಗೋಪಾಲಗೌಡ ಮಾತನಾಡಿ, ’19 ವರ್ಷಗಳಿಂದ ಕಾರ್ಮಿಕರು ವರ್ಗಾ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ. ಕೈಗಾರಿಕೆ ಮುಚ್ಚುವುದಾಗಿ ಮಾಲೀಕರು ಕಾರ್ಮಿಕರಿಗೆ ಏಕಾಏಕಿ ನೋಟಿಸ್ ನೀಡಿದ್ದಾರೆ. 81 ಕಾಯಂ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲು ಮುಂದಾಗಿದ್ದು, ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಕೂಡಲೇ ಕಾರ್ಖಾನೆ ಮುಚ್ಚುವ ಆದೇಶ ವಾಪಸು ಪಡೆದು ಕಾರ್ಮಿಕರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಬೆಂಗಳೂರು| ಆಗಸ್ಟ್‌ 5ರಂದು ಸಾರಿಗೆ ನೌಕರರ ಅನಿರ್ಧಿಷ್ಠಾವಧಿ ಪ್ರತಿಭಟನೆ

‘ಈ ಕೈಗಾರಿಕೆಯಲ್ಲಿ ಬುಲ್ಡೋಜರ್‌ಗೆ ಬೇಕಾಗುವ ವಿಧ ವಿಧವಾದ ಸಾಮಗ್ರಿಗಳನ್ನು ತಯಾರಿಸಿ ವಿದೇಶಕ್ಕೆ ಕಳುಹಿಸಲಾಗುತ್ತದೆ. ಇದರಿಂದಾಗಿ ಲಾಭದಾಯಕವಾಗಿ ಕಂಪನಿ ನಡೆಯುತ್ತಿದ್ದು, ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಸೌಲಭ್ಯ ನೀಡಿಲ್ಲ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಮಾಲೀಕರು ಮಾತ್ರ ಕಾರ್ಮಿಕರ ಹಿತಕಾಪಾಡಲಿಲ್ಲ. ಎಷ್ಟೋ ಬಾರಿ ಸಭೆಗಳು ಆಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಹೆಸರು ಬದಲಾವಣೆ ಮಾಡಲು ಹೊರಟಿದ್ದರು. ಇದರಿಂದಾಗಿ ಕಂಪನಿಯ ಹೆಸರಿನ ಗೊಂದಲದಿಂದಾಗಿ ಕಾರ್ಮಿಕರಿಗೆ ತೊಂದರೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿಯು ಮಾಲೀಕರನ್ನು ಕರೆಸಿ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾಯಂ ಕಾರ್ಮಿಕರು ಕೆಲಸ ಮುಂದುವರಿಸಲು ಕ್ರಮ ವಹಿಸಬೇಕು’ ಮನವಿ ಮಾಡಿದರು.

ವರ್ಗಾ ಅಟ್ಯಾಚ್ಮೆಂಟ್ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪ್ರಭಾಕರನ್, ಶ್ರೀಧರ ರಾವ್, ಆಂಜಿನಪ್ಪ, ಅಶ್ವಥ್, ಸುರೇಶ್ ಕುಮಾರ್, ಹರೀಶ್, ಸಿಐಟಿಯುನ ಗಾಂಧಿನಗರ ನಾರಾಯಣಸ್ವಾಮಿ, ಪಿ.ಆರ್ ಸೂರ್ಯನಾರಾಯಣ, ಎಂ.ವಿಜಯಕೃಷ್ಣ, ಎಚ್.ಬಿ ಕೃಷ್ಣಪ್ಪ, ಅಶೋಕ್, ಭೀಮರಾಜ್, ಚಲಪತಿ, ವೀರಭದ್ರ, ಶಿವಾನಂದ್, ವೆಂಕಟಪ್ಪ ಇದ್ದರು.

ಇದನ್ನೂ ನೋಡಿ: ‘ಸ್ವಚ್ಛ ವಿಧಾನಸಭೆ’ಗಾಗಿ ಎಂಜಿನಿಯರ್ ಪಾದಯಾತ್ರೆ Janashakthi Media

Donate Janashakthi Media

Leave a Reply

Your email address will not be published. Required fields are marked *