ಆಗ್ರಾ(ಉತ್ತರ ಪ್ರದೇಶ): ಆಗ್ರಾ ರೈಲ್ವೆ ವಿಭಾಗದ ಭೋಪಾಲ್‌ನಿಂದ ದೆಹಲಿಯ ನಿಜಾಮುದ್ದೀನ್ ನಿಲ್ದಾಣದವರೆಗೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕಿಡಿಗೆಡಿಗಳು ರೈಲಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು ರೈಲಿನ ಕೋಚ್‌ನ ಗಾಜುಗಳು ಒಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಮೂಲಗಳ ಪ್ರಕಾರ, ಆಗ್ರಾ ರೈಲ್ವೆ ವಿಭಾಗದ ಮಾನಿಯಾ ಮತ್ತು ಜಜೌ ನಿಲ್ದಾಣಗಳ ನಡುವೆ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಸಿ-7 ಕೋಚ್‌ನ ಸೀಟ್ ಸಂಖ್ಯೆ 13-14 ರ ಕಿಟಕಿ ಗಾಜು ಒಡೆದಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಮಾಹಿತಿ ಪಡೆದ ರೈಲ್ವೆ ತಂಡ ಸ್ಥಳಕ್ಕೆ ಧಾವಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‌ಒ ಪ್ರಶಸ್ತಿ ಶ್ರೀವಾಸ್ತವ ತಿಳಿಸಿದ್ದಾರೆ. ಕಲ್ಲು ತೂರಾಟವಾಗಿರುವುದು ಇದೇ ಮೊದಲಲ್ಲ, ಭೋಪಾಲ್‌ನಿಂದ ನಿಜಾಮುದ್ದೀನ್ ನಿಲ್ದಾಣದ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿತ್ತು.
ಇದನ್ನೂ ಓದಿ:ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ
ಅಜ್ಮೀರ್ ದೆಹಲಿ ವಂದೇ ಭಾರತ್ ರೈಲಿಗೆ ಕಲ್ಲು:ಜುಲೈ 19ರಂದು ದೆಹಲಿಯ ಪಾಲಂ ನಿಲ್ದಾಣದ ಸಮೀಪ ಅಜ್ಮೀರ ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ಸ್ ರೈಲಿನ ಮೇಲೆ ದಾಳಿ ನಡೆದಿತ್ತು.ರೈಲಿಗೆ ಸಾಕಷ್ಟು ಹಾನಿಯಾಗಿತ್ತು. ರೈಲಿನ ಬಾಗಿಲು, ಗಾಜು ಎಂಜಿನ್ ಸೇರಿದಂತೆ ಕೆಲವು ಕಡೆ ಕಲ್ಲಿನ ಗುರುತುಗಳಿದ್ದವು.ಇಂಥ ಘಟನೆಗಲೂ ಮರುಕಳಿಸುವುದನ್ನು ತಡೆಯಲು ವಾಯುವ್ಯ ರೈಲ್ವೆ ಅಧಿಕಾರಿ ಶಶಿ ಕಿರಣ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ತನಿಖೆ ನಡೆಸುತ್ತುದ್ದು, ಕಿಡಿಗೇಡಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.