ಬೆಂಗಳೂರು: ವಾಲ್ಮೀಕಿ ನಿಗಮ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರನನ್ನು ವಶಕ್ಕೆ ಪಡೆಯುತ್ತಿದಂತೆ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ.
ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದುಕೊಳ್ಳುತ್ತಿದ ಹಾಗೆ ಬಸವನಗೌಡ ದದ್ದಲ್ ರನ್ನು ವಶಕ್ಕೆ ಪಡೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ವಿಚಾರಣೆ ಮುಗಿಸಿದ ಬಳಿಕ ಬಸವನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ. ಸದ್ಯ ಯಲಹಂಕ ನಿವಾಸದಲ್ಲೂ, ದದ್ದಲ್ ನಿವಾಸದಲ್ಲೂ ಅವರು ಕಂಡುಬಂದಿಲ್ಲ. ವಿಚಾರಣೆ ಬಳಿಕ ಬಂಧನ ಸಾಧ್ಯತೆ ಮುನ್ಸೂಚನೆ ಸಿಕ್ಕ ಹಿನ್ನೆಲೆ ಬಸನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ವಾಲ್ಮೀಕಿ ನಿಗಮ ಹಗರಣ : ಬಿ.ನಾಗೇಂದ್ರ ಜು.18ರವರೆಗೆ ED ಕಸ್ಟಡಿಗೆ
ಇತ್ತ ಇಡಿ ಅಧಿಕಾರಿಗಳು ಬಂಧನಕ್ಕೆ ತಯಾರಿ ಮಾಡಿಕೊಂಡಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಬಂಧನ ಕುಣಿಕೆ ಬಿಗಿಯಾಗುತ್ತಿದ್ದಂತೆ ನಾಪತ್ತೆಯಾಗಿರುವ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರಿಗಾಗಿ ಹುಡುಕಾಟ ನಡೆಸಿರುವ ಇಡಿ. ಯುನಿಯನ್ ಬ್ಯಾಂಕ್ ಅಧಿಕಾರಿಗಳು ಇನ್ನೂ ಪತ್ತೆಯಾಗಿಲ್ಲ.
ಬ್ಯಾಂಕ್ ಅಧಿಕಾರಿಗಳಿಗಾಗಿ ಎಸ್ ಐಟಿ ,ಇಡಿ,ಸಿಬಿಐ ಮೂರು ತನಿಖಾ ತಂಡಗಳಿಂದಲೂ ಶೋಧಕಾರ್ಯ ನಡೆದಿದೆ. ಈಗಾಗಲೇ ಬ್ಯಾಂಕ್‌ನ ಆರು ಮಂದಿ ಮೇಲೆ ಕೇಸ್ ದಾಖಲಾಗಿದೆ. ಆದರೆ ಕೇಸ್ ದಾಖಲಾಗ್ತಿದ್ದಂತೆ ಆರು ಮಂದಿ ಬ್ಯಾಂಕ್ ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ಎಸ್‌ಐಟಿಯಿಂದ ರಿಮ್ಯಾಂಡ್ ಅರ್ಜಿ ಮೂಲಕ ಮಾಹಿತಿ ನೀಡಲಾಗಿದೆ.
ಇದನ್ನು ನೋಡಿ : ಕಳೆದ ಹತ್ತು ವರ್ಷಗಳಲ್ಲಿ ಹಂಚಿಕೆಯಾದ 2.5 ಲಕ್ಷ ಕೋಟಿ ಎಸ್ ಸಿಎಸ್ ಪಿ/ ಟಿಎಸ್ ಪಿ ಮೊತ್ತದ ಲೆಕ್ಕ ಕೊಡಬೇಕಲ್ಲವೇ?