ಬೆಂಗಳೂರು: ‘ವೈದ್ಯರ ನಡೆ ಹಳ್ಳಿಗಳ ಕಡೆ’
ಹಳ್ಳಿಗಳಲ್ಲಿ ಸೋಂಕು ಹೆಚ್ಚು ಹರಡದಂತೆ ತಡೆಯಲು ಪ್ಲಾನ್ ಮಾಡಲಾಗಿದ್ದು, ‘ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಮೂಲಕ, ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರ ಕೊನೆಗೂ ಮುಂದಾಗಿದೆ.
ಹಳ್ಳಿಗಳಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದು, ಸರಕಾರದ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಳ್ಳಿಗಳಲ್ಲಿ ವೈಧ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಜನಪರ ಸಂಘಟನೆಗಳು & ವಿಪಕ್ಷಗಳು ಆಗ್ರಹಿಸಿದ್ದವು. ಕೊನೆಗೂ ರಾಜ್ಯ ಸರಕಾರ ಈಗ ಹಳ್ಳಿಗಳತ್ತ ವೈದ್ಯರನ್ನು ಕಳುಹಿಸಲು ನಿರ್ಧರಿಸಿದೆ.
ಟೆಸ್ಟ್ಗೆ, ಬರಲು ಜನರು ಹಿಂದೇಟು ಹಾಕ್ತಿರೋದ್ರಿಂದ ಹಾಗೂ ಟೆಸ್ಟಿಂಗ್ ಸೆಂಟರ್ ದೂರ ಇರೋ ಹಿನ್ನೆಲೆ ಆರೋಗ್ಯ ಸಿಬ್ಬಂದಿಯೇ ಹಳ್ಳಿಗಳಿಗೆ ಹೋಗಲು ಸರ್ಕಾರ ಸೂಚನೆ ನೀಡಿದೆ.
ಅಲ್ಲದೇ, ಮನೆ ಮನೆಗೆ ತೆರಳಿ ಲಕ್ಷಣ ಇರುವ ಸೋಂಕಿತರಿಗೆ ಆ್ಯಂಟಿಜನ್ ಟೆಸ್ಟ್ ಮಾಡಲು ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ, ವೈದ್ಯರ ಎರವಲು ಪಡೆಯಲು ಸರ್ಕಾರ ಮುಂದಾಗಿದ್ದು, ಫೈನಲ್ ಇಯರ್ ಮೆಡಿಕಲ್ & ಇಂಟರ್ನ್ಶಿಪ್ ವೈದ್ಯರು, ಬಿಎಸ್ಸಿ ನರ್ಸಿಂಗ್, ಬಿಡಿಎಸ್ , ಎಂಡಿಎಸ್, ಅಯುಷ್ ಡಿಗ್ರಿ ಹೋಲ್ಡರ್ಗಳನ್ನ ಬಳಕೆ ಮಾಡಿಕೊಳ್ಳಲಾಗ್ತಿದೆ.
ಸ್ಥಳದಲ್ಲೇ ಚಿಕಿತ್ಸೆಗೆ ಬೇಕಾದ, ಮೆಡಿಸನ್ ಕಿಟ್ ವಿತರಣೆ ಮಾಡಲು ಆದೇಶ ಹೊರಡಿಸಲಾಗಿದೆ. ಕಂದಾಯ ಇಲಾಖೆಯ ಈ ಮಹತ್ವದ ಹೆಜ್ಜೆ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.