11 ಚೆಂಡುಗಳಲ್ಲಿ ಅರ್ಧಶತಕ: ವೈಭವ್ ಸೂರ್ಯವಂಶಿ ವಿಶ್ವದಾಖಲೆ, ಶತಕಕ್ಕೆ ಅಲ್ಪದೂರ!

ನವದೆಹಲಿ: ವೈಭವ್ ಸೂರ್ಯವಂಶಿ ಅವರು ಭಾರತ ‘ಎ’ ತಂಡದ ಪರ ತಮ್ಮ ಹೀನ ಪ್ರದರ್ಶನಕ್ಕೆ ತಿರುಗೇಟು ನೀಡುತ್ತಾ, ಕೇವಲ 11 ಚೆಂಡುಗಳಲ್ಲಿ ಅರ್ಧಶತಕ ಸಿಡಿಸಿ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕದ ವಿಶ್ವದಾಖಲೆ ನಿರ್ಮಿಸಿದ್ದಾರೆ. ವೈಭವ್

ಜೂನ್‌ 21ರಂದು ಟ್ರೈ-ನೇಷನ್ ಸರಣಿ ಫೈನಲ್ನಲ್ಲಿ ಶ್ರೀಲಂಕಾ ಎ ವಿರುದ್ಧ ನಡೆದ ಪಂದ್ಯದಲ್ಲಿ, ರಂಗಿರಿ ಡಂಬುಲ್ಲ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಸಾಧನೆ ಮೂಡಿಬಂದಿತು.

ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ‘ಎ’ ತಂಡದ ಪರ ಕ್ರೀಸ್‌ಗೆ ಬಂದ ಸೂರ್ಯವಂಶಿ, ಆರಂಭದಲ್ಲೇ ದಾಳಿ ಆರಂಭಿಸಿದರು. ಮೊಹಮದ್ ಶಿರಾಜ್ ಎಸೆದ ಮೊದಲ ಚೆಂಡನ್ನೇ ಬೌಂಡರಿಯಾಗಿ ಹೊಡೆದು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಶಾಲಾ ಬಸ್ ಚಾಲಕರಲ್ಲಿ ಮೊಬೈಲ್ ಬಳಕೆ ಆತಂಕಕಾರಿ: ಮಕ್ಕಳ ರಸ್ತೆ ಸುರಕ್ಷತೆ ಕುರಿತು ಗಂಭೀರ ಎಚ್ಚರಿಕೆ

ಕೆವಲ 15 ವರ್ಷದ ಈ ಆಟಗಾರ, ಈ ಸರಣಿಯಲ್ಲಿ ಕಡಿಮೆ ರನ್‌ಗಳ ಸರಣಿಯ ನಂತರ ಹಾಗೂ ಇತ್ತೀಚೆಗೆ ಎದುರಾಳಿಯೊಂದಿಗೆ ನಡೆದ ಅಸಭ್ಯ ಘಟನೆಯ ಬಳಿಕ ಒತ್ತಡದಲ್ಲಿದ್ದರು. ಆದರೆ ಫೈನಲ್‌ನಲ್ಲಿ ಸಿಕ್ಸರ್‌ಗಳು ಮತ್ತು ಬೌಂಡರಿಗಳ ಮಳೆಗರೆದು ಪಂದ್ಯವನ್ನು ಸಂಪೂರ್ಣವಾಗಿ ತಿರುವುಮಾಡಿದರು.

ಶಿರಾಜ್ ಅವರ ಎರಡನೇ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿ 26 ರನ್‌ಗಳನ್ನು ಗಳಿಸಿ, ತಮ್ಮ ದಾಳಿಯ ತೀವ್ರತೆಯನ್ನು ಹೆಚ್ಚಿಸಿದರು.

ಅಂತಿಮವಾಗಿ ಕೇವಲ 11 ಚೆಂಡುಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯವಂಶಿ, 20 ವರ್ಷದ ಹಳೆಯ ದಾಖಲೆ ಮುರಿದರು. ಈ ಹಿಂದೆ ಕೌಶಲ್ಯ ವೀರರತ್ನೆ ಅವರು 12 ಚೆಂಡುಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.

ವೇಗದ ಲಿಸ್ಟ್ ಎ ಅರ್ಧಶತಕಗಳು – ಎಸೆತಗಳಿಂದ

ಇದರ ಜೊತೆಗೆ, ಭಾರತದ ದಾಖಲೆಗೂ ಮೀರಿದ ಸಾಧನೆ ಮಾಡಿದರು. ಈ ಹಿಂದೆ ಸರ್ಫರಾಜ್ ಖಾನ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ 15 ಚೆಂಡುಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ಡಿಸೆಂಬರ್ 2024ರಲ್ಲಿ ಲಿಸ್ಟ್ ‘ಎ’ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ, ಇದುವರೆಗೆ ಕೇವಲ 12 ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರ ಪರ 190 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಅವರದ್ದು.

ಶತಕ ತಪ್ಪಿದ ಸೂರ್ಯವಂಶಿ

ಅರ್ಧಶತಕದ ಬಳಿಕವೂ ದಾಳಿ ಮುಂದುವರಿಸಿದ ಸೂರ್ಯವಂಶಿ, ತಮ್ಮ ಮೊದಲ ಲಿಸ್ಟ್ ‘ಎ’ ಶತಕದತ್ತ ವೇಗವಾಗಿ ಸಾಗಿದರು. ಆದರೆ ಶತಕದ ದಾಖಲೆ ಸಮೀಕರಿಸುವ ಅವಕಾಶವನ್ನು ಸ್ವಲ್ಪ ಅಂತರದಲ್ಲಿ ಕಳೆದುಕೊಂಡರು.

ಸಹನ್ ಅರಚ್ಚಿಗೆ ಎಸೆದ ಚೆಂಡನ್ನು ಮಿಡ್-ಆಫ್ ಕ್ಷೇತ್ರರಕ್ಷಕನ ಕೈಗೆ ಒಪ್ಪಿಸಿದ ಅವರು, 29 ಚೆಂಡುಗಳಲ್ಲಿ 94 ರನ್‌ಗಳಿಗೆ ಔಟ್ ಆದರು. ಈ ವೇಳೆ ಪವರ್‌ಪ್ಲೇ ಇನ್ನೂ ಮುಗಿಯದೇ ಇದ್ದದ್ದು ಗಮನಾರ್ಹ.

ಇದನ್ನೂ ನೋಡಿ: SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್‌ ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *