ಉತ್ತರಾಖಂಡ ದುರಂತ; ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ, ಮುಂದುವರೆದ ಶೋಧ ಕಾರ್ಯಚರಣೆ

ಉತ್ತರಾಖಂಡ ,ಫೆ 19: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ 61 ಮಂದಿಯ ಮೃತದೇಹಗಳು ಹೊರೆತೆಗೆಯಲಾಗಿದೆ. ಉಳಿದವರಿಗಾಗಿ ತಪೋವನ್ ಸುರಂಗದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ನಂದಾ ದೇವಿ ಹಿಮನದಿ ಸ್ಫೋಟದಿಂದಾಗಿ ಅಲ್ಲಿಯ ಜನರ ಜೀವನ ಅಸ್ತವ್ಯಸ್ಥಗೊಂಡಿದೆ. ಯಾರು ಕೂಡ ಕಂಡು ಕೇಳರಿಯದ ರೀತಿಯಲ್ಲಿ ಹಿಮ ಕುಸಿತಗೊಂಡಿದೆ. ಇದರಿಂದಾಗಿ ಅಲ್ಲಿಯ ಎಷ್ಟೊ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಹಿಮ ಸ್ಪೋಟದಿಂದ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ, ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಫೆಬ್ರವರಿ 7 ರಂದು ಚಮೋಲಿ ಜಿಲ್ಲೆಯ ನಂದಾ

ದೇವಿ ಹಿಮನದಿ ಸ್ಫೋಟಗೊಂಡ 13 ದಿನಗಳಿಂದ ಫ್ಲಾಶ್ ಪ್ರವಾಹದ ಭೀತಿಯ ನಡುವೆಯೂ ರಕ್ಷಣಾ ಸೇನೆ ಅಲ್ಲೇ ಬಿಡಾರವನ್ನು ಹೂಡಿ, ತಪೋವನದ ಸುರಂಗದ ಒಳಗಡೆ ಕೆಸರಿನಿಂದ ಉಸಿರುಗಟ್ಟಿ ಮೃತಪಟ್ಟಿರುವ 61 ಮೃತದೆಹಗಳನ್ನು ಹೊರತೆಗೆಯಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಹೇಳಿದ್ದಾರೆ. ಮೃತಪಟ್ಟ ಕುಟುಂಬಗಳಿಗೆ ತುರ್ತು ಪರಿಹಾರ ನೀಡಲಾಗುತ್ತಿದೆ ಎಂದು  ರಾಜ್ಯ ಸರಕಾರ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *