ಉತ್ತರಾಖಂಡ | ಮದರಸಾ ಧ್ವಂಸ ನಂತರ ಹಿಂಸಾಚಾರ; 5000ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್

ಹಲ್ದ್‌ವಾನಿ: ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮಸೀದಿ ಮತ್ತು ಮದ್ರಸಾವನ್ನು ದ್ವಂಸ ಮಾಡಿದ ನಂತರ ಭುಗಿಲೆದ್ದ ಹಿಂಸಾಚಾರ ಪೀಡಿತ ಉತ್ತರಾಖಂಡದ ಪಟ್ಟಣದ ಹೊರ ಪ್ರದೇಶಗಳ ಕರ್ಫ್ಯೂ ಅನ್ನು ಶನಿವಾರ ತೆಗೆದುಹಾಕಲಾಗಿದೆ. ಆದರೆ ಗುರುವಾರ ಮದರಸಾ ಕೆಡವಿದ ಬಂಭೂಲ್‌ಪುರ ಪ್ರದೇಶದಲ್ಲಿ ಇನ್ನೂ ಜಾರಿಯಲ್ಲಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೆಸರಿಸಲಾದ 19 ಜನರು ಮತ್ತು 5 ಸಾವಿರ ಅಪರಿಚಿತರ ವಿರುದ್ಧ ಎಫ್‌ಐಆಎರ್‌ ದಾಖಲಿಸಲಾಗಿದೆ.

“ಪೊಲೀಸರು ಹೆಸರಿಸಲಾದ 19 ಮತ್ತು 5,000 ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಂಧಿಸಲು ಪ್ರಾರಂಭಿಸಿದ್ದು, ಹಲವಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದುಷ್ಕರ್ಮಿಗಳನ್ನು ಗುರುತಿಸಿ ಅವರನ್ನು ಹುಡುಕಲಾಗುತ್ತಿದೆ” ಎಂದು ನೈನಿತಾಲ್‌ನ ಎಸ್‌ಎಸ್‌ಪಿ ಪಿ.ಎನ್. ಮೀನಾ ಅವರು ಹೇಳಿದ್ದಾರೆ.ಶನಿವಾರ ಪಟ್ಟಣದ ಹೊರವಲಯದಲ್ಲಿರುವ ಅಂಗಡಿಗಳು ತೆರೆದಿದ್ದರೂ ಶಾಲೆಗಳನ್ನು ಮುಚ್ಚಲಾಗಿತ್ತು.

ಇದನ್ನೂ ಓದಿ: ಉತ್ತರಾಖಂಡ | ಮಸೀದಿ & ಮದ್ರಸಾ ಧ್ವಂಸದ ನಂತರ ಭುಗಿಲೆದ್ದ ಹಿಂಸಾಚಾರ; 5 ಸಾವು

“ಹಲ್ದ್‌ವಾನಿಯಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು, ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ. ಬಂಭೂಲ್ಪುರದಲ್ಲಿ ಕರ್ಫ್ಯೂ ಮುಂದುವರೆದಿದೆ. 3 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಐದು ಜನರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ… ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂರು ಜನರು ಗಂಭೀರ  ಗಾಯಗೊಂಡಿದ್ದಾರೆ” ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಎ ಪಿ ಅಂಶುಮಾನ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ವದಂತಿಗಳು ಹರಡುವುದನ್ನು ತಡೆಯಲು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ, ಕರ್ಫ್ಯೂ ಜಾರಿಯಲ್ಲಿರುವ ಬಂಭೂಲ್‌ಪುರ ಪ್ರದೇಶದ ನಿವಾಸಿಗಳಿಗೆ ಕಾಲಕಾಲಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗುತ್ತಿದೆ ಎಂದು ಎಡಿಜಿ ತಿಳಿಸಿದ್ದಾರೆ. ಕತ್ಗೊಡಮ್ ವರೆಗೆ ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಸ್ಸಾಂ ಸಿಎಂ ಹಿಮಂತ ಶರ್ಮಾ & ವಿಐಪಿಗಳ ವಿಮಾನ ಪ್ರಯಾಣಕ್ಕೆ 58.23 ಕೋಟಿ ಸಾರ್ವಜನಿಕ ಹಣ ಖರ್ಚು!

ಎಲ್ಲಿಯೂ ಹೊಸದಾಗಿ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಗುರುವಾರದ ಹಿಂಸಾಚಾರದಲ್ಲಿ ಆರು ಮಂದಿ ಗಲಭೆಕೋರರು ಎಂದು ಆರೋಪಿಸಲಾಗಿರುವ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಸ್ಥಳೀಯರು ಪುರಸಭೆಯ ಕಾರ್ಮಿಕರು ಮತ್ತು ಪೊಲೀಸರ ಮೇಲೆ ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದರಿಂದ ಗುರುವಾರ 60 ಕ್ಕೂ ಹೆಚ್ಚು ಜನರು ಗಾಯಗೊಂಡರು. ಹೀಗಾಗಿ ಅನೇಕ ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆಯುವಂತೆ ಆಯಿತು, ಇದರ ನಂತರ ಗುಂಪು ಅಲ್ಲಿ ಬೆಂಕಿ ಹಚ್ಚಿದೆ” ಎಂದು ಪೊಲೀಸರು ದೂರಿದ್ದಾರೆ.

ಪತ್ರಕರ್ತ ಸೇರಿದಂತೆ ಏಳು ಮಂದಿ ಶುಕ್ರವಾರ ಮೂರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ:ಯುವಜನತೆಯನ್ನು ಮತಾಂಧತೆಯ ಖೆಡ್ಡಾಗೆ ತಳ್ಳಿದ ಸಂಘ ಪರಿವಾರ… Janashakthi Media

Donate Janashakthi Media

Leave a Reply

Your email address will not be published. Required fields are marked *