ಉತ್ತರಾಖಂಡ | ದೇಶದ ಮೊದಲ ಏಕರೂಪ ನಾಗರಿಕ ಸಂಹಿತೆ ಮಂಡನೆ; ಲಿವ್-ಇನ್ ಜೋಡಿಗಳ ನೋಂದಣಿ ಕಡ್ಡಾಯ, ಇಲ್ಲವೆಂದರೆ ಶಿಕ್ಷೆ!

ಡೆಹ್ರಾಡೂನ್: ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯು ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದ್ದು, ಲಿವ್-ಇನ್ ಸಂಬಂಧಗಳಲ್ಲಿ ಇರುವವರು ಒಂದು ತಿಂಗಳೊಳಗೆ ಸಂಬಂಧಗಳನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ನೋಂದಾವಣೆ ಮಾಡದೆ ಇದ್ದವರ ವಿರುದ್ಧ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಯುಸಿಸಿ ಮಸೂದೆ ಮಂಡಿಸಿರುವ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಿದ್ದು, ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದ ವಿಷಯಗಳಲ್ಲಿ ರಾಜ್ಯದ ಎಲ್ಲಾ ಸಮುದಾಯಗಳಿಗೆ ಏಕರೂಪದ ನಾಗರಿಕ ಕಾನೂನುಗಳನ್ನು ಪರಿಚಯಿಸುವ ಗುರಿಯನ್ನು ಇದು ಹೊಂದಿದೆ. ಯಾವುದೆ ಧರ್ಮದ ಪ್ರಕಾರ ಬದಲಾಗುವ ಎಲ್ಲಾ ವೈಯಕ್ತಿಕ ಕಾನೂನುಗಳನ್ನು ಇದು ತೆಗೆದುಹಾಕಲಿದೆ. ಇದೇ ಚೌಕಟ್ಟಿನೊಳಗೆ ಬಿಜೆಪಿ ನೇತೃತ್ವದ ಉತ್ತರಾಖಂಡ ಸರ್ಕಾರವು ಲಿವ್-ಇನ್ ಸಂಬಂಧಗಳನ್ನು ಒಳಗೊಳಿಸಿದ್ದು, ಅವುಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಏಕರೂಪ ನಾಗರಿಕ ಸಂಹಿತೆ

ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ : ‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ’ ಸುಪ್ರೀಂ ಕೋರ್ಟ್‌ ಆಕ್ರೋಶ

ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದ ನಿಬಂಧನೆಗಳ ಹೊರತಾಗಿ, ಮಸೂದೆಯು ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳನ್ನು ಸಹ ನಿಷೇಧಿಸುತ್ತದೆ. ಆದರೆ ಇದು ಧಾರ್ಮಿಕ ವಿಧಿಗಳು, ಸಾಂಪ್ರದಾಯಿಕ ಆಚರಣೆಗಳು ಮತ್ತು ಮುಂತಾದವುಗಳ ಪ್ರಕಾರ ವಿವಾಹಗಳನ್ನು ಮಾಡಲು ಅನುಮತಿಸುತ್ತದೆ, ಆದರೆ ಮಸೂದೆಯ ಅಡಿಯಲ್ಲಿ ಅವರ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ.ಏಕಏಕರೂಪ ನಾಗರಿಕ ಸಂಹಿತೆರೂಪ ನಾಗರಿಕ ಸಂಹಿತೆ

ಆಸ್ತಿ ಮತ್ತು ಉತ್ತರಾಧಿಕಾರದ ವಿಷಯದಲ್ಲಿ, ಮಸೂದೆಯು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾದ ಉತ್ತರಾಧಿಕಾರದ ಹಕ್ಕುಗಳನ್ನು ನೀಡುತ್ತದೆ. ದಂಪತಿಗಳು ವಿವಾಹಿತರಾಗಿರಲಿ ಅಥವಾ ಇಲ್ಲದಿರಲಿ, ಆಸ್ತಿ ಹಕ್ಕುಗಳ ವಿಷಯದಲ್ಲಿ ಅವರ ಮಕ್ಕಳೆಲ್ಲರೂ ಕಾನೂನುಬದ್ಧ ಉತ್ತರಾಧಿಕಾರಿಗಳು ಎಂದು ಅದು ಹೇಳುತ್ತದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ, ಪತಿಯು ಅತ್ಯಾಚಾರ ಅಥವಾ ಇನ್ನಾವುದೇ ಅಸ್ವಾಭಾವಿಕ ಲೈಂಗಿಕ ಅಪರಾಧದಲ್ಲಿ ತಪ್ಪಿತಸ್ಥನಾಗಿದ್ದರೆ ವಿಚ್ಛೇದನವನ್ನು ಪಡೆಯುವ ಹಕ್ಕನ್ನು ಮಸೂದೆಯು ಮಹಿಳೆಯರಿಗೆ ನೀಡುತ್ತದೆ.

ವ್ಯಭಿಚಾರ, ಮಾನಸಿಕ ಅಥವಾ ದೈಹಿಕ ಕ್ರೌರ್ಯ, ತೊರೆದು ಹೋಗುವಿಕೆ, ಮಾನಸಿಕ ಅಸ್ವಸ್ಥತೆ ಇತ್ಯಾದಿಗಳ ಸಂದರ್ಭದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಹಕ್ಕನ್ನು ಪುರುಷರು ಮತ್ತು ಮಹಿಳೆಯರಿಗೆ ಮಸೂದೆಯು ನೀಡುತ್ತದೆ. ಅದಾಗ್ಯೂ, ಇದು ಯಾವುದೇ ಪರಿಶಿಷ್ಟ ಪಂಗಡದ (ಎಸ್‌ಟಿ) ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ಮಸೂದೆ ಹೇಳುತ್ತದೆ. ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಶಾಸಕ ಅಮಿನುಲ್ ಇಸ್ಲಾಂ ಅವರು ಈ ವಿನಾಯಿತಿಯನ್ನು ಉಲ್ಲೇಖಿಸುವ ಮೂಲಕ ಮಸೂದೆಯ ಪ್ರಸ್ತಾವಿತ ಸಾರ್ವತ್ರಿಕತೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 1000 ಕೋಟಿ ರೂ, ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ!

ಲೈವ್-ಇನ್ ನಿಯಮಗಳು

ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಲು ನಿಯಮಗಳನ್ನು ರೂಪಿಸುವ ಮಸೂದೆಯು, ರಾಜ್ಯದೊಳಗೆ ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗಳು, ಅವರು ಉತ್ತರಾಖಂಡದ ನಿವಾಸಿಗಳಾಗಿರಲಿ ಅಥವಾ ಇಲ್ಲದಿರಲಿ, ಸಂಬಂಧಿತ ರಿಜಿಸ್ಟ್ರಾರ್‌ಗೆ ಹೇಳಿಕೆಯನ್ನು ಸಲ್ಲಿಸಬೇಕು ಎಂದು ಹೇಳುತ್ತದೆ. ದಂಪತಿಗಳು ಬೇರೆಯಾಗಲು ನಿರ್ಧರಿಸಿದರೆ, ಅವರು ಮುಕ್ತಾಯದ ಹೇಳಿಕೆಯನ್ನು ಸಲ್ಲಿಸುವ ಮೂಲಕ ಸಂಬಂಧವನ್ನು ಕೊನೆಗೊಳಿಸಬಹುದು. ದಂಪತಿಗಳಲ್ಲಿ ಯಾರಾದರೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅವರ ಪೋಷಕರಿಗೆ ತಿಳಿಸುವ ಅಧಿಕಾರವನ್ನು ರಿಜಿಸ್ಟ್ರಾರ್‌ಗೆ ನೀಡಲಾಗಿದೆ.ಏಕರೂಪ ನಾಗರಿಕ ಸಂಹಿತೆ

ಯಾವುದೇ ಲೈವ್-ಇನ್ ದಂಪತಿಗಳು ತಮ್ಮ ಸಂಬಂಧವನ್ನು ನೋಂದಾಯಿಸದಿದ್ದರೆ, ರಿಜಿಸ್ಟ್ರಾರ್ ಅವರಿಗೆ ಹಾಗೆ ಮಾಡಲು ಸೂಚನೆಯನ್ನು ಕಳುಹಿಸುವ ಅಧಿಕಾರ ನೀಡಿದ್ದು, ದಂಪತಿಗಳು ಅದನ್ನು ಒಂದು ತಿಂಗಳೊಳಗೆ ಪಾಲಿಸಬೇಕಿದೆ. ಒಂದು ವೇಳೆ ದಂಪತಿಗಳು ಇನ್ನೂ ಸಂಬಂಧವನ್ನು ನೋಂದಾಯಿಸದಿದ್ದರೆ, ಅವರಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ರೂ 10,000 ದಂಡ ವಿಧಿಸಬಹುದು. ಲಿವ್-ಇನ್ ಸಂಬಂಧದಿಂದ ಜನಿಸಿದ ಮಗುವನ್ನು ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಸಂಬಂಧದಲ್ಲಿರುವ ಮಹಿಳೆಯರು ಜೀವನಾಂಶವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಮಸೂದೆ ಹೇಳುತ್ತದೆ.

ಇದನ್ನೂ ಓದಿ: ಕೇರಳದಲ್ಲೊಂದು ಅಚ್ಚರಿಯ ಬೆಳವಣಿಗೆ | ಗೋಡ್ಸೆ ಭಾವಚಿತ್ರ ಸುಟ್ಟು ಎಬಿವಿಪಿ ಪ್ರತಿಭಟನೆ!

ಉತ್ತರಾಖಂಡ ಸಂಪುಟ ಈಗಾಗಲೇ ವಿಧೇಯಕಕ್ಕೆ ತನ್ನ ಒಪ್ಪಿಗೆಯನ್ನು ಭಾನುವಾರ ನೀಡಿದ್ದು, ನಾಲ್ಕು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನದ ಎರಡನೇ ದಿನವಾದ ಫೆಬ್ರವರಿ 6 ರಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಸೂದೆಯನ್ನು ಮಂಡಿಸಿದ್ದಾರೆ.

2022 ರಲ್ಲಿ ಉತ್ತರಾಖಂಡ ಸರ್ಕಾರವು ಯುಸಿಸಿಯ ಕರಡು ಸಿದ್ಧಪಡಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿಯನ್ನು ರಚಿಸಿತು. ಸಮಿತಿಯ ಇತರ ಸದಸ್ಯರಲ್ಲಿ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಸಾಮಾಜಿಕ ಹೋರಾಟಗಾರ ಎನ್ನಲಾಗಿರುವ ಮನು ಗೌರ್, ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಖಾ ದಂಗ್ವಾಲ್ ಸೇರಿದ್ದಾರೆ. ಮಸೂದೆಯು ಕಾಯಿದೆಯಾದರೆ ಉತ್ತರಾಖಂಡವು ಯುಸಿಸಿ ಹೊಂದಿರುವ ಭಾರತದ ಮೊದಲ ರಾಜ್ಯವಾಗಲಿದೆ.ಏಕರೂಪ ನಾಗರಿಕ ಸಂಹಿತೆ

ವಿಡಿಯೊ ನೋಡಿ: ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಮತ ತಿರುಚಿದ ಚುನಾವಣಾ ಅಧಿಕಾರಿ – ವಿಡಿಯೋ ಬಹಿರಂಗ! Janashakthi Media

Donate Janashakthi Media

Leave a Reply

Your email address will not be published. Required fields are marked *