ಉತ್ತರ ಪ್ರದೇಶ | ಸಾರಿಗೆ ಕಚೇರಿಯೊಳಗೆ 40 ಉದ್ಯೋಗಿಗಳು ಇದ್ದಾಗಲೇ ಬೀಗ ಜಡಿದ ನಗರ ಸಭೆ!

ಲಖ್ನೋ: ಆಸ್ತಿ ತೆರಿಗೆ ಪಾವತಿಸದ ಕಾರಣ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಯುಪಿಎಸ್ಆರ್‌ಟಿಸಿ)ದ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಗೆ ಮೀರತ್ ಮುನ್ಸಿಪಲ್ ಕಾರ್ಪೊರೇಷನ್ (ಎಂಎಂಸಿ) ಅಧಿಕಾರಿಗಳು ಮಂಗಳವಾರ ಬೀಗ ಜಡಿದಿರುವ ಘಟನೆ ವರದಿಯಾಗಿದೆ. ಅಧಿಕಾರಿಗಳು ಕಚೇರಿಗೆ ಬೀಗ ಜಡಿಯುವಾಗ ಕಚೇರಿಯ ಒಳಗೆ 40 ಉದ್ಯೋಗಿಗಳು ಇದ್ದರು ಎಂದು ವರದಿ ಉಲ್ಲೇಖಿಸಿದೆ.

29 ಕೋಟಿ ಆಸ್ತಿ ತೆರಿಗೆ ಪಾವತಿಸದ ಕಾರಣ ಕಟ್ಟಡಕ್ಕೆ ಸೀಲ್ ಹಾಕಲಾಗಿದೆ ಎಂದು ಎಂಎಂಸಿ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಮಮತಾ ಮಾಳವಿಯಾ ಮಾತನಾಡಿ, “ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ಅವರು ಬೀಗವನ್ನು ತೆಗೆದು ಹಾಕುವಂತೆ ಮುನ್ಸಿಲ್‌ಗೆ ಕೇಳಿದ್ದಾರೆ. ಯುಪಿಎಸ್ಆರ್‌ಟಿಸಿ ಹಲವಾರು ವರ್ಷಗಳಿಂದ 29 ಕೋಟಿ ರೂ. ಬಾಕಿ ಇಟ್ಟಿದೆ” ಎಂದು ಹೇಳಿದ್ದಾರೆ. ಉತ್ತರ ಪ್ರದೇಶ

ಇದನ್ನೂ ಓದಿ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ – ಸಿದ್ದರಾಮಯ್ಯ ಕಿಡಿ

ತಮ್ಮನ್ನು ಸುಮಾರು ಒಂದು ಗಂಟೆಗಳ ಕಾಲ ಒಳಗೆ ಲಾಕ್ ಮಾಡಲಾಗಿತ್ತು ಎಂದು ಯುಪಿಎಸ್‌ಆರ್‌ಟಿಸಿ ನೌಕರರು ಆರೋಪಿಸಿದ್ದಾರೆ. “ನಗರಸಭೆ ಅಧಿಕಾರಿಗಳು ಆಗಮಿಸಿ ಯಾವುದೆ ಸೂಚನೆ ನೀಡದೆ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕರು ಸೇರಿದಂತೆ ಹಲವು ನೌಕರರು ಇದ್ದ ಕಚೇರಿಗೆ ಬೀಗ ಜಡಿದಿದ್ದಾರೆ” ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶ

“ಕಟ್ಟಡಕ್ಕೆ ಈ ಹಿಂದೆ ವಿಧಿಸಿದ್ದ ಪೌರ ಸಂಸ್ಥೆ ಆಸ್ತಿ ತೆರಿಗೆ ಮೌಲ್ಯಮಾಪನದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೆವು. ಆ ಪ್ರಕರಣ ಪ್ರಕ್ರಿಯೆಯಲ್ಲಿದೆ, ಆದರೆ ಎಂ.ಎಂ.ಸಿ. ಅಧಿಕಾರಿಗಳು ಮಂಗಳವಾರ ಕಚೇರಿಗೆ ಬೀಗ ಹಾಕಿದ್ದಾರೆ” ಎಂದು ನೌಕರರು ಹೇಳಿದ್ದಾರೆ.

ಯುಪಿಎಸ್‌ಆರ್‌ಟಿಸಿ ನೌಕರರ ಹೇಳಿಕೆಯನ್ನು ನಿರಾಕರಿಸಿರುವ ಮಾಳವಿಯಾ ಅವರು, “ಈ ಹಿಂದೆಯೇ ಅವರಿಗೆ ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಕಳುಹಿಸಲಾಗಿದೆ. ಬಸ್ ಡಿಪೋ ಕಚೇರಿ ಸಂಕೀರ್ಣದ ಹೊರತಾಗಿ, ಎಂಎಂಸಿ ರಾಜ್ಯ ಅಬಕಾರಿ ಕಚೇರಿಗೆ ಕೂಡಾ 80 ಲಕ್ಷ ರೂ. ಬಾಕಿ ಮೊತ್ತದ ಕಾರಣಕ್ಕೆ ಬೀಗ ಹಾಕಲಾಗಿದೆ” ಎಂದು ಹೇಳಿದ್ದಾರೆ. ತೆರಿಗೆ ನೀಡದ ಕಾರಣ ಅಬಕಾರಿ ಕಚೇರಿಗೆ ಎರಡನೆ ಬಾರಿ ಬೀಗ ಜಡಿಯಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಹೆಂಚುಗಳು ನಿರ್ಮಾಣವಾಗುವುದು ಹೇಗೆ? ಅದರ ಹಿಂದಿರುವ ಕಾರ್ಮಿಕರ ಶ್ರಮ ಎಂತದ್ದು? ಈ ವಿಡಿಯೋ ನೋಡಿ Janashakthi Media

Donate Janashakthi Media

Leave a Reply

Your email address will not be published. Required fields are marked *