ಅಮೇಥಿ: ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ತಮ್ಮ ಸ್ವಂತ ಮನೆಯಲ್ಲಿ ಮಲಗಿದ್ದ 27 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗಳ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಆಸಿಡ್ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಮುಖ ಮತ್ತು ಕೈಗಳ ಮೇಲೆ ಸುಟ್ಟ ಗಾಯಗಳೊಂದಿಗೆ ತಾಯಿ ಮತ್ತು ಮಗಳು ಸ್ಥಳೀಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಯು ಜನವರಿ 10 ರಂದು ತಡರಾತ್ರಿ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಅಮೇಥಿಯ ಗೌರಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಶುಭವತ್‌ಪುರ ಗ್ರಾಮದಲ್ಲಿ ಘಟನೆ ವರದಿಯಾಗಿದೆ ಎಂದು ಅಮೇಥಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಹರೇಂದ್ರ ಕುಮಾರ್ ಹೇಳಿದ್ದಾರೆ. ದುಷ್ಕರ್ಮಿಗಳು ತನ್ನ ಮತ್ತು ಮಗಳ ಮೇಲೆ ದಾಳಿ ಮಾಡಿ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಮಹಿಳೆ ಭಾನ್ಮತಿ ಲೋಧಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಉತ್ತರ ಪ್ರದೇಶ
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ ಪ್ರಕರಣ | ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಘಟನೆಯು ಸ್ವಲ್ಪ ಅನುಮಾನಾಸ್ಪದವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಫೋರೆನ್ಸಿಕ್ ಅಧಿಕಾರಿಗಳು ಪೊಲೀಸ್ ತಂಡದೊಂದಿಗೆ ಅಪರಾಧ ಸ್ಥಳವನ್ನು ಪರಿಶೀಲಿಸಿದ್ದಾರೆ ಎಂದು ಎಎಸ್ಪಿ ಹೇಳಿದ್ದಾರೆ. ಸಂತ್ರಸ್ತೆ ಅಥವಾ ಆಕೆಯ ಕುಟುಂಬದಿಂದ ಲಿಖಿತ ದೂರನ್ನು ಪಡೆದುಕೊಂಡ ನಂತರ ಎಫ್‌ಐಆರ್ ದಾಖಲಿಸಲು ಸಂಬಂಧಿಸಿದ ಪೊಲೀಸ್ ಠಾಣೆಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ಆಸಿಡ್ ಮಾರಾಟ ಮುಕ್ತ ಮಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿದ ದಿನವೇ ಆಸಿಡ್ ದಾಳಿ ನಡೆಯಿತು. ರಾಜ್ಯದಲ್ಲಿ ಆಸಿಡ್ ಮುಕ್ತ ಮಾರಾಟವನ್ನು ನಿಷೇಧಿಸುವಂತೆ ಕೋರಿ ನವ್ಯಾ ಕೇಶರವಾಣಿ ಮತ್ತು ಇತರ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಮತ್ತು ನ್ಯಾಯಮೂರ್ತಿ ಕ್ಷಿತಿಜ್ ಶೈಲೇಂದ್ರ ಅವರ ವಿಭಾಗೀಯ ಪೀಠವು ಅಂತಹ ದಾಳಿಯ ಸಂತ್ರಸ್ತರಿಗೆ ಎಷ್ಟು ಪರಿಹಾರವನ್ನು ನೀಡಲಾಗಿದೆ ಎಂಬುದನ್ನು ಸಹ ಸರ್ಕಾರ ಬಹಿರಂಗಪಡಿಸಬೇಕು ಎಂದು ರಾಜ್ಯ ಪರವಾಗಿ ಹಾಜರಾದ ವಕೀಲರನ್ನು ಕೇಳಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಎಲ್ಲಾ ಆಸಿಡ್ ದಾಳಿಗಳ ವಿವರಗಳನ್ನು ನ್ಯಾಯಾಲಯ ಕೇಳಿದೆ.
ವಿಡಿಯೊ ನೋಡಿ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್ ಎಂಬ ತೂಗುಗತ್ತಿ – ಕೆ. ಮಹಾಂತೇಶ್ Janashakthi Media