ಲಖನೌ: ದಲಿತ ಬಾಲಕನನ್ನು ಥಳಿಸಿ, ಆತನ ಮಲವನ್ನು ಕೈಯಲ್ಲೇ ಒತ್ತಾಯಪೂರ್ವಕವಾಗಿ ತೆಗೆಸಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಎಂಬಲ್ಲಿ ನಡೆದಿದೆ.
11ನೇ ತರಗತಿಯ ದಲಿತ ವಿದ್ಯಾರ್ಥಿ ಜಾಗ್ರಾಮ್ ಯಾದವ್ ಎಂಬವರ ಹೊಲದಲ್ಲಿ ಬಹಿರ್ದೇಸೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಸೈಫೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹೊಲದಲ್ಲಿ ಬಾಲಕ ಮಲ ವಿಸರ್ಜನೆ ಮಾಡಿದ್ದರಿಂದ ಕೆರಳಿದ ಯಾದವ್, ಬಾಲಕನನ್ನು ಥಳಿಸಿ ತನ್ನ ಹೊಲದಿಂದ ಮಲವನ್ನು ಬಾಲಕನ ಕೈಯಿಂದಲೇ ತೆಗೆಸಿದ್ದಾರೆ ಎಂದು ತಿಳಿದುಬಂದಿದೆ. ಪರ್ಸಾನಾ ಪಂಚಾಯತ್ ವ್ಯಾಪ್ತಿಯಲ್ಲಿ ಜುಲೈ 13ರಂದು ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ದಲಿತರು ಊರಾಚೆ ಇರಲು ಮೂಲ ಕಾರಣ ಮನುವಾದ: DHS ಸಂಚಾಲಕ ಗೋಪಾಲಕೃಷ್ಣ ಹರನಹಳ್ಳಿ
ನನ್ನ 15 ವರ್ಷದ ಮಗನ ಜೊತೆ ಜಾಗ್ರಾಮ್ ವರ್ತನೆಯನ್ನು ವಿರೋಧಿಸಿದವರೆಲ್ಲರನ್ನು ಅವಮಾನಿಸಿ, ಹಲ್ಲೆ ನಡೆಸಲಾಗಿದೆ. ಬಾಲಕನ ಸಹಾಯಕ್ಕೆ ಬಂದ ಚಿಕ್ಕಮ್ಮನನ್ನೂ ಥಳಿಸಲಾಗಿದೆ ಎಂದು ಬಾಲಕನ ತಂದೆ ದೂರು ನೀಡಿದ್ದಾರೆ.
ಈ ಸಂಬಂಧ ಸೈಫೈ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಂದ್ರ ಚೌಬೆ ತನಿಖೆ ನಡೆಸುತ್ತಿದದ್ದು ,ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಸತ್ಯಪಾಲ್ ಸಿಂಗ್ ಹೇಳಿದ್ದಾರೆ ಜಾಗ್ರಾಮ್ ಯಾದವವ ತಲೆಮರೆಸಿಕೊಂಡಿದ್ದು,ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾದವ್ ಈ ಮಧ್ಯೆ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.