ಬೆಂಗಳೂರು: ನವರಾತ್ರಿ ಹಬ್ಬದ ಅಂಗವಾಗಿ ‘ಉತ್ಸವ ನವರಾತ್ರಿ ಚಲನ ಚಿತ್ರೋತ್ಸವʼ ಸುಪ್ತ ಪ್ರತಿಭೆಗಳ ಸಪ್ತ ಚಿತ್ರಗಳ ಪ್ರದರ್ಶನವನ್ನು ಕಪ್ಪಣ್ಣ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೊಸ ಪ್ರತಿಭೆಗಳತ್ತ ದೃಷ್ಠಿ ಹಾಯಿಸುತ್ತ ವಿಭಿನ್ನ ಪ್ರಯತ್ನಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು,ಅಮವಾಸ್ಯೆಯ ನಂತರ ಆರಂಭವಾಗಿ ಗಾಂಧೀ ಜಯಂತಿಯ ವರೆಗು ಸತತ ಏಳು ದಿನ ಸಿನಿಮಾಗಳ ಪ್ರದರ್ಶನವಿದ್ದು, ಪದ್ಮಶ್ರೀ ಪುರಸ್ತೃತರಾದ ಎಂ. ಎಸ್. ಸತ್ಯು ಅವರು ಈ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಲಿದ್ದಾರೆ. ಕನ್ನೇಶ್ವರ ರಾಮ, ಬೊಂಬೆಯಾಟ, e –ಮಣ್ಣು, ಭುಗಿಲು, ಪರ್ಜನ್ಯ, ಕೋಳಿ ತಾಳ್, ಫಿಸಿಕ್ಸ್ ಟೀಚರ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಬೆಂಗಳೂರಿನ ಜೆಪಿನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪ್ರತೀ ದಿನ ಸಂಜೆ 6:30ಕ್ಕೆ ಪ್ರದರ್ಶನ ಪ್ರಾರಂಭವಾಗುತ್ತದೆ. ನಾಳೆ (ಸೆಪ್ಟೆಂಬರ್ 26, ಸೋಮವಾರ) ಯಿಂದ ಅಕ್ಟೋಬರ್ 2 ವರೆಗೆ ಸಿನಿಮಾಗಳ ಪ್ರದರ್ಶನವಿರುತ್ತದೆ.